ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವೃತ್ತಿಗೆ ಸಂಬಂಧಿಸಿದಂತೆ ಅಚ್ಚರಿಯ ಸುದ್ದಿಯೊಂದನ್ನು ಕೇಳಲಿರುವಿರಿ
Published 25 ನವೆಂಬರ್ 2023, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಷ್ಟಪಟ್ಟು ದುಡಿಯುವುದರಿಂದ ಹಣ ಕೈಯಲ್ಲಿ ನಿಲ್ಲುವುದು. ಅದರಿಂದಾಗಿ ಹಣಕಾಸಿನ ವಿಚಾರದಲ್ಲಿ ನೀವು ಇನ್ನೊಂದು ಮೆಟ್ಟಿಲು ಹತ್ತುವಂತೆ ಆಗಲಿದೆ.
ವೃಷಭ
ನೂತನ ವಾಹನ ಖರೀದಿಯ ಯೋಜನೆಗೆ ತಂದೆಯಿಂದ ಒಪ್ಪಿಗೆ ಮತ್ತು ಸಹಾಯ ಸಿಗಲಿದೆ. ಉನ್ನತ ಶಿಕ್ಷಣ ಪಡೆಯುವ ನಿಮ್ಮ ಗುರಿಗೆ ಇನ್ನೂ ಹೆಚ್ಚಿನ ಪರಿಶ್ರಮ ಅಗತ್ಯವಾಗುವುದು. ನಿಮ್ಮ ಸ್ವಇಚ್ಛೆಯೇ ಅಂತಿಮವಾಗಿರಲಿ.
ಮಿಥುನ
ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಬೇಕೆಂಬ ಮಾತಿನ ಮಹತ್ವ ನಿಮಗೆ ಅನುಭವದಿಂದಾಗಿ ತಿಳಿದುಬರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ವಿಚಾರಗಳ ಅನ್ವೇಷಣೆ ಉತ್ತಮ ಫಲ ನೀಡಲಿವೆ. ನಿರುದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ.
ಕರ್ಕಾಟಕ
ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ ಸಂಬಂಧ ಮುಂದುವರಿಯಲಿದೆ. ಮನೆಯ ರಿಪೇರಿ ಕೆಲಸಗಳು ಅನಿವಾರ್ಯವಾಗುವುದು ಮತ್ತು ಅಧಿಕ ಹಣ ವ್ಯಯವಾಗುತ್ತದೆ. ಪ್ರಾಣಾಯಾಮವನ್ನು ಅಭ್ಯಾಸ ಮಾಡಿರಿ.
ಸಿಂಹ
ನಿಮ್ಮ ಸಮಸ್ಯೆಗಳಿಗೆ ಧಾರ್ಮಿಕ ಮಾರ್ಗದಲ್ಲಿ ನಡೆದರೆ ಉತ್ತರ ಸಿಗುವುದು. ಹಣಕ್ಕಿಂತ ಸ್ನೇಹ ಸಂಬಂಧಗಳು ಮುಖ್ಯವೆಂದು ಅರಿವಾಗಲಿದೆ. ಇಂದು ಅಪರೂಪದ ಸಮಾರಂಭವೊಂದಕ್ಕೆ ಆಹ್ವಾನ ಬರುವುದು.
ಕನ್ಯಾ
ಒಟ್ಟು ಕುಟುಂಬದ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪ ಬರದಂತೆ ನೋಡಿಕೊಳ್ಳುವುದು ಉತ್ತಮ. ಮಗಳ ಮದುವೆಯ ಸಲುವಾಗಿ ಆಭರಣವನ್ನು ಕೊಳ್ಳುವ ಬಗ್ಗೆ ಯೋಚಿಸಿ.
ತುಲಾ
ನಿಮ್ಮ ಬುದ್ಧಿವಂತಿಕೆಯ, ನಿಮ್ಮ ಸಾಮರ್ಥ್ಯದ ಅರಿವು ನಿಮಗಿಲ್ಲ, ಧೈರ್ಯದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುವುದು. ಸ್ನೇಹಿತರೊಂದಿಗಿನ ಹರಟೆ ಮನಸ್ಸನ್ನು ಹಗುರ ಗೊಳಿಸಲು ಕಾರಣವಾಗುವುದು.
ವೃಶ್ಚಿಕ
ಮನೆಗೆ ನೂತನ ಸಾಕು ಪ್ರಾಣಿಯ ಆಗಮನ ಮಕ್ಕಳಲ್ಲಿ ಸಂತೋಷ ಮೂಡಿಸಲಿದೆ. ಮಕ್ಕಳ ನಡುವಳಿಕೆಯಿಂದ ಅಗೌರವಕ್ಕೆ ಕಾರಣವಾಗುವಿರಿ, ಅದರಿಂದಾಗಿ ಬೇಸರವಾಗುವುದು.
ಧನು
ನಿಮ್ಮ ಸಣ್ಣ-ಪುಟ್ಟ ಮಾಹಿತಿಯಿಂದ ಸಂಸ್ಥೆಗೆ ಅನುಕೂಲವಾಗುತ್ತದೆ. ಕರ್ತವ್ಯ ನಿಷ್ಠೆಯ ಬಗ್ಗೆ ನಿಮ್ಮ ಮೇಲೆ ಆರೋಪ ಬರದಂತೆ ನಿಮ್ಮ ವ್ಯವಹಾರವಿರುವುದು ಉತ್ತಮ. ಈ ಹಿಂದೆ ತೆಗೆದುಕೊಂಡ ನಿಲುವನ್ನು ಬದಲಾಯಿಸಬೇಡಿ.
ಮಕರ
ಕಫದ ಅಥವಾ ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ. ವೈದ್ಯರ ಸಲಹೆ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಿರಿ. ವೃತ್ತಿಗೆ ಸಂಬಂಧಿಸಿದಂತೆ ಅಚ್ಚರಿಯ ಸುದ್ದಿಯೊಂದನ್ನು ಕೇಳಲಿರುವಿರಿ.
ಕುಂಭ
ಜವಾಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದು ಮನವರಿಕೆಯಾಗುವುದು. ಮಗಳ ಆಸೆಯಂತೆ ವಿದೇಶ ಪ್ರಯಾಣದ ಸಾಧ್ಯತೆ ಇರುವುದು. ಭೋಜನದ ಸಮಯದಲ್ಲಿ ವ್ಯತ್ಯಯಗಳು ಸಂಭವಿಸುವುದಾಗಿ ಕಾಣುವುದು.
ಮೀನ
ಈ ದಿನ ನಿಮ್ಮ ಸಹೋದ್ಯೋಗಿಯೊಬ್ಬರು ಅತಿ ಉತ್ತಮ ಉಪಾಯಗಳನ್ನು ನೀಡಲಿದ್ದು ಅವರ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಕೆಲಸದ ಬಾಕಿ ಹಣವು ಇಂದು ಸಂದಾಯವಾಗುವುದು.