ಬ್ಯಾಡಗಿ: ಪಟ್ಟಣದ ಎಸ್ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ 10 ದಿನ ತರಬೇತಿ ಪಡೆದ ಕರ್ನಾಟಕ ಪುರುಷರ ಕೊಕ್ಕೊ ತಂಡ ಮಂಗಳವಾರ ತುಮಕೂರಿನಲ್ಲಿ ನಡೆದ ರಾಷ್ಟ್ರಮಟ್ದದ ಸೀನಿಯರ್ ಕೊಕ್ಕೊ ಪಂದ್ಯಾವಳಿಯಲ್ಲಿ ತಮಿಳುನಾಡು ತಂಡವನ್ನು ಒಂದು ಅಂಕದಿಂದ ಪರಾಭವಗೊಳಿಸಿ ಗೆಲುವಿನ ನಗೆ ಬೀರಿತು.

ಸೋಮವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ನಿಂದ ಸೆಮಿಫೈನಲ್ಗೆ ಲಗ್ಗೆ ಇಟ್ಟ ಪುರುಷರ ಕರ್ನಾಟಕ ಕೊಕ್ಕೊ ತಂಡ ಸತತ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪುರುಷರ ಕರ್ನಾಟಕ ತಂಡ ಅಂತಿಮ ಹಣಾಹಣಿಯಲ್ಲಿ ರೋಮಾಂಚಕಾರಿ ಆಟವಾಡಿ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಕರ್ನಾಟಕ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಗೆ ಮೌನೇಶ ಭಾಜನರಾದರು. ಕೊಕ್ಕೊ ಇಂಡಿಯಾ ಮತ್ತು ಕರ್ನಾಟಕ ಅಮೆಚೂರ್ ಕೊಕ್ಕೊ ಅಸೋಸಿಯೇಶನ್ ಬೆಂಗಳೂರು ಮತ್ತು ತುಮಕೂರ ಜಿಲ್ಲಾ ಅಮೆಚೂರ್ ಕೊಕ್ಕೊ ಅಸೋಸಿಯೇಷನ್ ಪಂದ್ಯಾವಳಿ ಏರ್ಪಡಿಸಿದ್ದವು. ಕರ್ನಾಟಕ ತಂಡಕ್ಕೆ ತರಬೇತುದಾರ ಸುಜಯಕುಮಾರ ಮತ್ತು ವ್ಯವಸ್ಥಾಪಕ ಜಿತೇಂದ್ರ ಸುಣಗಾರ ಅವರು ಮಾರ್ಗದರ್ಶನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.