ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಎತ್ತರದ ಸ್ಥಾನ ತಲುಪುವ ಮಹತ್ವಾಕಾಂಕ್ಷೆ ಸಾಕಾರ
Published 30 ಡಿಸೆಂಬರ್ 2023, 23:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸೋಮಾರಿತನವೇ ನಿಮಗೆ ಶತ್ರುವಾಗಿ ಪರಿಣಾಮ ಬೀರುವುದು. ಮಕ್ಕಳ ಆಸೆಗೆ ಅಡ್ಡಗಾಲು ಹಾಕಿ ಮನಸ್ಸನ್ನು ನೋವು ಉಂಟು ಮಾಡದಿರಿ. ದೇವಿ ಕೃಪಾಕಟಾಕ್ಷದಿಂದ ಕಾರ್ಯದಲ್ಲಿ ತೊಂದರೆ ಇರುವುದಿಲ್ಲ.
ವೃಷಭ
ಇನ್ನೊಬ್ಬರಿಂದ ಹೇಳಿಸಿಕೊಂಡ ವಿಚಾರವನ್ನು ಅಗೌರವವೆಂದು ಭಾವಿಸಬೇಡಿ. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ. ಮುಂದಿನ ಯೋಜನೆಗಳ ಬಗ್ಗೆ ಈ ದಿನದಿಂದಲೇ ಕಾರ್ಯಾಚರಣೆ ಪ್ರಾರಂಭಿಸುವಿರಿ.
ಮಿಥುನ
ಸೂಕ್ಷ್ಮ ಮನಸ್ಸಿನ ನಿಮಗೆ ಹೆಚ್ಚಿನ ಜವಾಬ್ದಾರಿ ಜೊತೆಗೆ ರಹಸ್ಯ ಭೇದಿಸುವ ಹುದ್ದೆಗೆ ವರ್ಗವಾಗಲಿದೆ. ಸ್ಥಾನ ಬದಲಾವಣೆಯಿಂದ ನೆಮ್ಮದಿಯ ವಾತಾವರಣ. ತೈಲ ಉತ್ಪನ್ನ ವಸ್ತುಗಳ ಮಾರಾಟದಿಂದ ಲಾಭ.
ಕರ್ಕಾಟಕ
ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯುತ್ತದೆ. ವೈದ್ಯರ ಸಲಹೆಯಂತೆ ಧ್ಯಾನ ಮತ್ತು ಯೋಗದ ಅಭ್ಯಾಸ ಮಾಡಿಕೊಳ್ಳಿ. ಸ್ವ ಸಾಮರ್ಥ್ಯದಿಂದ ಗುರಿ ಸಾಧಿಸಿದ ಹೆಮ್ಮೆ ಲಭಿಸಲಿದೆ.
ಸಿಂಹ
ಸ್ವಂತ ಹೂಡಿಕೆಯಿಂದ ಧನಾರ್ಜನೆಯಲ್ಲಿ ಸಮತೋಲನ ಸಾಧಿಸಬಹುದು. ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ಹಿನ್ನಡೆಯ ಅನುಭವ ತೋರಿಬರಲಿದೆ. ಕ್ರೀಡಾಪಟುಗಳಿಗೆ ಅದೃಷ್ಟದ ಜಯ ಸಿಗಲಿದೆ.
ಕನ್ಯಾ
ಎತ್ತರದ ಸ್ಥಾನ ತಲುಪಬೇಕೆಂಬ ನಿಮ್ಮ ಮಹತ್ವಾಕಾಂಕ್ಷೆ ಸಾಕಾರವಾಗುವ ಪ್ರಸಂಗ ನಡೆಯಲಿದೆ. ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ. ಹತ್ತಿ ಬೆಳೆಗಾರರಿಗೆ ಉತ್ತಮ ಲಾಭ ಪಡೆಯುವಂತಾಗಲಿದೆ.
ತುಲಾ
ಏಕಕಾಲದಲ್ಲಿ ಸಾಕಷ್ಟು ಕೆಲಸಗಳನ್ನು ಗಮನಿಸಬೇಕಾದ ಅನಿವಾರ್ಯತೆ ಎದುರಾಗುವುದು. ಸಿಹಿ ತಿಂಡಿಗಳ ತಯಾರಕರಿಗೆ ಬೇಡಿಕೆ ಹೆಚ್ಚುವುದು. ಔಷಧಿ ವ್ಯಾಪಾರಿಗಳಿಗೆ ಇಂದು ಅಧಿಕ ಲಾಭ ಉಂಟಾಗುವುದು.
ವೃಶ್ಚಿಕ
ಕೆಲವು ದಿನಗಳಿಂದ ಮುಂದೂಡಿದ್ದ ವಿದೇಶ ಪ್ರಯಾಣವನ್ನು ಮತ್ತೆ ಕೈಗೊಳ್ಳುವ ಬಗ್ಗೆ ಯೋಚನೆ ಬರುವುದು. ವಿರೋಧಿಗಳು ನಿಮ್ಮನ್ನು ಏನೂ ಮಾಡಲಾರರು. ವಸ್ತ್ರ ವ್ಯಾಪಾರಿಗಳಿಗೆ ಈ ದಿನ ಉತ್ತಮ ವ್ಯಾಪಾರ ಇರಲಿದೆ.
ಧನು
ಸ್ನೇಹಿತರೊಂದಿಗಿನ ಪ್ರವಾಸ ಮುಂದೂಡುವುದು ಉತ್ತಮವೆನಿಸಲಿದೆ. ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ತಂತ್ರಜ್ಞಾನದ ವಿಚಾರದಲ್ಲಿ ಸಿದ್ಧ ಹಸ್ತರಾಗುವಿರಿ.
ಮಕರ
ಕುಟುಂಬದ ಗೊಂದಲವನ್ನು ಪರಿಹರಿಸುವ ಹೊಣೆಗಾರಿಕೆಯನ್ನು ಸ್ವಪ್ರೇರಣೆಯಿಂದ ನೀವು ತೆಗೆದುಕೊಳ್ಳುವುದು ಸರಿಯಲ್ಲ. ನಿಮ್ಮ ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಳ್ಳುವರು ಜಾಗೃತರಾಗಿರಿ.
ಕುಂಭ
ಕೆಲಸದ ನಿಮಿತ್ತ ದೂರ ಪ್ರಯಾಣ ಉಚಿತವಲ್ಲ, ಅನಿವಾರ್ಯವಾದಲ್ಲಿ ಸ್ನೇಹಿತರೊಂದಿಗೆ ಪ್ರಯಾಣ ಕೈಗೊಳ್ಳಿರಿ. ಕಾರ್ಯ ನಿಮಿತ್ತವಾಗಿ ಅತ್ತೆ-ಸೊಸೆಯಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ ಇರಲಿ.
ಮೀನ
ಸಂಘ ಸಂಸ್ಥೆಯಲ್ಲಿ ನಿಮ್ಮ ಜವಾಬ್ದಾರಿಯೂ ಈ ದಿನ ಹೆಚ್ಚಲಿದೆ. ನಿಮ್ಮಿಂದ ನಡೆಯದೇ ಇರುವ ತಪ್ಪುಗಳ ಅಪವಾದವನ್ನು ನೀವು ಹೊರಬೇಕಾಗಬಹುದು. ಬಣ್ಣ ಮಾರಾಟಗಾರರಿಗೆ ಉತ್ತಮ ವ್ಯಾಪಾರವಿದೆ.