ಭಾನುವಾರ, 6 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರಿಗೆ ಆರೋಗ್ಯದಲ್ಲಿ ಗಮನವಿರಲಿ
Published 6 ಜುಲೈ 2025, 0:28 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಕ್ಕಳಿಗೆ ಜೀವನದ ಪಾಠ ಹೇಳುವಿರಿ. ಜೀವನೋಪಾಯಕ್ಕೆ ಹಲವಾರು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆಯಾಗುತ್ತದೆ.
ವೃಷಭ
ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ನಿಮ್ಮಲ್ಲಿದೆ. ಇದರಿಂದ ಸುಲಭವಾಗಿ ಕೆಲಸ ಪೂರೈಸುವಿರಿ. ತಂದೆಯ ಅಭಿಪ್ರಾಯಗಳಿಗೆ ಬೆಲೆ ಕೊಡಿ. ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸ್ಥಳ ಹುಡುಕಾಟ ಆರಂಭಿಸುವಿರಿ.
ಮಿಥುನ
ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯವಾಗುತ್ತದೆ. ತಂಗಿಗಾಗಿ ಖರ್ಚು ಮಾಡಬೇಕಾದ ಸಂದರ್ಭ ಬರುವುದು. ಧರ್ಮ-ಕರ್ಮಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕಬ್ಬಿಣ ಸಿಮೆಂಟ್ ವ್ಯಾಪಾರಿಗಳಿಗೆ ಸಾಧಾರಣ ಲಾಭ.
ಕರ್ಕಾಟಕ
ವೃತ್ತಿ ಜೀವನವನ್ನು ಗಂಭೀರವಾಗಿ ಪರಿಗಣಿಸುವಿರಿ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ನಿಮಗೆ ಹೂಡಿಕೆಯಿಂದ ಅಧಿಕ ಲಾಭವು ಬಂದಿರುವ ಸುದ್ದಿಯನ್ನು ತಿಳಿದು ಅತೀವ ಸಂತೋಷಗೊಳ್ಳುವಿರಿ.
ಸಿಂಹ
ಮಗನ ಅಭಿವೃದ್ಧಿ ನೋಡಿ ಸಂತೋಷವಾಗುತ್ತದೆ. ಹಣದ ಅಡಚಣೆ ಇರುವುದಿಲ್ಲ. ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಧ್ಯಯನ ಅಗತ್ಯ.
ಕನ್ಯಾ
ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯ ಹೊಂದುವಿರಿ. ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸಿಕೊಡಲು ಅಣ್ಣನ ಸಹಾಯ ಕೇಳಿದರೆ ಶುಭವಾಗುತ್ತದೆ. ಮನೆ ದೇವರಿಗೆ ಹರಕೆ ಸಲ್ಲಿಸುವ ಬಗ್ಗೆ ಯೋಚಿಸಿ.
ತುಲಾ
ಮಗಳಿಂದ ಶುಭ ಸುದ್ದಿಯೊಂದನ್ನು ತಿಳಿಯುವಿರಿ. ನಿಮ್ಮ ಆಲಸ್ಯತನ ನಿಮ್ಮ ಕುಟುಂಬದ ಅಭಿವೃದ್ಧಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಉತ್ಸಾಹಭರಿತರಾಗಿರಿ. ನಿಮ್ಮ ರಾಜಕೀಯ ಭವಿಷ್ಯಕ್ಕೆ ಮೋಡಕವಿದಂತೆ ಆಗುತ್ತದೆ.
ವೃಶ್ಚಿಕ
ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಅವರೊಂದಿಗಿನ ಸಮಸ್ಯೆಗಳನ್ನು ಸಂಧಾನದಿಂದ ಬಗೆಹರಿಸಿಕೊಳ್ಳಿ. ಜಮೀನು ಮತ್ತು ಅದರ ಕೆಲಸಗಳನ್ನು ನೋಡಿಕೊಳ್ಳಲು ಆಳನ್ನು ಗೊತ್ತು ಮಾಡುವಿರಿ.
ಧನು
ಮಹಿಳೆಯರಿಗೆ ಋಣಾತ್ಮಕ ಚಿಂತನೆಯು ಆರೋಗ್ಯವನ್ನು ಹಾಳು ಮಾಡುತ್ತದೆ. ಮನೆಯಲ್ಲಿ ಶಾಂತಿ ಹೋಮ ನಡೆಸುವ ಕುರಿತು ಚರ್ಚೆ ನಡೆಯುತ್ತದೆ.ವೃತ್ತಿಯಲ್ಲಿ ಅನುಭವ ಹೊಂದಿದವರಿಂದ ಬೈಗುಳ ಕೇಳ ಬೇಕಾಗುವುದು.
ಮಕರ
ಸದಾ ತಾಳ್ಮೆಯಿಂದ ವ್ಯವಹರಿಸಿ. ವಿವಾದಗಳಿಂದ ದೂರ ಉಳಿಯಿರಿ. ವೈದ್ಯರು ನೀಡಿದ ಸಲಹೆಯನ್ನು ಚಾಚೂ ತಪ್ಪದೆ ಆಚರಿಸಿ. ಮೋಸ ಹೋಗುವ ಸಾಧ್ಯತೆಯಿದೆ ಜಾಗ್ರತೆವಹಿಸಿ. ಪಾಲಕರಾಗುವ ಸುದ್ದಿ ತಿಳಿದು ಅತೀವ ಸಂತಸ.
ಕುಂಭ
ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿರುವ ನಿಮಗೆ, ನಿಮ್ಮ ಹಲವಾರು ಕನಸುಗಳು ಈಡೇರುವ ಅವಕಾಶ ಅಪರಿಚಿತ ವ್ಯಕ್ತಿ ತೋರುವರು. ತೈಲ ಲೇಪನ ಮಾಡುವುದರಿಂದ ಕಾಲು ನೋವು ನಿವಾರಣೆಯಾಗುವುದು.
ಮೀನ
ವಿವಾಹದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ರಸಗೊಬ್ಬರ,ಕೀಟ ನಾಶಕಗಳನ್ನು ವ್ಯಾಪಾರಿಗಳಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ. ಆರೋಗ್ಯದಲ್ಲಿ ಗಮನವಿರಲಿ.
ADVERTISEMENT
ADVERTISEMENT