ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ರೀತಿಯಲ್ಲಿ ಹೆಚ್ಚು ದೀರ್ಘವಾಗಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ ಎಂದು 14 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದ 19 ವರ್ಷದೊಳಗಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 78 ಎಸೆತಗಳಲ್ಲಿ 143 ರನ್ ಗಳಿಸಿ ಅಬ್ಬರಿಸಿದರು.

ಪರಿಣಾಮ ನಾಲ್ಕನೇ ಏಕದಿನ ಪಂದ್ಯವನ್ನು 55 ರನ್ ಅಂತರದಿಂದ ಗೆದ್ದುಕೊಂಡ ಭಾರತ ಸರಣಿಯನ್ನು 3-1ರ ಅಂತರದಿಂದ ವಶಪಡಿಸಿಕೊಂಡಿತು.

ಸೂರ್ಯವಂಶಿ ಅವರ ಶತಕವು ಕೇವಲ 52 ಎಸೆತಗಳಲ್ಲಿ ದಾಖಲಾಯಿತು. ಇದು ಯುವ ಏಕದಿನ ಕ್ರಿಕೆಟ್ನ ಅತಿ ವೇಗದ ಶತಕವಾಗಿದೆ. ಹಾಗೆಯೇ ಯುವ ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ ಎನಿಸಿದರು.

'ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ವೈಭವ್, ನಾನು ಶುಭಮನ್ ಗಿಲ್ ಅವರ ಆಟವನ್ನು ನೋಡಿದ್ದೇನೆ. ಅವರು ನಿರಾತಂಕವಾಗಿ ಆಡುವುದನ್ನು ನೋಡಿ ಸ್ಫೂರ್ತಿ ಪಡೆದಿದ್ದೇನೆ. ಶತಕ ಹಾಗೂ ದ್ವಿಶತಕ ಗಳಿಸಿದ ಬಳಿಕವೂ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಲಿಲ್ಲ. ತಂಡವನ್ನು ಮುನ್ನಡೆಸಿದರು. ಭವಿಷ್ಯದಲ್ಲಿ ಗಿಲ್ ಅವರನ್ನು ಅನುಕರಿಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

'ಮುಂದಿನ ಪಂದ್ಯದಲ್ಲಿ 200 ರನ್ ಗಳಿಸಲು ಯತ್ನಿಸುತ್ತೇನೆ. ಸಂಪೂರ್ಣ 50 ಓವರ್ ಆಡಲು ಯತ್ನಿಸುತ್ತೇನೆ. ನಾನು ಹೆಚ್ಚು ರನ್ ಗಳಿಸಿದ್ದಷ್ಟು ತಂಡಕ್ಕೆ ಉತ್ತಮವಾಗಿರುತ್ತದೆ. ಅದರತ್ತ ಗಮನ ಹರಿಸುತ್ತೇನೆ' ಎಂದು ತಿಳಿಸಿದ್ದಾರೆ.

'ನಾನು ಇನ್ನು ಹೆಚ್ಚು ಹೊತ್ತು ಆಡಬಹುದಿತ್ತು. ಔಟ್ ಆದಾಗ 20 ಓವರ್ಗಳು ಬಾಕಿ ಇದ್ದವು. ಕೆಟ್ಟ ಹೊಡೆತದಿಂದ ವಿಕೆಟ್ ಒಪ್ಪಿಸಿದೆ' ಎಂದು ಹೇಳಿದ್ದಾರೆ.
.IND vs ENG U19: ಸೂರ್ಯವಂಶಿ ಮತ್ತೆ ‘ವೈಭವ’.IND vs ENG: 269+161 - ಹಲವು ದಾಖಲೆಗಳನ್ನು ಬರೆದ ಗಿಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.