ಎಜ್ಬಾಸ್ಟನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ದ್ವಿಶತಕದ (269) ಸಾಧನೆ ಮಾಡಿರುವ ಭಾರತದ ನಾಯಕ ಶುಭಮನ್ ಗಿಲ್ ಎರಡನೇ ಇನಿಂಗ್ಸ್ನಲ್ಲಿ ಮಗದೊಂದು ಶತಕ (161) ಗಳಿಸಿದ್ದಾರೆ. ಆ ಮೂಲಕ ದಶಕಗಳಷ್ಟು ಹಳೆಯದಾದ ಅನೇಕ ದಾಖಲೆಗಳನ್ನು ಮುರಿದಿದ್ದಾರೆ.

ದ್ವಿಶತಕ ಹಾಗೂ ಶತಕ ಸಾಧನೆ...

ಇದು ಟೆಸ್ಟ್ ಕ್ರಿಕೆಟ್ನಲ್ಲಿ ಗಿಲ್ ದಾಖಲಿಸಿದ ಎಂಟನೇ ಶತಕವಾಗಿದೆ. ಅಲ್ಲದೆ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಭಾರತದ ಎರಡನೇ ಆಟಗಾರ ಮತ್ತು ವಿಶ್ವದ ಒಂಬತ್ತನೇ ಆಟಗಾರ ಎಂಬ ಹಿರಿಮೆ ಅವರದಾಯಿತು. ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ.

430 - ಅತಿ ಹೆಚ್ಚು ರನ್

ಈ ಪಂದ್ಯದಲ್ಲಿ ಗಿಲ್ ಒಟ್ಟು 430 ರನ್ ಗಳಿಸಿದ್ದಾರೆ. ಆ ಮೂಲಕ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಈ ಹಿಂದೆ 1990ರಲ್ಲಿ ಭಾರತದ ವಿರುದ್ಧ ಗ್ರಾಹಂ ಗೂಚ್ ಒಟ್ಟು 456 ರನ್ ಗಳಿಸಿದ್ದರು. ಇನ್ನು ಭಾರತೀಯರ ಬ್ಯಾಟರ್ಗಳ ಸಾಲಿನಲ್ಲಿ ಗಾವಸ್ಕರ್ ಅವರ ದಾಖಲೆಯನ್ನೂ ಗಿಲ್ ಮುರಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 1971ರಲ್ಲಿ ಗಾವಸ್ಕರ್ 344 ರನ್ (124 ಮತ್ತು 220 ರನ್) ಬಾರಿಸಿದ್ದರು.

ಎರಡೂ ಇನಿಂಗ್ಸ್ನಲ್ಲಿ 150+ ಸಾಧನೆ...

ಗಿಲ್ ಅವರು ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ. 1980ರಲ್ಲಿ ಪಾಕಿಸ್ತಾನ ವಿರುದ್ಧ ಅಲನ್ ಬಾರ್ಡರ್ 150* ಹಾಗೂ 153 ರನ್ ಗಳಿಸಿದ್ದರು.

ವಿರಾಟ್ ಸಾಲಿನಲ್ಲಿ ಗಿಲ್...

ಸುನಿಲ್ ಗವಾಸ್ಕರ್ ಹಾಗೂ ವಿರಾಟ್ ಕೊಹ್ಲಿ ಅವರ ಬಳಿಕ, ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಶತಕ ಗಳಿಸಿದ ಭಾರತೀಯ ನಾಯಕ ಎನಿಸಿದ್ದಾರೆ. 1978ರಲ್ಲಿ ಗವಾಸ್ಕರ್ ವೆಸ್ಟ್ ಇಂಡೀಸ್ (107, 182) ವಿರುದ್ಧ ಮತ್ತು 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ (115, 141) ಈ ಸಾಧನೆ ಮಾಡಿದ್ದರು. ಕೊಹ್ಲಿ ಬಳಿಕ ನಾಯಕನಾಗಿ ಮೊದಲ ಎರಡು ಟೆಸ್ಟ್ಗಳಲ್ಲಿ ಮೂರು ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹಿರಿಮೆಯೂ ಗಿಲ್ ಪಾಲಾಯಿತು.

ಇಂಗ್ಲೆಂಡ್ ನೆಲದಲ್ಲಿ ರಿಷಭ್ ಪಂತ್ ಬಳಿಕ ಎರಡೂ ಇನಿಂಗ್ಸ್ಗಳಲ್ಲಿ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೂ ಗಿಲ್ ಭಾಜನರಾಗಿದ್ದಾರೆ.

ಒಟ್ಟು 1,014 ರನ್, ಭಾರತದ ಶ್ರೇಷ್ಠ ಸಾಧನೆ

ಮೊದಲ ಇನಿಂಗ್ಸ್ನಲ್ಲಿ 587 ಹಾಗೂ ಎರಡನೇ ಇನಿಂಗ್ಸ್ನಲ್ಲಿ 407 ಡಿ. ಸೇರಿದಂತೆ ಈ ಪಂದ್ಯದಲ್ಲಿ ಭಾರತ ಒಟ್ಟು 1,014 ರನ್ ಪೇರಿಸಿತು. ಇದು ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಟ್ಟು 916 ರನ್ ಗಳಿಸಿತ್ತು.

ಈವರೆಗೆ ಟೆಸ್ಟ್ ಪಂದ್ಯದಲ್ಲಿ ಆರು ಬಾರಿ ಮಾತ್ರ ತಂಡವೊಂದು 1,000ಕ್ಕೂ ರನ್ ಕಲೆ ಹಾಕಿದೆ. ಈ ಪಟ್ಟಿಯಲ್ಲೀಗ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಗಿಲ್-ಜಡೇಜ ಜೊತೆಯಾಟ...

ಗಿಲ್ ಹಾಗೂ ರವೀಂದ್ರ ಜಡೇಜ ಮೊದಲ ಇನಿಂಗ್ಸ್ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್ನಲ್ಲಿ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನಿಸಿದೆ.

ಎಜ್ಬಾಸ್ಟನ್ ಟೆಸ್ಟ್ನಲ್ಲಿ ನಾಲ್ಕು ಶತಕಗಳ ಜೊತೆಯಾದಲ್ಲಿ ಗಿಲ್ ಭಾಗಿಯಾಗಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ಒಟ್ಟಾರೆಯಾಗಿ ವಿಶ್ವದ ಐದನೇ ಬ್ಯಾಟರ್ ಎನಿಸಿದ್ದಾರೆ.

ಎರಡೇ ಪಂದ್ಯಗಳಲ್ಲಿ 585 ರನ್...

ಇಂಗ್ಲೆಂಡ್ ಪ್ರವಾಸದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲೇ ಗಿಲ್ ಒಟ್ಟು 585 ರನ್ ಕಲೆ ಹಾಕಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ 147 ಹಾಗೂ 8 ರನ್ ಗಳಿಸಿದ್ದರು.

24 ಸಿಕ್ಸರ್, ಪಂತ್ ದಾಖಲೆ...

ಇದು ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಗಳಿಸಿರುವ ಒಟ್ಟು ಸಿಕ್ಸರ್ಗಳ ಸಂಖ್ಯೆ. ಯಾವುದೇ ದೇಶದಲ್ಲಿ ಟೆಸ್ಟ್ನಲ್ಲಿ ವಿದೇಶದ ಬ್ಯಾಟರ್ ಗಳಿಸಿದ ಅತಿ ಹೆಚ್ಚು ಸಿಕ್ಸರ್ಗಳ ಸಾಧನೆ ಇದಾಗಿದೆ. ದಕ್ಷಿಣ ಆಫ್ರಿಕಾದ ನೆಲದಲ್ಲಿ ಬೆನ್ ಸ್ಟೋಕ್ಸ್ ಈವರೆಗೆ 21 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.

ಭಾರತದ ಗೆಲುವಿಗೆ ಇನ್ನು 7 ಮೆಟ್ಟಿಲು...

ಎಜ್ಬಾಸ್ಟನ್ ಟೆಸ್ಟ್ ಪಂದ್ಯವು ಭಾರತದ ಹಿಡಿತದಲ್ಲಿದೆ. ಪಂದ್ಯ ಗೆಲ್ಲಲು ಕೊನೆಯ ದಿನದಾಟದಲ್ಲಿ ಇನ್ನು ಏಳು ವಿಕೆಟ್ಗಳನ್ನು ಗಳಿಸಬೇಕಿದೆ. ಅತ್ತ 608 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ನಾಲ್ಕನೇ ದಿನದಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ. ಅಲ್ಲದೆ ಗೆಲುವಿಗೆ ಇನ್ನೂ 536 ರನ್ ಬೇಕಿದೆ.
.IND vs ENG | ಶುಭಮನ್ ಗಿಲ್ ಮತ್ತೆ ಸೊಬಗಿನ ಶತಕ, ದಾಖಲೆ.IND vs ENG U19: ಸೂರ್ಯವಂಶಿ ಮತ್ತೆ ‘ವೈಭವ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.