ಬರ್ಮಿಂಗ್ಹ್ಯಾಮ್: ಯುವರಾಜ ಶುಭಮನ್ ಗಿಲ್ ಮತ್ತೊಂದು ಅಮೋಘ ಶತಕ ಬಾರಿಸಿ ಕ್ರಿಕೆಟ್ ಜಗತ್ತಿನ ಗಮನ ತಮ್ಮತ್ತ ಸೆಳೆದರು. ಈ ತಾರಾ ಆಟಗಾರ ಮುಂದೇನು ಸಾಧಿಸಲಿದ್ದಾರೆ ಎಂದು ಅಚ್ಚರಿಯಿಂದ ಎದುರು ನೋಡುವಂತೆ ಅವರು ಶನಿವಾರ ಅಸಾಧಾರಣ ಇನಿಂಗ್ಸ್ ಕಟ್ಟಿದರು.

ಎಜ್ಬಾಸ್ಟನ್ನಲ್ಲಿ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಜೀವನಶ್ರೇಷ್ಠ 269 ರನ್ಗಳ ದೊಡ್ಡ ಇನಿಂಗ್ಸ್ ಕಟ್ಟಿದ್ದ ಭಾರತ ತಂಡದ ನಾಯಕ ಎರಡನೇ ಇನಿಂಗ್ಸ್ನಲ್ಲಿ 162 ಎಸೆತಗಳಲ್ಲಿ 161 ರನ್ ಬಾರಿಸಿದರು. ಅವರ ಆಟದ ಬಲದಿಂದ ಭಾರತ ತಂಡವು 6 ವಿಕೆಟ್ಗಳಿಗೆ 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಎದುರಾಳಿ ತಂಡದ ಗೆಲುವಿಗೆ 608 ರನ್ಗಳ ಕಠಿಣ ಗುರಿ ನೀಡಿದೆ. ಇದಕ್ಕೆ ಉತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 72 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಭಾರತದ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ ಎಂದು ಬಿಂಬಿತರಾಗಿರುವ ಗಿಲ್ ಈಗ ರನ್ಗಳ ಗುಡ್ಡೆಹಾಕಿ ದಾಖಲೆಗಳನ್ನು ಬರೆಯುತ್ತಿದ್ದಾರೆ. ಇದು ಟೆಸ್ಟ್ ಪಂದ್ಯಗಳಲ್ಲಿ ಅವರ ಎಂಟನೇ ಶತಕ. ಈ ಪಂದ್ಯದಲ್ಲಿ ಎರಡನೆಯದ್ದು. ಈ ಹಾದಿಯಲ್ಲಿ ಅವರ ದಶಕಗಳಷ್ಟು ಹಳೆಯ ದಾಖಲೆಗಳನ್ನು ಮುರಿದರು.

ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಭಾರತದ ಎರಡನೇ ಆಟಗಾರ ಮತ್ತು ವಿಶ್ವದ ಒಂಬತ್ತನೇ ಆಟಗಾರ ಎಂಬ ಹಿರಿಮೆ ಅವರದಾಯಿತು. ಹಾಲಿ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿರುವ ಸುನಿಲ್ ಗಾವಸ್ಕರ್ ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ.

ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗಾವಸ್ಕರ್ ಅವರ ದಾಖಲೆಯನ್ನೂ ಅವರು ಮುರಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 1971ರ ಏಪ್ರಿಲ್ನಲ್ಲಿ ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಪಂದ್ಯದಲ್ಲಿ ಗಾವಸ್ಕರ್ 344 ರನ್ (124 ಮತ್ತು 220 ರನ್) ಬಾರಿಸಿದ್ದರು. ಈಗ ಗಿಲ್ (430 ರನ್) ಆ ದಾಖಲೆ ಮೀರಿದ್ದಾರೆ.

ವಿರಾಟ್ ಕೊಹ್ಲಿ ಅವರ ಬಳಿಕ, ನಾಯಕನಾಗಿ ಮೊದಲ ಎರಡು ಟೆಸ್ಟ್ಗಳಲ್ಲಿ ಮೂರು ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹಿರಿಮೆಯೂ ಗಿಲ್ ಪಾಲಾಯಿತು. ಈ ಎಲ್ಲವೂ ಕೇವಲ 25ರ ವಯಸ್ಸಿನಲ್ಲಿ. ತಮ್ಮ ವೃತ್ತಿಜೀವನದ ಉತ್ತುಂಗ ಕಾಣುವ ಮೊದಲೇ ಈ ಸಾಧನೆಗಳು ದಾಖಲಾಗಿವೆ.

ಕ್ರೀಸಿಗಿಳಿದ ಕ್ಷಣದಿಂದಲೇ ಅವರು ಕೌಶಲಯುತ ಆಟವಾಡಿದರು. ಮೊದಲ ಟೆಸ್ಟ್ ಹಿನ್ನಡೆಯ ನಂತರ ಮತ್ತೆ ಎಡವಬಾರದು ಎಂಬ ದೃಢನಿಶ್ಚಯ ಅವರಲ್ಲಿದ್ದಂತೆ ಕಂಡಿತು. ಲಯಬದ್ಧ ಆಟದ ಜೊತೆಗೆ ಅವರು ವ್ಯವಸ್ಥಿತವಾಗಿ ಇಂಗ್ಲೆಂಡ್ ದಾಳಿಯನ್ನು ಮಟ್ಟಹಾಕಿದರು. ಉಪನಾಯಕ ಪಂತ್ ಕೂಡ ಮಿಂಚಿನ ಆಟವಾಡಿ 58 ಎಸೆತಗಳಲ್ಲಿ 65 ರನ್ ಸಿಡಿಸಿದರು. ಪಂತ್ ನಿರ್ಗಮನದ ಬಳಿಕ ರವೀಂದ್ರ ಜಡೇಜ (ಔಟಾಗದೇ 69; 118ಎ) ತಾಳ್ಮೆಯ ಆಟವಾಡಿ, ಗಿಲ್ ಅವರಿಗೆ ಸಾಥ್ ನೀಡಿದರು. ಅವರಿಬ್ಬರು ಐದನೇ ವಿಕೆಟ್ ಜೊತೆಯಾಟದಲ್ಲಿ 175 (208 ಎಸೆತ) ರನ್ ಸೇರಿಸಿದರು.

ವೇಗವಾಗಿ ರನ್ ಗಳಿಸಿ ಇಂಗ್ಲೆಂಡ್ಗೆ ಸ್ಪರ್ಧಾತ್ಮಕ ಗುರಿಯನ್ನು ನಿಗದಿ ಪಡಿಸುವುದು ಗಿಲ್ ಅವರ ಉದ್ದೇಶದಂತೆ ಕಂಡಿತು. ಬ್ರೆಂಡನ್ ಮೆಕ್ಕಲಂ ಅವರ ತರಬೇತಿಯಲ್ಲಿರುವ ಇಂಗ್ಲೆಂಡ್ ತಂಡ ಮೊತ್ತ ಬೆನ್ನಟ್ಟುವಲ್ಲಿ ಹೊಂದಿರುವ ಪರಿಣತಿ ತಿಳಿದೇ ಅವರು ದೊಡ್ಡ ಇನಿಂಗ್ಸ್ ಆಡಿದರು. ಆದರೆ ಮನಬಂದಂತೆ ಬ್ಯಾಟ್ ಬೀಸಲಿಲ್ಲ. ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟವಾಡಿದರು. ಬೆನ್ ಸ್ಟೋಕ್ಸ್ ಅವರ ಫೀಲ್ಡಿಂಗ್ ಸಂಯೋಜನೆ ಅಣಕಿಸುವಂತೆ ಆಡಿದರು. ಗಿಲ್ ಕವರ್ ಡ್ರೈವ್, ಪುಲ್ ಹೊಡೆತಗಳು, ಲಾಫ್ಟೆಡ್ ಡ್ರೈವ್ಗಳು ಬೌಲರ್ಗಳ ಲಯ ತಪ್ಪಿಸಿದವು.

ಆಕಾಶ್, ಸಿರಾಜ್ ಮಿಂಚು: ಬೃಹತ್ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ವೇಗಿಗಳಾದ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಆರಂಭದಲ್ಲೇ ಪೆಟ್ಟು ನೀಡಿದರು. ಜ್ಯಾಕ್ ಕ್ರಾಲಿ ಅವರನ್ನು ಖಾತೆ ತೆರೆಯಲು ಸಿರಾಜ್ ಅವಕಾಶ ನೀಡಲಿಲ್ಲ. ಬೆನ್ ಡಕೆಟ್ (25) ಮತ್ತು ಜೋ ರೂಟ್ (6) ಅವರ ವಿಕೆಟ್ ಆಕಾಶ್ ಪಾಲಾದವು. ಓಲಿ ಪೋಪ್ (ಔಟಾಗದೇ 24) ಮತ್ತು ಹ್ಯಾರಿ ಬ್ರೂಕ್ (ಔಟಾಗದೇ 15) ಅವರು ಕೊನೆಯ ದಿನಕ್ಕೆ ಆಟವನ್ನು ಉಳಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.