ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್ ದಾಖಲಿಸಿದ ಎಂಟನೇ ಶತಕವಾಗಿದೆ. ಅಲ್ಲದೆ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಭಾರತದ ಎರಡನೇ ಆಟಗಾರ ಮತ್ತು ವಿಶ್ವದ ಒಂಬತ್ತನೇ ಆಟಗಾರ ಎಂಬ ಹಿರಿಮೆ ಅವರದಾಯಿತು.
(ರಾಯಿಟರ್ಸ್ ಚಿತ್ರ)
ಈ ಪಂದ್ಯದಲ್ಲಿ ಗಿಲ್ ಒಟ್ಟು 430 ರನ್ ಗಳಿಸಿದ್ದಾರೆ. ಆ ಮೂಲಕ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ.
(ರಾಯಿಟರ್ಸ್ ಚಿತ್ರ)
ಗಿಲ್ ಅವರು ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ.
(ರಾಯಿಟರ್ಸ್ ಚಿತ್ರ)
ಸುನಿಲ್ ಗವಾಸ್ಕರ್ ಹಾಗೂ ವಿರಾಟ್ ಕೊಹ್ಲಿ ಅವರ ಬಳಿಕ, ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಭಾರತೀಯ ನಾಯಕ ಎನಿಸಿದ್ದಾರೆ.
(ರಾಯಿಟರ್ಸ್ ಚಿತ್ರ)
ಇಂಗ್ಲೆಂಡ್ ನೆಲದಲ್ಲಿ ರಿಷಭ್ ಪಂತ್ ಬಳಿಕ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೂ ಗಿಲ್ ಭಾಜನರಾಗಿದ್ದಾರೆ.
(ರಾಯಿಟರ್ಸ್ ಚಿತ್ರ)
ಗಿಲ್ ಹಾಗೂ ರವೀಂದ್ರ ಜಡೇಜ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನಿಸಿದೆ.
(ರಾಯಿಟರ್ಸ್ ಚಿತ್ರ)
ಇಂಗ್ಲೆಂಡ್ ಪ್ರವಾಸದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲೇ ಗಿಲ್ ಒಟ್ಟು 585 ರನ್ ಕಲೆ ಹಾಕಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ 147 ಹಾಗೂ 8 ರನ್ ಗಳಿಸಿದ್ದರು.
(ರಾಯಿಟರ್ಸ್ ಚಿತ್ರ)
ಮೊದಲ ಇನಿಂಗ್ಸ್‌ನಲ್ಲಿ 587 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 407 ಡಿ. ಸೇರಿದಂತೆ ಈ ಪಂದ್ಯದಲ್ಲಿ ಭಾರತ ಒಟ್ಟು 1,014 ರನ್ ಪೇರಿಸಿತು. ಇದು ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ.
(ರಾಯಿಟರ್ಸ್ ಚಿತ್ರ)
ಶುಭಮನ್ ಗಿಲ್ ಅವರಿಗೆ ಇಂಗ್ಲೆಂಡ್ ಆಟಗಾರರಿಂದ ಅಭಿನಂದನೆ
(ರಾಯಿಟರ್ಸ್ ಚಿತ್ರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.