ದಿನ ಭವಿಷ್ಯ | ಈ ರಾಶಿಯವರು ವಿವಿಧ ಸವಾಲುಗಳನ್ನು ಎದುರಿಸಬೇಕಾಗಬಹುದು
Published 8 ಡಿಸೆಂಬರ್ 2025, 22:44 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನಿರೀಕ್ಷಿತವಾಗಿ ಮನಸ್ಸಿನಲ್ಲಿದ್ದಂಥ ಅಸಮಾಧಾನಗಳೆಲ್ಲವೂ ಮಾತಿನಲ್ಲಿ ಹೊರಬರಲಿವೆ. ಪ್ರಾರ್ಥನೆಯು ದೇವರನ್ನು ತಲುಪಿತು ಎನ್ನುವಂತೆ ಅಭೀಷ್ಟಗಳು ನೆರವೇರಲಿವೆ. ಮರೆವಿನಿಂದ ಕಷ್ಟಗಳಾಗುವುದು.
08 ಡಿಸೆಂಬರ್ 2025, 22:44 IST
ವೃಷಭ
ಯಾವುದೇ ವಿಷಯವನ್ನಾಗಲಿ ಅಧಿಕಾರಿಗಳಿಂದ ಒಂದಕ್ಕಿಂತ ಹೆಚ್ಚು ಬಾರಿ ಹೇಳಿಸಿಕೊಳ್ಳಬೇಡಿ. ತಿಳಿಯದೆ ಆದ ತಪ್ಪುಗಳಿಗೆ ಜೀವನ ಪರ್ಯಂತ ನೋವು ಅನುಭವಿಸಲಿದ್ದೀರಿ. ನಂಜು ನಿವಾರಕ ಆಹಾರವನ್ನು ಸೇವಿಸಿ.
08 ಡಿಸೆಂಬರ್ 2025, 22:44 IST
ಮಿಥುನ
ಸಮಾರಂಭ ಒಂದರಲ್ಲಿ ಬಂದಂಥ ಉಡುಗೊರೆಗಳನ್ನು ನೋಡುವ ಸಾಧ್ಯತೆ ಇದೆ. ಉತ್ತಮ ಪ್ರತಿಜ್ಞೆಗಳೊಂದಿಗೆ ಶುರುವಾದ ಕಾರ್ಯ ಶುಭಫಲ ನೀಡುವುದು. ಕೃಷಿ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಬಹುದು.
08 ಡಿಸೆಂಬರ್ 2025, 22:44 IST
ಕರ್ಕಾಟಕ
ಬದಲಾವಣೆ ಅಲೆಯನ್ನು ನಿರೀಕ್ಷಿಸುತ್ತಿರುವ ನೀವು ಸಣ್ಣ ಸಣ್ಣ ವಿಷಯಗಳಲ್ಲಿ ನೀತಿಗಳನ್ನು ಅಳವಡಿಸಿಕೊಳ್ಳುವಿರಿ. ವಿವಿಧ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತದೆ.
08 ಡಿಸೆಂಬರ್ 2025, 22:44 IST
ಸಿಂಹ
ಸಹೋದ್ಯೋಗಿಯ ನೆರವಿನಿಂದ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಮನಸ್ಸಿಗೆ ಹಿತ ಕೊಡುವ ರೀತಿಯಲ್ಲಿ ಪೂರೈಸುವಿರಿ. ಅಧಿಕಾರಿಗಳ ವಿರುದ್ಧ ತಿರುಗಿಬೀಳಲಿದ್ದೀರಿ.
08 ಡಿಸೆಂಬರ್ 2025, 22:44 IST
ಕನ್ಯಾ
ಜೀವನದಲ್ಲಿ ಸೋಮಾರಿತನ, ಜತೆಯಲ್ಲಿ ಅಹಂಕಾರವನ್ನು ದೂರ ಮಾಡಿದರೆ ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈಹಾಕಿದರೂ ಸಮಸ್ಯೆ ಆಗಲ್ಲ. ತಾಯಿಯ ಮನೆಯ ಆಸ್ತಿಗಾಗಿ ಆಸೆ ಪಡುವುದು ಸರಿಯಲ್ಲ.
08 ಡಿಸೆಂಬರ್ 2025, 22:44 IST
ತುಲಾ
ರಾಜಕೀಯ ಭವಿಷ್ಯದಲ್ಲಿ ಉತ್ತಮ ಅವಕಾಶ ಸಿಕ್ಕಿದರೂ, ಕಾದು ನೋಡುವ ಪ್ರವೃತ್ತಿ ಉತ್ತಮ. ನಿಮ್ಮ ನಿರ್ಧಾರಗಳಲ್ಲಿ ಸ್ಥಿರತೆ ಬರುವವರೆಗೂ ಇತರರ ಮುಂದೆ ಪ್ರಸ್ತುತ ಪಡಿಸಬೇಡಿ.
08 ಡಿಸೆಂಬರ್ 2025, 22:44 IST
ವೃಶ್ಚಿಕ
ಹಲವು ದಿನಗಳ ಬಳಿಕ ಕುಟುಂಬದ ಹಿರಿಯ ವ್ಯಕ್ತಿಗಳನ್ನು ಭೇಟಿಯಾಗಿ ಹೊಸ ವ್ಯವಹಾರ ಶುರುಮಾಡಲು ಆಶೀರ್ವಾದ ಪಡೆದುಕೊಳ್ಳುವಿರಿ. ದೇಹದ ಸೌಂದರ್ಯ ವರ್ಧನೆಗಾಗಿ ಹಣ ಖರ್ಚು ಮಾಡುವಿರಿ.
08 ಡಿಸೆಂಬರ್ 2025, 22:44 IST
ಧನು
ಕಷ್ಟದಿಂದ ಸಂಪಾದನೆ ಮಾಡಿದ ಹಣವನ್ನು ಸರಿಯಾದ ವಿನಿಯೋಗಕ್ಕಾಗಿ ಬಹಳವಾಗಿ ಯೋಚಿಸುವಿರಿ. ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ.
08 ಡಿಸೆಂಬರ್ 2025, 22:44 IST
ಮಕರ
ನಿಜವೆಂದು ತೋರುವ ಕೆಲವು ವಿಷಯಗಳು ಪರಾಮರ್ಶೆಯ ನಂತರ ಹುಸಿ ಎಂದು ತಿಳಿಯುವುದು. ಹೊಸ ವಿಚಾರಗಳನ್ನು ಸಹೋದರಿಯಿಂದ ಕಲಿಯಲು ಮುಂದಾಗುತ್ತೀರಿ. ಮಂಗಳಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ.
08 ಡಿಸೆಂಬರ್ 2025, 22:44 IST
ಕುಂಭ
ಮಕ್ಕಳು ಜೀವನದಲ್ಲಿ ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ನೆಮ್ಮದಿ ಪಡುವಂತಾಗುವುದು. ಕೆಲವರು ಮಾಡುವ ಅನಾಹುತವನ್ನು ನಿಲ್ಲಿಸದೇ ಬೇರೆಯ ಹಾದಿ ಇಲ್ಲವಾಗಿರುತ್ತದೆ.
08 ಡಿಸೆಂಬರ್ 2025, 22:44 IST
ಮೀನ
ಯಾವುದೇ ಸವಾಲುಗಳು ಎದುರಾದರೂ ಬುದ್ಧಿವಂತಿಕೆ ಹಾಗೂ ಧೈರ್ಯದಿಂದ ಎದುರಿಸುವಿರಿ. ಹಿರಿಯಲ್ಲಿ ತಪ್ಪಿಲ್ಲದಿದ್ದರೂ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮೆಯನ್ನು ಕೇಳಿ. ಮಾತು ಕಡಿಮೆ ಆಡಿದಷ್ಟೂ ಒಳ್ಳೆಯದು.
08 ಡಿಸೆಂಬರ್ 2025, 22:44 IST