ಲಂಡನ್: ಟೆಸ್ಟ್ ಅಥವಾ ಬಹುದಿನಗಳ ಕ್ರಿಕೆಟ್ ಪಂದ್ಯದ ದಿನದಾಟದ ಅಂತಿಮ ಓವರ್ ಪೂರ್ಣಗೊಳಿಸುವುದೂ ಸೇರಿದಂತೆ ಒಟ್ಟು 73 ನಿಯಮಗಳನ್ನು ಮೆರಿಲ್ಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಪರಿಷ್ಕರಣೆ ಮಾಡಿದೆ. ಈ ಪರಿಷ್ಕೃತ ನಿಯಮಗಳು ಇದೇ ವರ್ಷದ ಅಕ್ಟೋಬರ್ನಿಂದ ಜಾರಿಗೆ ಬರಲಿವೆ.

ದಿನದಾಟದ ಅಂತಿಮ ಓವರ್ನಲ್ಲಿ ಬೌಲರ್ ವಿಕೆಟ್ ಗಳಿಸಿದರೆ. ಆ ಓವರ್ನ ಎಲ್ಲ ಎಸೆತಗಳನ್ನು ಪೂರ್ಣಗೊಳಿಸಬೇಕು. ಸಮಯದ ಕಾರಣ ನೀಡಿ ಓವರ್ ಅನ್ನು ಅರ್ಧಕ್ಕೇ ನಿಲ್ಲಿಸಿ ಮರುದಿನಕ್ಕೆ ಮುಂದೂಡುವಂತಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ.

‘ಆಧುನಿಕ ಕ್ರಿಕೆಟ್ಗೆ ತಕ್ಕಂತೆ ನಿಯಮಗಳನ್ನು ರೂಪಿಸಲಾಗುತ್ತಿದೆ’ ಎಂದು ಎಂಸಿಸಿ ಹೇಳಿದೆ. ಬದಲಾದ ನಿಯಮಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.

‘ದಿನದಾಟದ ಕೊನೆಯ ಓವರ್ ಮಧ್ಯದಲ್ಲಿ ಅಥವಾ ಆರಂಭದಲ್ಲಿ ವಿಕೆಟ್ ಪತನವಾದರೆ ಅದನ್ನು ಪೂರ್ಣಗೊಳಿಸಬೇಕು. ಇದರಿಂದ ಪಂದ್ಯದ ನಾಟಕೀಯ ತಿರುವಿನ ಅವಕಾಶವು ಜೀವಂತವಾಗಿರುತ್ತದೆ. ಆದರೆ ಸಮಯ ಮುಗಿದ ಕಾರಣಕ್ಕೆ ಓವರ್ನ್ನು ಅರ್ಧಕ್ಕೆ ನಿಲ್ಲಿಸಿ ಮರುದಿನ ಮುಂದುವರಿಸುವುದಿರಿಂದ ಪಂದ್ಯದ ಸ್ವಾರಸ್ಯವನ್ನು ಕಿತ್ತುಕೊಂಡಂತಾಗಬಹುದು’ ಎಂದು ಎಸಿಸಿ ಅಭಿಪ್ರಾಯಪಟ್ಟಿದೆ.

ಕ್ರಿಕೆಟ್ ಸಲಕರಣೆಗಳ ಬಳಕೆಯಲ್ಲಿಯೂ ಕೆಲವು ಮಹತ್ವದ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಲ್ಯಾಮಿನೇಟ್ ಮಾಡಿರುವ ಬ್ಯಾಟ್ಗಳ ಬಳಕೆಯನ್ನು ಕಾನೂನುಬದ್ಧಗೊಳಿಸಲಾಗಿದೆ.

‘ಮುಕ್ತ ಯುಗದ ಕ್ರಿಕೆಟ್ನಲ್ಲಿ ಬ್ಯಾಟ್ಗಳ ಹೆಚ್ಚುತ್ತಿರುವ ಬೆಲೆಯ ನಿಯಂತ್ರಣಕ್ಕೆ ಹೊಸ ನಿಯಮ ಅಗತ್ಯವಾಗಿದೆ. ಆದ್ದರಿಂದ ಲ್ಯಾಮಿನೇಟ್ ಮಾಡಿರುವ ಬ್ಯಾಟ್ ಬಳಸಬಹುದಾಗಿದೆ’ ಎಂದು ನಿಯಮದಲ್ಲಿ ಹೇಳಲಾಗಿದೆ.

ಮರದ ಎರಡು ಅಥವಾ ಎರಡಕ್ಕಿಂತ ಹೆಚ್ಚು ತುಂಡುಗಳನ್ನು ಸೇರಿಸಿ ಲ್ಯಾಮಿನೇಟ್ ಮಾಡಲಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.