ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಪೊಲೀಸ್ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಲಿದೆ
Published 1 ಜೂನ್ 2024, 0:10 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಕಾರ್ಯಕ್ಷೇತ್ರದಲ್ಲಿ ನಾನಾ ಅಭಿವೃದ್ಧಿಯಿಂದ ಮನಸ್ಸು ಸಂತೃಪ್ತ ಗೊಳ್ಳಲಿದೆ. ಮಕ್ಕಳಿಗೆ ನೌಕರಿಯಲ್ಲಿನ ಬಡ್ತಿಯಿಂದಾಗಿ ಹೆಮ್ಮೆ ಪಡುವಿರಿ. ಆಂಜನೇಯನ ದರ್ಶನದಿಂದ ಎಲ್ಲಾ ಕಾರ್ಯಗಳು ನೆರವೇರುವುದು.
ವೃಷಭ
ವೃಷಭ: ಯಾತ್ರಿಕರಿಗೆ ದೇವರ ಕೃಪೆಯಿಂದಾಗಿ ಹೋದ ಕಡೆ ಎಲ್ಲಾ ಒಳ್ಳೆಯ ವ್ಯವಸ್ಥೆ ಸಿಗಲಿದೆ. ಕಾರ್ಯಕ್ಷೇತ್ರ ಬದಲಾವಣೆಗೆ ಯತ್ನಿಸುತ್ತಿರುವವರಿಗೆ ಸುಸಮಯ. ಜೀವನದಲ್ಲಿದ್ದ ದುಃಖಗಳೆಲ್ಲಾ ದೂರಾಗುವುವು.
ಮಿಥುನ
ಮಿಥುನ: ಮಕ್ಕಳ ಏಳ್ಗೆಯನ್ನು ನೀವು ಕಾಣಬೇಕೆಂದು ಬಯಸುವುದು ಅವರ ಅರಿವಿಗೆ ಬಾರದೆ ಉಳಿಯುತ್ತದೆ. ಹಲವು ದಿನಗಳಿಂದ ಒಂದೆ ಯೋಜನೆ ಮೇಲೆ ಗಮನಹರಿಸಿ ಆದ ಆಯಾಸವು ಕಡಿಮೆಯಾಗುವುದು.
ಕರ್ಕಾಟಕ
ಕರ್ಕಾಟಕ: ವ್ಯವಹಾರದಲ್ಲಿ ಎದುರಾಗುವ ಲಾಭನಷ್ಟಗಳನ್ನು ಸುಧಾರಿಸುವ ಮನಸ್ಸಾಗಲಿದೆ. ಕಲಾವಿದರಾದ ನೀವು ಕತೆ ಕವನಗಳ ಬರವಣಿಗೆ, ಪುಸ್ತಕಗಳ ಅಧ್ಯಯನದಲ್ಲಿ ಸಮಯ ಕಳೆಯುವಿರಿ.
ಸಿಂಹ
ಸಿಂಹ: ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಗಮನ ಹರಿಸುವಿರಿ. ಯಾವುದೇ ಒತ್ತಡಗಳಿಗೆ ಸಿಲುಕಬೇಡಿ. ರಾಜಕೀಯ ಧುರೀಣರಿಗೆ ಈ ದಿನವು ಮೋಡ ಮುಸುಕಿದಂತಿರುವುದು.
ಕನ್ಯಾ
ಕನ್ಯಾ: ರಕ್ತದಾನ ಮಾಡಲು ಬಯಸುವವರು ಅನಗತ್ಯ ಸಲಹೆಗಳಿಗೆ ಕಿವಿಗೊಡದಿರಿ. ನಿಮ್ಮ ಕೆಲಸಗಳಿಗೆ ಬೇರೆಯವರ ಮೇಲೆ ಅತಿಯಾದ ಅವಲಂಬನೆ ಬೇಡ. ನಿಮ್ಮ ಆತ್ಮಸ್ಥೈರ್ಯ ಹೆಚ್ಚಲಿದೆ.
ತುಲಾ
ತುಲಾ: ಕೊನೆವರೆಗೆ ನಿಮ್ಮ ಜೊತೆಯಾಗಿ ನಿಲ್ಲುವಂತಹ ಸ್ನೇಹಿತರ ಸಂಪಾದನೆ ಮಾಡುವಿರಿ. ಈ ದಿನ ಮಕ್ಕಳಲ್ಲಿ ಉಂಟಾಗುವ ವಾಗ್ವಾದಗಳನ್ನು ನೀವೇ ಮಧ್ಯಪ್ರವೇಶ ಮಾಡಿ ನಿಲ್ಲಿಸುವುದು ಸೂಕ್ತ.
ವೃಶ್ಚಿಕ
ವೃಶ್ಚಿಕ: ಚಿನ್ನಾಭರಣದ ಖರೀದಿಸಬೇಕಾದ ಪ್ರಸಂಗ ಎದುರಾಗಲಿದೆ. ಅಸೂಯೆ ಪಡುವ ಸಹೋದ್ಯೋಗಿ ಯಾರೆಂಬುದು ತಿಳಿಯುವುದು. ಯಾವುದೇ ಸಮಸ್ಯೆಗಳಿಗೆ ಈ ದಿನ ಸುಲಭವಾಗಿ ಉತ್ತರ ಸಿಗುವುದು.
ಧನು
ಧನು: ಅಬಕಾರಿ ಮತ್ತು ಪೊಲೀಸ್ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಲಿದೆ. ಅರ್ಧಕ್ಕೆ ನಿಂತ ನಿಮ್ಮ ಸ್ವಂತ ಕೆಲಸಗಳಿಗೆ ಈ ದಿನ ಮತ್ತೆ ಚಾಲನೆ ದೊರೆಯಲಿದೆ. ವ್ಯವಹಾರದ ವಿಷಯಗಳಿಂದಾಗಿ ಬಿಡುವಿಲ್ಲದ ಕೆಲಸಗಳು ಎದುರಾಗಲಿವೆ.
ಮಕರ
ಮಕರ: ಹಲವು ವಿಷಯಗಳ ಮೇಲೆ ಒಟ್ಟಿಗೆ ಗಮನ ಇಡುವುದರ ಬದಲು ಒಂದಾದ ಮೇಲೆ ಒಂದು ಮುಗಿಸುವುದು ಸೂಕ್ತ. ತಾಮಸ ಪ್ರವೃತ್ತಿಯ ಗುಣಗಳನ್ನು ಸಾತ್ವಿಕರ ಎದುರು ಪ್ರದರ್ಶಿಸಬೇಡಿ.
ಕುಂಭ
ಕುಂಭ: ಹವಾನಿಯಂತ್ರಣದ ವಾತಾವರಣವು ನಿಮಗೆ ಸರಿಹೋಗದೆ ಇರಬಹುದು. ನಿಮ್ಮ ಒಳ್ಳೆತನ ದುರುಪಯೋಗವಾಗದಂತೆ ಎಚ್ಚರ ವಹಿಸಿ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರಕುವ ಸಂಭವವಿದೆ.
ಮೀನ
ಮೀನ: ನೀವು ಕೊಡುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ನಿಮ್ಮ ಮಕ್ಕಳು ಬಯಸುವುದು ಕೋಪ ತರಿಸಬಹುದು. ಮನೋರೋಗದಿಂದ ಬಳಲುತ್ತಿರುವವರು ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ.