ದಿನ ಭವಿಷ್ಯ: ಹೊಸ ವ್ಯಕ್ತಿಗಳ ಪರಿಚಯದಿಂದ ಹಣಕಾಸಿನಲ್ಲಿ ಮೋಸ ಹೋಗುವ ಸಂಭವವಿದೆ
Published 3 ಮೇ 2025, 1:06 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ಸಂಪರ್ಕದಲ್ಲಿರುವುದು ಆನಂದ ನೀಡಲಿದೆ. ಭೂಮಿ ಬಿಟ್ಟು ಎತ್ತರದಲ್ಲಿ ಕೆಲಸ ಮಾಡುವವರು ಜಾಗ್ರತೆಯಿಂದಿರಿ. ರೇಷ್ಮೆ ವ್ಯಾಪಾರಿಗಳಿಗೆ ಆದಾಯ ಇರುವುದು.
ವೃಷಭ
ಅಧ್ಯಾಪನ ವೃಂದಕ್ಕೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ತಾಳ್ಮೆಯು ಜೀವನದ ಮೂಲಮಂತ್ರವಾಗಿರಲಿ. ಸಂಗಾತಿಯ ಆಯ್ಕೆ ವಿಚಾರದಲ್ಲಿ ಗಮನ ಕೊಡಿ.
ಮಿಥುನ
ಖರ್ಚು ವೆಚ್ಚಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವಿರಿ. ಮಿತ ಮತ್ತು ಶುಚಿಯ ಆಹಾರ ಸೇವನೆಯಿಂದ ಆರೋಗ್ಯ ಉತ್ತಮ. ಸಂಸಾರದಲ್ಲಿ ನೆಮ್ಮದಿ ವೃದ್ಧಿ . ಶ್ರೀಸುಬ್ರಹ್ಮಣ್ಯನನ್ನು ಪೂಜಿಸಿ.
ಕರ್ಕಾಟಕ
ವಿಶ್ವಾಸವನ್ನು ಉಳಿಸಿಕೊಳ್ಳಲು ಕಷ್ಟವಾಗಬಹುದು. ಮಕ್ಕಳನ್ನು ಶಿಕ್ಷಿಸುವ ಬದಲಾಗಿ ನಯವಾಗಿ ತಿಳಿಹೇಳಿ. ಕೃಷಿಗೆ ಸಂಬಂಧಿಸಿದ ಆರ್ಥಿಕತೆಯಲ್ಲಿ ಪಡೆದ ಸಾಲವನ್ನು ಹಿಂದಿರುಗಿಸುವ ಶಕ್ತಿ ದೊರಕಲಿದೆ.
ಸಿಂಹ
ಲಾಭ ತರುವಂಥ ಮತ್ತು ಅನಿವಾರ್ಯದ ಕೆಲಸಗಳಿಗೆ ಮಾತ್ರ ಗಮನ ಕೊಡಿ. ಅವಿವಾಹಿತ ಯೋಗ್ಯ ವಯಸ್ಕರಿಗೆ ಹೊಸ ಸಂಬಂಧಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ.
ಕನ್ಯಾ
ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವ ಬಗ್ಗೆ ಹೆಚ್ಚಿನ ಗಮನವಿರಲಿ. ಹೊಸ ವ್ಯಕ್ತಿಗಳ ಪರಿಚಯದಿಂದ ಹಣಕಾಸಿನಲ್ಲಿ ಮೋಸ ಹೋಗುವ ಸಂಭವವಿದೆ.
ತುಲಾ
ಕೆಲಸ ಆರಂಭಿಸುವ ಮುನ್ನ ಆಮೂಲಾಗ್ರ ಚಿಂತನೆ ಅಗತ್ಯ. ಚಿತ್ರನಟ ನಟಿಯರು ಮತ್ತು ಸಂಗೀತಗಾರರಿಗೆ ಉತ್ತಮ ದಿನ. ಗಣಿಗಾರಿಕೆಯಲ್ಲಿ ಉತ್ತಮ ಲಾಭ.
ವೃಶ್ಚಿಕ
ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ಹತ್ತಲಿದೆ. ಸ್ವಯಂ ನಿರ್ಧಾರದಿಂದ ತೆಗೆದುಕೊಳ್ಳುವ ಔಷಧಿಯು ಅಡ್ಡಪರಿಣಾಮ ಬೀರಬಹುದು. ಎಚ್ಚರದಿಂದಿರಿ.
ಧನು
ಹಾಸ್ಯ ಮನೋಭಾವಕ್ಕೆ ಹೊಂದಿಕೊಳ್ಳುವ ಸ್ನೇಹಿತರು ಸಿಗಲಿದ್ದಾರೆ. ಹಳ್ಳಿಯ ಭೇಟಿ ಖುಷಿ ತರುವುದು. ಅಪರೂಪಕ್ಕೆ ಖುಷಿಯಿಂದ ಆಡಿದ ಕ್ರೀಡೆಯು ಕೈಕಾಲು ನೋವಿಗೆ, ದೇಹಾಯಾಸಕ್ಕೆ ಕಾರಣವಾಗಬಹುದು.
ಮಕರ
ಇನ್ನೊಬ್ಬರಿಗೆ ಸಹಾಯ ಮಾಡಲು ಯೋಚಿಸುವ ನೀವು ಸಮಯದ ಬಗ್ಗೆಯೂ ಗಮನಹರಿಸಿ. ಜಗತ್ತೆ ಶೂನ್ಯ ಎಂದು ಕಾಣುತ್ತಿರುವವರಿಗೆ ಜೀವನವನ್ನು ಬೆಳಗಿಸುವ ವ್ಯಕ್ತಿಯ ಪರಿಚಯವಾಗುವುದು.
ಕುಂಭ
ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಿ ಉತ್ತಮ ಆದಾಯ ತೋರಿಬಂದು ಅಭಿವೃದ್ಧಿಗೆ ಕಾರಣವಾಗುವುದು. ವಿಶೇಷ ಅವಕಾಶಕ್ಕಾಗಿ ಅಥವಾ ಅವಿಸ್ಮರಣೀಯ ಕ್ಷಣವನ್ನು ಎದುರುನೋಡುವ ಚಡಪಡಿಕೆ ನಿಮ್ಮದಾಗಿರುತ್ತದೆ.
ಮೀನ
ವ್ಯಾಪಾರ ವಹಿವಾಟಿನಲ್ಲಿ ಚಾಕಚಕ್ಯತೆ ತೋರಿದರೆ ವ್ಯವಹಾರ ಸಾಧ್ಯ. ವಾಹನ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ ಇರಲಿದೆ. ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸಿರಿ.