ಶನಿವಾರ, 2 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆದಾಯದ ಎರಡರಷ್ಟು ಖರ್ಚು ಸಂಭವಿಸಬಹುದು
Published 1 ಆಗಸ್ಟ್ 2025, 22:49 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದಿನಾಂತ್ಯದಲ್ಲಿ ಬಿರುಸಿನಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಕಾಲ ಕಳೆಯಲು ಅಪೇಕ್ಷಿಸುವಿರಿ. ಮಕ್ಕಳರೋಗತಜ್ಞರಿಗೆ ವಿಶೇಷ ಸವಾಲೊಂದು ಎದುರಾಗುವ ಸಂಭವವಿದೆ.
ವೃಷಭ
ಸಿದ್ಧ ಉಡುಪಗಳ ವ್ಯಾಪಾರಸ್ಥರು ರಫ್ತು ವ್ಯಾಪಾರದಿಂದ ಹೇರಳ ಲಾಭ ಪಡೆಯುವಿರಿ. ಬಲವಾದ ಕಾರಣವಿಲ್ಲದೆ ಯಾರ ಮೇಲೂ ಕೋಪಿಸಿಕೊಳ್ಳಬೇಡಿ. ಮನಃಪೂರ್ವಕವಾಗಿ ಮಾಡಿದ ಕೆಲಸಕ್ಕೆ ಶ್ಲಾಘನೆ ಸಿಗಲಿದೆ.
ಮಿಥುನ
ಭವಿಷ್ಯ ಹೇಗೆ ಇರಬೇಕೆಂಬ ಸ್ಪಷ್ಟ ನಿರ್ಧಾರ ಮತ್ತು ಆಸೆ ಇರುವುದರಿಂದ ಅದನ್ನು ನನಸಾಗಿಸಲು ಕಠಿಣ ಶ್ರಮ ಅಗತ್ಯವೆನಿಸಲಿದೆ. ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳು ದೂರಾಗಲಿವೆ.
ಕರ್ಕಾಟಕ
ಹೊಸ ಬಂಡವಾಳ ಹೂಡಿಕೆಗೆ ಉತ್ತಮ ಸಮಯ. ವಿಭಿನ್ನ ರೀತಿಯ ಕೆಲಸವನ್ನು ಸ್ನೇಹಿತರಿಂದ ಪಡೆಯುವಿರಿ. ಕೃಷಿ ಕೆಲಸದಲ್ಲಿ ಯಶಸ್ಸು ಗಳಿಸುವಿರಿ. ಪುಸ್ತಕ ಪ್ರಕಾಶಕರಿಗೆ ತಿದ್ದುಪಡಿ ಕೆಲಸ ತಲೆನೋವಾಗಬಹುದು.
ಸಿಂಹ
ಅಗ್ನಿ ಪರೀಕ್ಷೆಯಂಥ ದೊಡ್ಡ ಯೋಜನೆಗಳಲ್ಲಿ ಜಯ ಗಳಿಸುವಿರಿ. ರಾಜಕೀಯ ಪಕ್ಷವೊಂದನ್ನು ಬೆಂಬಲಿಸುವ ಬಗ್ಗೆ ಕಾರ್ಯ ಕೈಗೊಳ್ಳುವಿರಿ. ವ್ಯವಹಾರದ ನಿರ್ಣಯ ಕೈಗೊಳ್ಳುವಾಗ ಸಮಾಧಾನದಿಂದ ವರ್ತಿಸಿ.
ಕನ್ಯಾ
ನಾಯಕತ್ವದ ಪಟ್ಟ ಹೊರುವ ನಿಮ್ಮ ಸಾಮರ್ಥ್ಯವು ಕೆಲವರ ಕಣ್ಣಿಗೆ ಕೆಂಪಾಗಿ ಕಾಣುತ್ತದೆ. ಮುನ್ನುಗ್ಗಿ ಕಾರ್ಯ ನಿರ್ವಹಿಸಿ. ಮಧ್ಯಾಹ್ನದ ನಂತರದ ಪ್ರಯಾಣವನ್ನು ಮಾಡದಿರುವುದು ಉತ್ತಮ.
ತುಲಾ
ಸ್ನೇಹಿತನೊಂದಿಗೆ ಮುನಿಸಿನ ತೆರೆಯನ್ನು ಬದಿಗೆ ಸರಿಸಿ ಉತ್ತಮ ಸಮಯ ಅನುಭವಿಸುವಿರಿ. ಈಟಿಯಲ್ಲಿ ಇರಿಯುವಂಥ ಮಾತುಗಳ ಮೇಲೆ ಹಿಡಿತವಿರಲಿ. ಮಾರ್ಗದಲ್ಲಿ ಮತ್ತು ಪ್ರಯತ್ನದಲ್ಲಿ ನಂಬಿಕೆ ಇರಲಿ.
ವೃಶ್ಚಿಕ
ಸಂಘ ಸಂಸ್ಥೆಗಳ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ನಂತರ ಕೆಲಸಗಳನ್ನು ಕಾರ್ಯರೂಪಕ್ಕೆ ತನ್ನಿ. ಸಮಪಾಲು ಸಮ ಬಾಳು ಎಂಬ ನಿಮ್ಮ ಧ್ಯೇಯವನ್ನು ಕಿರಿಯರು ಗೌರವಿಸುವುದರ ಜತೆಗೆ ಪಾಲಿಸುತ್ತಾರೆ.
ಧನು
ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಸಿಗಲಿದ್ದು, ಸಮಸ್ಯೆಗಳು ಬಗೆಹರಿಯುತ್ತವೆ. ಅನಾರೋಗ್ಯವಂತರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಆದಾಯದ ಎರಡರಷ್ಟು ಖರ್ಚು ಸಂಭವಿಸಬಹುದು.
ಮಕರ
ಒತ್ತಡ ತರುವಂಥ ಕೆಲಸಗಳಿಂದ ದೂರವಿರುವ ಪ್ರಯತ್ನ ಮಾಡಿ. ಸ್ಪರ್ಧೆಯಲ್ಲಿ ಜಯಗಳಿಸುವಿರಿ. ಪ್ರಾಮಾಣಿಕವಾಗಿ ಸಂಪಾದನೆ ಮಾಡುತ್ತಿರುವ ನಿಮಗೆ ಶತ್ರುಗಳ ಭಯ ಬೇಡವೆ ಬೇಡ. ರಕ್ಷಣಾ ಕೆಲಸಗಾರರು ಜಾಗ್ರತರಾಗಿರಿ.
ಕುಂಭ
ಕಾರ್ಯದ ನಿಮಿತ್ತ ಕುಟುಂಬದ ಸದಸ್ಯರನ್ನು ಎದುರು ಹಾಕಿಕೊಳ್ಳಬೇಕಾದ ಪರಿಸ್ಥಿತಿಗಳು ಎದುರಾಗಬಹುದು. ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ. ಕಲಹಗಳಲ್ಲಿ ಮೌನವಾಗಿರಿ.
ಮೀನ
ಜೀವನದಲ್ಲಿ ನಡೆದ ಹಲವು ಹಾಸ್ಯ ಪ್ರಸಂಗಗಳನ್ನು ಸ್ನೇಹಿತರೊಂದಿಗೆ ನೆನೆಯುವಿರಿ. ನೂತನ ವಾಹನ ಕೊಳ್ಳುವ ಯೋಚನೆಯನ್ನು ಮಾಡುವವರಿಗೆ ಸಕಾಲ. ಲೇವಾದೇವಿ ನಡೆಸುವವರು ಲಾಭ ಹೊಂದುವಿರಿ.
ADVERTISEMENT
ADVERTISEMENT