ವಾರ ಭವಿಷ್ಯ | ಅಕ್ಟೋಬರ್ 12 ರಿಂದ 18ರವರೆಗೆ: ಸಂಗಾತಿ ಸಂತೋಷಕ್ಕಾಗಿ ಹಣ ವ್ಯಯ...
Published 12 ಅಕ್ಟೋಬರ್ 2025, 1:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಕ್ರೀಡಾಪಟುಗಳಿಗೆ ಬಹಳ ಹುಮ್ಮಸ್ಸು ಇರುತ್ತದೆ. ಆದಾಯವು ಕಡಿಮೆ ಇದ್ದು ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಗುರುಹಿರಿಯರೊಡನೆ ಅನುಬಂಧ ಹೆಚ್ಚುತ್ತದೆ. ಎದುರಾದ ಸಮಸ್ಯೆಗಳಿಗೆ ಸ್ನೇಹಿತರಿಂದ ಸೂಕ್ತ ಪರಿಹಾರಗಳು ಸಿಗುತ್ತವೆ. ದೂರ ಪ್ರಯಾಣದ ಸಲುವಾಗಿ ಖರ್ಚು ಹೆಚ್ಚುತ್ತದೆ. ವಿದೇಶಿ ಸಂಸ್ಥೆಗಳಲ್ಲಿ ಹೂಡಿದ್ದ ಬಂಡವಾಳ ಈಗ ದೊಡ್ಡ ಮೊತ್ತದಲ್ಲಿ ವಾಪಸ್ಸು ಬರುತ್ತದೆ. ವಿದೇಶಿ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಉದ್ದಿಮೆಗಳನ್ನು ನಡೆಸುತ್ತಿರುವವರಿಗೆ ಸ್ವಲ್ಪಮಟ್ಟಿನ ಕಾರ್ಮಿಕರ ಸಮಸ್ಯೆಯಾಗಬಹುದು.
ವೃಷಭ
ಸಾಲದಿಂದ ಮುಕ್ತರಾಗಿ ನೆಮ್ಮದಿ ದೊರಕುವುದು. ಆದಾಯವು ಅವಶ್ಯಕತೆಯನ್ನು ಪೂರೈಸುತ್ತದೆ. ರೈತಾಪಿ ವರ್ಗದವರಿಗೆ ಬೆಳೆದ ಬೆಳೆಗಳಿಗೆ ತಕ್ಕಬೆಲೆ ದೊರೆಯುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಹಣ ವ್ಯಯವಾಗುತ್ತದೆ. ವಿದ್ಯುತ್ ಉಪಕರಣಗಳ ದುರಸ್ತಿಗಾಗಿ ಹಣ ಖರ್ಚಾಗಬಹುದು. ವಿದ್ಯಾರ್ಥಿಗಳ ಅಭ್ಯಾಸ ಉತ್ತಮವಾಗಿರುತ್ತದೆ. ಬಂಧುಗಳ ನಡುವಿನ ವ್ಯವಹಾರಗಳು ನಷ್ಟಕ್ಕೆ ಕಾರಣವಾಗಬಹುದು. ಸಾಕಷ್ಟು ತಾಳ್ಮೆಯಿಂದ ವ್ಯವಹರಿಸಿದಲ್ಲಿ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ.
ಮಿಥುನ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಯಶಸ್ಸು ಲಭಿಸುತ್ತದೆ. ನಿಮ್ಮ ಆದಾಯದಲ್ಲಿ ಕೊರತೆಯನ್ನು ಕಾಣಬಹುದು. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ಹೋಗಿ ಬರುವಿರಿ. ಆಸ್ತಿ ಖರೀದಿಗಾಗಿ ಮುಂದಡಿ ಇಡಬಹುದು. ಕ್ರೀಡಾಪಟುಗಳಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ತಂದೆಯಿಂದ ನಿಮ್ಮ ಕೆಲಸಗಳಿಗೆ ಸ್ವಲ್ಪ ಮಟ್ಟಿನ ಆರ್ಥಿಕ ಸಹಾಯ ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳು ಅಥವಾ ಸಂಘ-ಸಂಸ್ಥೆಗಳಿಂದ ಬರಬೇಕಾಗಿದ್ದ ಸಹಾಯಧನ ಈಗ ಬರುತ್ತದೆ. ಯಾವುದೇ ಆಸ್ತಿಯ ದಾಖಲಾತಿಯ ಪತ್ರಗಳನ್ನು ಮಾಡುವಾಗ ಎಚ್ಚರ ವಹಿಸಿ. ನಿಮ್ಮ ನಿವೇಶನದ ಅಕ್ಕಪಕ್ಕದವರಿಂದ ಕಿರುಕುಳಗಳು ದೂರವಾಗುತ್ತವೆ.
ಕರ್ಕಾಟಕ
ಮನಸ್ಸಿನಲ್ಲಿ ವ್ಯಸನವಿದ್ದರೂ ಹೊರಗೆ ತೋರಿಸಿಕೊಳ್ಳುವುದಿಲ್ಲ. ಆದಾಯವು ಕಡಿಮೆ ಇರುತ್ತದೆ. ಬಂಧುಗಳು ಸ್ವಲ್ಪಮಟ್ಟಿಗೆ ಸಹಕರಿಸಬಹುದು. ಸಣ್ಣಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಿರಿ. ಹೊಸ ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಗಮನ ಸೆಳೆಯುವಿರಿ. ಖರ್ಚು ವೆಚ್ಚದಲ್ಲಿ ನಿಯಂತ್ರಣವನ್ನು ಸಾಧಿಸಿ ಹಣ ನಿರ್ವಹಣೆಯನ್ನು ಮಾಡಿರಿ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಇದ್ದ ಕೆಲವು ಸಂಕಷ್ಟಗಳು ದೂರವಾಗುತ್ತವೆ. ಮಿತ್ರರೊಡನೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.
ಸಿಂಹ
ವಾರದ ಆರಂಭದಲ್ಲಿ ಸಾಕಷ್ಟು ಆಲಸಿತನ ಇರುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಬಂಧುಗಳ ನಡುವೆ ಮುಸುಕಿನ ಗುದ್ದಾಟ ಇರುತ್ತದೆ. ವಾಹನ ಚಲಾಯಿಸುವಾಗ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಿರಿ. ಈಗ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ಸಿಗುವ ಸಂದರ್ಭವಿದೆ. ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಹೆಚ್ಚಿನ ರಫ್ತಿಗಾಗಿ ಬೇಡಿಕೆ ಬರುವ ಸಾಧ್ಯತೆ ಇದೆ. ಸ್ವಂತ ಉದ್ದಿಮೆದಾರರಿಗೆ ಇದ್ದ ಕಾರ್ಮಿಕ ಸಮಸ್ಯೆಗಳು ದೂರವಾಗುತ್ತವೆ.
ಕನ್ಯಾ
ಸ್ವಂತ ಗೌರವದ ಮೇಲೆ ಆಸಕ್ತಿ ಹೆಚ್ಚುತ್ತದೆ. ವೈಯಕ್ತಿಕ ಜೀವನದಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿಯನ್ನು ಕಾಣಬಹುದು. ಆಸ್ತಿ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ಪ್ರತಿಭಾವಂತರಿಗೆ ಈಗ ಉತ್ತಮ ಉದ್ಯೋಗಗಳು ದೊರೆಯುವ ಸಾಧ್ಯತೆಗಳಿವೆ. ಹೊಸ ಗೃಹೋದ್ಯಮ ಆರಂಭಿಸುವ ಸಲುವಾಗಿ ಸೂಕ್ತವ್ಯಕ್ತಿಗಳ ಜೊತೆ ಮಾತುಕತೆಯನ್ನು ನಡೆಸುವಿರಿ. ಹೈನುಗಾರಿಕೆ ಮಾಡುವವರಿಗೆ ಯಶಸ್ಸಿನ ಹಾದಿ ತೆರೆಯುತ್ತದೆ. ಉದ್ಯೋಗದಲ್ಲಿ ಅನುಕೂಲ ಹೆಚ್ಚುತ್ತದೆ. ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಆದಾಯ ವೃದ್ಧಿಸುತ್ತದೆ.
ತುಲಾ
ನಿಮ್ಮ ಮನಸ್ಸಿನಲ್ಲಿ ದ್ವಂದ್ವಗಳಿರುತ್ತವೆ. ಗೃಹ ನಿರ್ಮಾಣದಲ್ಲಿ ಇದ್ದ ತೊಡಕುಗಳು ನಿವಾರಣೆಯಾಗಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಆದಾಯವೂ ಕಡಿಮೆ ಇರುತ್ತದೆ. ಬಂಧುಗಳ ಸಹಾಯ ಸಿಗುವುದು ಅನುಮಾನ. ವಿದೇಶದಲ್ಲಿರುವವರಿಗೆ ಸ್ಥಿರಾಸ್ತಿಯನ್ನು ಮಾಡಿ ಕೊಳ್ಳುವ ಯೋಗವಿದೆ. ಮಹಿಳಾ ಕಲಾವಿದರುಗಳಿಗೆ ಪ್ರೋತ್ಸಾಹ ಕಡಿಮೆಯಾಗಬಹುದು. ಪತ್ರಿಕಾರಂಗದಲ್ಲಿ ಇರುವವರೆಗೆ ಹೆಸರು ತರುವಂತಹ ಘಟನೆಗಳು ಸಂಭವಿಸುತ್ತವೆ. ವಿದ್ಯುತ್ ಉಪಕರಣಗಳನ್ನು ರಿಪೇರಿ ಮಾಡುವವರಿಗೆ ಉತ್ತಮ ಆದಾಯ ದೊರೆಯುತ್ತದೆ.
ವೃಶ್ಚಿಕ
ಕೆಲವರಿಗೆ ಸ್ವಲ್ಪ ನಿರಾಸಕ್ತಿ ಇರುತ್ತದೆ. ಈಗ ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿ ಸಂಬಂಧಿತ ಆದಾಯ ಕಡಿಮೆಯಾಗುವುದು. ಸಂಗಾತಿ ಮಾಡುವ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಹಿರಿಯರಿಂದ ಆರ್ಥಿಕ ಸಹಾಯ ದೊರೆಯುವುದು. ವೃತ್ತಿ ಜೀವನದ ಸಮಸ್ಯೆಗಳಿಗೆ ಅಲ್ಪಮಟ್ಟಿನ ಪರಿಹಾರ ದೊರೆಯುತ್ತದೆ. ಹೊಸ ವಾಹನ ಮಾರಾಟವನ್ನು ಮಾಡುವವರಿಗೆ ಮಾರಾಟದಲ್ಲಿ ಪ್ರಗತಿ ಇರುತ್ತದೆ. ಕುಟುಂಬ ಸಮೇತ ಸಂತೋಷದ ವಿಹಾರಕ್ಕಾಗಿ ಪ್ರಯಾಣ ಬೆಳೆಸುವಿರಿ. ಕೃಷಿಕರಿಗೆ ನಿರೀಕ್ಷಿತ ಆದಾಯ ಬಂದು ಸಂತೋಷವಾಗುತ್ತದೆ.
ಧನು
ಏನೇ ಬಂದರೂ ಎದುರಿಸುವ ಛಲ ನಿಮ್ಮಲ್ಲಿ ಇರುತ್ತದೆ. ಆದಾಯ ಕಡಿಮೆ ಇದ್ದರೂ ಹಣ ನಿರ್ವಹಣೆಯನ್ನು ಸರಿಯಾಗಿ ಮಾಡುವಿರಿ. ಬಂಧುಗಳು ಒಳಸಂಚನ್ನು ಮಾಡಬಹುದು. ಮೂಳೆ ನೋವುಗಳು ಸ್ವಲ್ಪ ಹೆಚ್ಚಾಗಬಹುದು. ದೈನಂದಿಕ ಚಟುವಟಿಕೆಗಳಲ್ಲಿ ಸಾಕಷ್ಟು ಉತ್ಸಾಹವನ್ನು ಕಾಣಬಹುದು. ದೇವತಾ ದರ್ಶನವನ್ನು ಮಾಡುವ ಯೋಗವಿದೆ. ಸಮಾಲೋಚನೆ ನಡೆಸಿ ಮಾಡಿಕೊಂಡ ಒಪ್ಪಂದದ ಹಣದ ವ್ಯವಹಾರಗಳಲ್ಲಿ ಲಾಭವನ್ನು ಕಾಣಬಹುದು. ಸಂಗಾತಿಯ ವೈಯಕ್ತಿಕ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಕೆಲವರಿಗೆ ಉತ್ತಮ ಹುದ್ದೆಗಳು ದೊರೆಯುತ್ತವೆ.
ಮಕರ
ವ್ಯಕ್ತಿ ಗೌರವಕ್ಕೆ ಹೆಚ್ಚು ಗಮನ ಕೊಡುವಿರಿ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಗುಣದಿಂದ ಎಲ್ಲರೂ ನಿಮಗೆ ಸಹಕಾರ ನೀಡುವರು. ಶತ್ರುಗಳನ್ನು ಅವರದೇ ರೀತಿಯಲ್ಲಿ ಮಣಿಸುವಿರಿ. ಹಣಕಾಸಿನ ವ್ಯವಹಾರಗಳು ಬೇಡ. ಹೆಚ್ಚಿನ ವಿದ್ಯೆಯನ್ನು ಕಲಿಯಲು ದೂರ ಪ್ರಯಾಣ ಮಾಡಬೇಕಾಗಿರುತ್ತದೆ. ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ನರದೌರ್ಬಲ್ಯ ಇರುವವರು ಎಚ್ಚರವಹಿಸುವುದು ಒಳ್ಳೆಯದು. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಕೆಲವರಿಗೆ ತಂದೆಯಿಂದ ಆರ್ಥಿಕ ಸಹಾಯ ದೊರೆಯುತ್ತದೆ.
ಕುಂಭ
ವಿದೇಶದಲ್ಲಿ ಇರುವವರಿಗೆ ಭದ್ರತೆ ಕಾಡಬಹುದು. ಈಗ ಆದಾಯವು ಕಡಿಮೆ ಇದ್ದು ಎಚ್ಚರದಿಂದ ಹಣ ನಿರ್ವಹಣೆಮಾಡಿರಿ. ಮನೆಗೆ ಕೆಲವೊಂದು ಗೃಹಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ. ಗೊಂದಲದ ಸ್ಥಿತಿಯಿಂದ ಯುವಕರು ವ್ಯವಹಾರಗಳಲ್ಲಿ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ. ಮಹಿಳೆಯರ ರೆಡಿಮೇಡ್ ಬಟ್ಟೆಗಳನ್ನು ಮಾರುವವರಿಗೆ ಸಾಕಷ್ಟು ಲಾಭ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಧರ್ಮ ಪ್ರಚಾರಕರಿಗೆ ಮುನ್ನಡೆ ಇರುತ್ತದೆ.
ಮೀನ
ಮುಂದೂಡಿಕೆಯ ಅಭ್ಯಾಸದಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವಿರಿ. ಆದಾಯವು ಇದ್ದರೂ ಅದು ನಿಮ್ಮನ್ನು ತಲುಪುವುದು ನಿಧಾನವಾಗುತ್ತದೆ. ಒಡಹುಟ್ಟಿದವರಿಂದ ಮತ್ತು ಬಂಧುಗಳಿಂದ ನಿರೀಕ್ಷಿತ ಸಹಕಾರ ದೊರೆಯುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಹೊಟ್ಟೆಯೊಳಗೆ ಸ್ವಲ್ಪ ತೊಂದರೆಗಳು ಕಾಣಿಸಬಹುದು. ನೆರೆಹೊರೆಯವರೊಡನೆ ಸಂಬಂಧಗಳನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯದು. ಪಾಲುದಾರಿಕೆ ವ್ಯವಹಾರದಲ್ಲಿ ಇದ್ದ ಮನಸ್ತಾಪಗಳು ದೂರವಾಗುತ್ತವೆ.