ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯ ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ
Published 20 ಆಗಸ್ಟ್ 2024, 0:50 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಒಡನಾಟ ಹೊಂದಿರುವ ವ್ಯಕ್ತಿಗಳೊಂದಿಗೆ ವ್ಯವಹಾರಿಕವಾಗಿ ಲಾಭತರುವ ಆಲೋಚನೆಯನ್ನು ಹಂಚಿಕೊಂಡು, ವಿವಿಧ ರೀತಿಯಲ್ಲಿ ನಷ್ಟ ಆಗುವುದು. ಮಕ್ಕಳ ಆರೋಗ್ಯದಲ್ಲಿ ಕೊರತೆ ಇರುವುದಿಲ್ಲ.
ವೃಷಭ
ಬಹುದಿನಗಳ ನಿರೀಕ್ಷೆಯ ವಿಚಾರಗಳು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಿದಲ್ಲಿ ಲಾಭ ಕಾಣುವಿರಿ. ಸಂಬಂಧಿಕರ ಅತಿ ವಿಶ್ವಾಸ, ಪ್ರೀತಿ ಕಂಡು ಮರುಳಾಗಬೇಡಿ. ಶೀತದ ಬಾಧೆ ಕಾಡಬಹುದು.
ಮಿಥುನ
ಮುಖಂಡತ್ವದ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರಿಂದ ನಿರೀಕ್ಷೆಗೂ ಮೀರಿ ಸಹಾಯ ದೊರೆಯುವುದು. ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಸರ್ಕಾರದಿಂದ ಉತ್ತಮ ಅವಕಾಶಗಳು ಸಿಗಲಿವೆ. ‌
ಕರ್ಕಾಟಕ
ಕ್ಷಣಿಕ ಸುಖಗಳಿಗೆ ಗಮನ ನೀಡದೆ, ಮುಖ್ಯ ವಿಷಯ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಅಭಿವೃದ್ಧಿಗೆ ಮೆಟ್ಟಿಲುಗಳಾಗುವುದು. ನೂತನ ತಾತ್ಕಾಲಿಕ ಉದ್ಯೋಗ ದೊರೆತು ಸಮಾಧಾನವಾಗುವುದು .
ಸಿಂಹ
ಎತ್ತರದಲ್ಲಿ ಕೆಲಸ ಮಾಡುವವರು, ಸಾಹಸಿ ಪ್ರವೃತ್ತಿಯವರು ಜಾಗ್ರತರಾಗಿರಿ. ವೃತ್ತಿ ಜೀವನದಲ್ಲಿ ಹಣಕಾಸಿನ ಸ್ಥಿತಿ ಉತ್ತಮ ಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯುವುದು. ಕೆಲಸಗಳು ಮಂದಗತಿಯಲ್ಲಿ ಸಾಗುವುದು.
ಕನ್ಯಾ
ವೃತ್ತಿರಂಗದಲ್ಲಿ ಅನವಶ್ಯಕವಾಗಿ ಇತರರ ಕೋಪಕ್ಕೆ ಗುರಿಯಾಗುವುದನ್ನು ಸ್ನೇಹಿತರು ತಪ್ಪಿಸುವರು. ಆಡುವ ಸುಳ್ಳು ಮಾತಿನ ಫಲವನ್ನು ತಕ್ಷಣದಲ್ಲಿ ಅನುಭವಿಸುವಂತಾಗುವುದು. ಸಂಘ ಸಂಸ್ಥೆಗಳ ಪದಾಧಿಕಾರ ದೊರಕುವುದು.
ತುಲಾ
ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಯಾವುದೋ ಮೂಲದಿಂದ ಬಂದ ಹಣ ದೇವ ಕಾರ್ಯಗಳಿಗೆ ಉಪಯೋಗಿಸುವುದು ಒಳ್ಳೆ ಯದು. ಭಾಷಾ ಅಧ್ಯಾಪಕರಿಗೆ ಉದ್ಯೋಗದಲ್ಲಿ ಅಸ್ಥಿರತೆ ಉಂಟಾಗುವುದು.
ವೃಶ್ಚಿಕ
ಮೇಲಧಿಕಾರಿಗಳು ಇಟ್ಟಿದ್ದ ಭರವಸೆ ಹುಸಿಯಾಗದಂತೆ ಕಾರ್ಯ ನಿರ್ವಹಿಸಲು ಅಶಕ್ತರಾಗುವ ಸಂಭವವಿದೆ. ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ, ಕೂಡಲೇ ಬಗೆಹರಿಸಿಕೊಳ್ಳಿರಿ.
ಧನು
ದೇವಸ್ಥಾನದಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ ನಿಮ್ಮಿಂದ ಸಹಾಯ ಅಪೇಕ್ಷಿಸುವವರ ವಿಚಾರದಲ್ಲಿ ಮುಂಜಾಗ್ರತೆ ಇರಲಿ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳುವುದನ್ನು ಸ್ವಂತವಾಗಿ ಅಭ್ಯಸಿಸಿ.
ಮಕರ
ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಮನಸ್ಸು ಉಲ್ಲಾಸದಿಂದ ಇರುವುದು. ಗೃಹಕೃತ್ಯದ ಪೂರ್ಣ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.
ಕುಂಭ
ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ತೋರಿಬಂದರೂ ಅಭಿವೃದ್ಧಿದಾಯಕ ಬೆಳವಣಿಗೆ ಹರ್ಷವನ್ನು ತರವುದು. ನಿರುದ್ಯೋಗಿ ಯುವಕರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಬಿಳಿ ಬಣ್ಣ ಶುಭತರಲಿದೆ.
ಮೀನ
ಸಾಲಕ್ಕೆಂದು ಅಡವಿಟ್ಟಿದ್ದ ನಿಮ್ಮ ಆಭರಣವು ಋಣ ಪರಿಹಾರವಾಗಿ ಕೈ ಸೇರಲಿದೆ. ನಿಮ್ಮ ಆರ್ಥಿಕ ಭಾಗವು ಈ ದಿನ ತುಂಬಿಕೊಂಡಿರುತ್ತದೆ. ಪರಿವಾರದವರೊಡನೆ ಸಂಚಾರ ಮಾಡುವಂಥ ಸಾಧ್ಯತೆ ಇದೆ.
ADVERTISEMENT
ADVERTISEMENT