ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಮೃತ್ಯುವಿನ ದರ್ಶನ ಆದಂತಾಗಬಹುದು
Published 27 ಮೇ 2024, 1:26 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಹಿರಿಯರ ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಯೋಚಿಸುವುದರಲ್ಲಿ ಪ್ರಯೋಜನವಿಲ್ಲ. ಗೃಹ ಪ್ರವೇಶ ಮುಂದುಹಾಕುವುದು ಅನಿವಾರ್ಯ. ಸಣ್ಣ ವಿಷಯಗಳಿಂದ ದುಃಖ ಹೊಂದಬೇಡಿ.
ವೃಷಭ
ವೃಷಭ: ಹಳೆಯ ತಪ್ಪುಗಳು ಮತ್ತೆ ಮರುಕಳಿಸಿದಾಗ ಪೋಷಕರಿಗಾಗುವ ಅಸಮಾಧಾನವು ಮರ್ಯಾದೆಯ ಪ್ರಶ್ನೆಯಾಗುತ್ತದೆ. ರೇಷ್ಮೆ ಬೆಳೆಗಾರರಿಗೆ ಉತ್ತಮ ಆದಾಯ ಪ್ರಾಪ್ತಿ. ಮನೆಗೆ ಅತಿಥಿಯ ಆಗಮನವಾಗುವುದು
ಮಿಥುನ
ಮಿಥುನ: ಮಧುರ ಖಾದ್ಯಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ನಿರಪರಾಧಿಗಳ ಮೇಲೆ ಅಪರಾಧಗಳನ್ನು ಹೊರಸಿ ಅವರನ್ನು ದುಃಖಗೊಳಿಸುವುದು ಶ್ರೇಯಸ್ಸಲ್ಲ. ಮೃತ್ಯುವಿನ ದರ್ಶನ ಆದಂತಾಗಬಹುದು.
ಕರ್ಕಾಟಕ
ಕರ್ಕಾಟಕ: ಸದ್ಯದಲ್ಲಿ ಎದುರಾಗಿರುವ ಸಮಸ್ಯೆಗಳು ಪರಿಹಾರ ಕಾಣಲಿವೆ. ಕಚ್ಚಾ ತೈಲದ ವಹಿವಾಟನ್ನು ನಡೆಸುವವರಿಗೆ ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ಒಳ್ಳೆಯದಲ್ಲ.
ಸಿಂಹ
ಸಿಂಹ: ಜನಮಾನಸದಲ್ಲಿ ಅಚ್ಚಾಗಿರುವ ಕಾರ್ಯಗಳನ್ನು ನಿಲ್ಲಿಸಲು ಹೋಗಬೇಡಿ. ಕಾರ್ಯದೊತ್ತಡದ ನಡುವೆ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದು ಅನಿವಾರ್ಯ. ಆಲಂಕಾರಿಕ ವಸ್ತು ಕೊಳ್ಳಲು ಹಣ ಕಳೆಯುವಿರಿ.
ಕನ್ಯಾ
ಕನ್ಯಾ: ವೈವಾಹಿಕ ಜೀವನದಲ್ಲಿ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ ಅದು ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಪಕ್ಕವಾದ್ಯ ಪ್ರವೀಣರಿಗೆ ಸಮಾರಂಭಗಳಲ್ಲಿ ಮನ್ನಣೆ ಸಿಗಲಿದೆ.
ತುಲಾ
ತುಲಾ: ಹೋಟೆಲ್ ಉದ್ದಿಮೆದಾರರಿಗೆ ಸ್ವಲ್ಪ ಮಟ್ಟಿನ ನಷ್ಟಗಳು ಸಂಭವಿಸಬಹುದು ಅಥವಾ ಕೆಲಸಗಾರರ ಬೇಡಿಕೆಯಂಥ ಸಮಸ್ಯೆಗಳು ಎದುರಾಗಬಹುದು. ಹಳೆಯ ಏಕಾಂಗಿತನವು ಕಾಡುವ ಸಾಧ್ಯತೆ ಇದೆ.
ವೃಶ್ಚಿಕ
ವೃಶ್ಚಿಕ: ವಿದ್ಯುತ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದಲ್ಲಿ ಹಾಳಾಗುವ ಸಾಧ್ಯತೆ ಇದೆ. ಪಾರಂಪರಿಕ ವೃತ್ತಿ ಮುಂದುವರಿಸುವವರಿಗೆ ಶುಭಫಲ ಪ್ರಾಪ್ತಿಯಾಗುವುದು. ದಲ್ಲಾಳಿಗಳ ಆಮಿಷಕ್ಕೆ ಮರುಳಾಗದಿರಿ.
ಧನು
ಧನು:ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡು ವಾಗ ತಾಳ್ಮೆಯಿಂದ ಮತ್ತು ಜಾಣತನದಿಂದ ಒಪ್ಪಿಕೊಳ್ಳಿ. ಸಂತೋಷಕ್ಕಾಗಿ ಕೆಲವರು ಮಾಡುವ ಖರ್ಚು ದುಂದುವೆಚ್ಚವಾಗಿ ಕಾಣಬಹುದು.
ಮಕರ
ಮಕರ: ಅಕ್ಕ-ಪಕ್ಕದವರಲ್ಲಿ ಸ್ನೇಹಪರ ಸ್ವಭಾವ ತೋರುವುದರಿಂದಾಗಿ ವೈಯಕ್ತಿಕ ಸ್ಥಾನ ಮಾನಗಳು ಲಭಿಸುವುದು. ಆಪ್ತರ ಮನೆಯಲ್ಲಿನ ನಡೆಯುವ ಸಮಾರಂಭಗಳಿಗಾಗಿ ಜವಾಬ್ದಾರಿ, ಓಡಾಟ ಹೆಚ್ಚಲಿದೆ.
ಕುಂಭ
ಕುಂಭ: ದಿನದ ಮೊದಲ ಭಾಗ ಶ್ರಮ ಭರಿತವಾಗಿದ್ದರೂ ನಂತರ ಬಹಳ ವಿರಾಮ ದೊರೆಯುವುದು. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಿರಿ. ಸಂಘ ಸಂಸ್ಥೆಗಳಲ್ಲಿ ಸ್ಥಾನ ಮಾನಗಳು ದೊರೆಯಲಿದೆ.
ಮೀನ
ಮೀನ: ವಿಚಿತ್ರ ಕನಸುಗಳು ಹಗಲನ್ನೂ ಚಿಂತೆಯಲ್ಲಿ ಕಳೆಯುವಂತೆ ಮಾಡುತ್ತದೆ. ಕಾರ್ಯಕ್ಷೇತ್ರದಲ್ಲಿನ ಕೋಪವು ಮನೆಯ ಮಡದಿ ಹಾಗೂ ಮಗನ ಮೇಲೆ ಪ್ರಯೋಗವಾಗುವುದು ಬೇಡ.