ದಿನ ಭವಿಷ್ಯ: ಆ. 29– ಈ ರಾಶಿಯವರ ಸದ್ಯದ ಸಮಸ್ಯೆಗಳು ಪರಿಹಾರ ಕಾಣಲಿವೆ.
Published 28 ಆಗಸ್ಟ್ 2023, 22:38 IST
ಪ್ರಜಾವಾಣಿ ವಿಶೇಷ
ಮೇಷ
ಹೆಂಡತಿ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯದ ಕಡೆ ಹೆಚ್ಚಿನ ಗಮನವಿರುವುದು. ಸೋಮಾರಿತನ ಇಲ್ಲದೆ ದುಡಿಯಿರಿ, ಆದರೆ ಸಂಪಾದನೆಯಮಾರ್ಗ ದೇವರು ಮೆಚ್ಚುವ ರೀತಿಯಲ್ಲಿ ಸತ್ಯವಾಗಿದ್ದಾಗಿರಲಿ.
ವೃಷಭ
ಹೊಸತನ್ನು ಸಾಧಿಸುವಂಥ ಪ್ರಚೋದನೆ ಮತ್ತು ವಿಭಿನ್ನ ವಿಷಯಗಳು ನಿಮ್ಮ ಗಮನ ಸೆಳೆಯಲಿವೆ. ನೀರಿನ ಹತ್ತಿರದಲ್ಲಿ ಅಥವಾ ನೀರಿಗೆ ಸಂಬಂಧಿಸಿದ ಕೆಲಸ ನಡೆಸುವವರಿಗೆ ವೃತ್ತಿಯಲ್ಲಿ ಭೀತಿ ಎದುರಾಗಬಹುದು.
ಮಿಥುನ
ಇಂದು ಕಾರ್ಯ ಸಾಧನೆಗೆ ತೋರಿ ಬರುವ ಅಡ್ಡಿ ಆತಂಕಗಳ ನಿವಾರಣೆಯಾಗಲಿದೆ. ತಂದೆ ಹೇಳುವ ವಿಚಾರಗಳನ್ನು ಸಂಪೂರ್ಣ ಕೇಳಿಸಿಕೊಳ್ಳದೇ ಅಪಾರ್ಥವಾಗಿ ಅರ್ಥೈಸಿಕೊಳ್ಳುವುದರಿಂದ ಘರ್ಷಣೆಗಳಾಗಬಹುದು.
ಕರ್ಕಾಟಕ
ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲಿದೆ. ಅತಿಯಾದ ಆಲಸ್ಯತನ ಈ ದಿನ ನಿಮ್ಮ ಸರ್ವತೋಮುಖ ಏಳಿಗೆಗೆ ಹಾನಿ ಉಂಟುಮಾಡಲಿದೆ.
ಸಿಂಹ
ದೇವತಾನುಗ್ರದ ಜೊತೆಯಲ್ಲಿ ಹಲವು ದಿನಗಳಿಂದ ಇರುವ ಋಣಭಾದೆಗೆ ಅಂತ್ಯ ಕಾಣಿಸುವ ಕಾಲ ಒದಗಿಬರುವುದು. ನಿಮ್ಮ ನೇರ ನಡೆ-ನುಡಿ ಗೆಳೆತನಕ್ಕೆ ಹುಳಿ ಹಿಂಡಿದಂತಾಗಬಹುದು.
ಕನ್ಯಾ
ಸಂಸಾರದಲ್ಲಿ ಕೆಲವು ಬದಲಾವಣೆಗಳನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಬರುವುದು. ಕಾರ್ಯದಲ್ಲಿ ಕ್ರೀಯಾಶೀಲರಾಗಿ ಮತ್ತು ಮೇಲಧಿಕಾರಿಗಳಲ್ಲಿ ನಡೆನುಡಿ ಉತ್ತಮವಾಗಿದ್ದರೆ ಪ್ರತಿಫಲ ಆಕರ್ಷಕವಾಗಿರುವುದು.
ತುಲಾ
ಸಣ್ಣ ಪುಟ್ಟ ಸಮಸ್ಯೆಯನ್ನು ಹೊರತುಪಡಿಸಿ ಆರೋಗ್ಯ, ಮಾನಸಿಕ ನೆಮ್ಮದಿ ಉತ್ತಮವಾಗಿರುತ್ತದೆ. ಅಧಿಕ ರೀತಿಯ ಖರ್ಚು-ವೆಚ್ಚ ಬಂದರೂ ಉಳಿ ತಾಯಕ್ಕೆ ಕೊರತೆ ಕಾಣುವುದಿಲ್ಲ. ವ್ಯಾಸಂಗಕ್ಕಾಗಿ ಹಣದ ವ್ಯವಸ್ಥೆ ಆಗುವುದು.
ವೃಶ್ಚಿಕ
ವೃತ್ತಿರಂಗದಲ್ಲಿ ಸಂದರ್ಭೋಚಿತವಾಗಿ ವರ್ತಿಸುವುದರಿಂದ ಈ ದಿನ ಲಾಭವಾಗಬಹುದು ಆದರೆ, ಈ ದಿನದ ನಿಮ್ಮ ವರ್ತನೆ ನಾಳೆಯ ದಿನ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ತಿಂಡಿ ತಿನಿಸುಗಳ ವ್ಯಾಪಾರದವರಿಗೆ ಲಾಭ.
ಧನು
ನಿರ್ಲಿಪ್ತತೆಯಿಂದಾಗಿ ಸದ್ಯದ ಸಮಸ್ಯೆಗಳು ಪರಿಹಾರ ಕಾಣಲಿವೆ. ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ಲಭಿಸುವುವು. ನಿಮ್ಮ ಕಾರ್ಯರಂಗದಲ್ಲಿ ಹೊಸತನಕ್ಕೆ ಯೋಜನೆ ರೂಪಿಸಬಹುದು.
ಮಕರ
ಕೆಲವು ಮಾನಸಿಕ ತೊಂದರೆಗಳು ಎದುರಾಗಬಹುದು, ಯಾವುದೇ ರೀತಿಯ ದೊಡ್ಡ ಸಮಸ್ಯೆ ಉಂಟಾಗುವ ಪರಿಸ್ಥಿತಿ ಕಂಡುಬರುವುದಿಲ್ಲ. ಇಂದಿನಿಂದ ಯಾವುದಕ್ಕೂ ಮತ್ತೊಬ್ಬರ ಅವಲಂಬನೆ ಬೇಡವೆನಿಸುವುದು.
ಕುಂಭ
ಮಕ್ಕಳ ಜೊತೆ ಸಂತೋಷದಿಂದ ಸಮಯ ಕಳೆಯುವ ದಿಕ್ಕಿನಲ್ಲಿ ಕೆಲ ನಿರ್ಧಾರಗಳನ್ನು ಕೈಗೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಸ್ವಯಂ ಪರೀಕ್ಷೆಯಆರಂಭ ಹಾಗಾಗಿಯೇ ಎರಡೆರಡು ಬಾರಿ ಪರಿಶೀಲನೆ ಮಾಡುವುದು ಅಗತ್ಯ.
ಮೀನ
ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತಗೊಳ್ಳದೆ ಕೆಲಸ ನೆರವೇರಿಸಿ. ಬದುಕನ್ನು ಪಾರಮಾರ್ಥಿಕವಾಗಿ ನಡೆಸುವ ಬಗ್ಗೆ ನಿಮ್ಮ ಯೋಚನೆಗಳಿರಲಿ ಶ್ರೀಮಂಜುನಾಥನ ದರ್ಶನ, ಸೇವೆಯು ಭಾಗ್ಯ ಉಂಟುಮಾಡಲಿದೆ.