ಸೋಮವಾರ, 8 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರು ಚಿನ್ನ, ಬೆಳ್ಳಿ ಖರೀದಿಸುವ ಸಾಧ್ಯತೆಯಿದೆ
Published 8 ಡಿಸೆಂಬರ್ 2025, 1:10 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸ ಕೆಲಸಗಳ ಜವಾಬ್ದಾರಿಯನ್ನು ನಿಮ್ಮದಾಗಿ ಮಾಡಿಕೊಳ್ಳುತ್ತಿರುವ ಕಾರಣ ಬಿಡುವಿಲ್ಲದ ದುಡಿಮೆಯ ದಿನಗಳು ನಿಮ್ಮದಾಗಲಿವೆ. ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ.
ವೃಷಭ
ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದವರನ್ನು ಆ ಜಾಲದಿಂದ ಹೊರ ತರಲು ಪ್ರಯತ್ನ ನಡೆಸುವಿರಿ. ಸರ್ಕಾರಿ ನೌಕರರಿಗೆ ವರ್ಗಾವಣೆಯ ಯೋಗ. ಮಂಗಳಕಾರ್ಯಗಳು ಜರಗುವಾಗ ಅಸಾಂದರ್ಭಿಕ ಮಾತುಗಳನ್ನು ಆಡದಿರಿ.
ಮಿಥುನ
ಇಷ್ಟವೆಂದು ಅಧಿಕವಾಗಿ ಸೇವಿಸಿದ ಆಹಾರವು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ. ಕೋಪವನ್ನು ಶಮನ ಮಾಡಿಕೊಳ್ಳಲು ಸಾಧ್ಯವಿಲ್ಲ. ವೃತ್ತಿಯಲ್ಲಿ ಪೈಪೋಟಿಯನ್ನು ಎದುರಿಸುವಿರಿ.
ಕರ್ಕಾಟಕ
ಮುಕ್ತ ಭಾವನೆಯಿಂದ ಆಡಿದ ಮಾತುಗಳು ಉಳಿದವರಿಗೆ ಅಧಿಕ ಪ್ರಸಂಗದಂತೆ ತೋರುವುದರಲ್ಲಿ ಸಂಶಯವಿಲ್ಲ. ಅತಿ ಖರ್ಚು ವೆಚ್ಚಗಳು ತಗ್ಗುವುದು. ಮುಂದಿನ ಓದಿನ ಬಗ್ಗೆ ಯೋಚಿಸುವಿರಿ.
ಸಿಂಹ
ಸಾಮರ್ಥ್ಯದ ಅರಿವಿಲ್ಲದೆ ಲಘುವಾಗಿ ಮಾತನಾಡಿದವರಿಗೆ ಸರಿಯಾದ ಪಾಠವನ್ನು ಕಲಿಸುವಿರಿ. ಕಾಗದಪತ್ರಗಳಿಗೆ ಓದಿಯೇ ಸಹಿ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಧು ಸಂತರ ದರ್ಶನ ಮಾಡುವಿರಿ.
ಕನ್ಯಾ
ಶಿಬಿರಗಳಲ್ಲಿ ಭಾಗವಹಿಸಿದ ಕಾರಣವಾಗಿ ಚಟುವಟಿಕೆಯಿಂದ ಇರುವ ಮಕ್ಕಳು ಮನಸ್ಸಂತೋಷಕ್ಕೆ ಕಾರಣವಾಗಿರುತ್ತಾರೆ. ಸ್ವಾರ್ಥದಿಂದ ವ್ಯವಹರಿಸಬೇಡಿ.
ತುಲಾ
ಸಂಸಾರದ ಘನತೆ ಹೆಚ್ಚಿಸಲು ಸಾಹಸ ಪಡುತ್ತಿರುವ ನಿಮಗೆ ಹೆಂಡತಿ ಮಕ್ಕಳು ನೆರವಾಗುವರು. ಕೇಶವಿನ್ಯಾಸಗಾರರು ಇತರರರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಪ್ರಾರ್ಥನೆಯ ಪರಿಣಾಮ ವಧು ದೊರೆಯುವಳು.
ವೃಶ್ಚಿಕ
ಕಣ್ಣಿನ ಆರೋಗ್ಯದ ವಿಚಾರವಾಗಿ ಎಷ್ಟು ಕಾಳಜಿ ವಹಿಸಿದರೂ ವೈದ್ಯರ ಭೇಟಿ ನಿಯಮಿತವಾಗಿ ಮಾಡುವುದು ತಪ್ಪುವುದಿಲ್ಲ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಮಿತವಾದ ಆಹಾರ ಸೇವನೆ ಇರಲಿ.
ಧನು
ತಾಳಪತ್ರಗಳ ಅಧ್ಯಯನ ನಡೆಸಬೇಕೆಂದು ಇರುವವರಿಗೆ ಸರಿಯಾದ ಸ್ಥಳ ದೊರೆಯುತ್ತದೆ. ಹಳೆಯ ದಿನಚರಿಗೆ ಮರಳುವಿರಿ. ಸಾಕುಪ್ರಾಣಿಯ ಸಂಖ್ಯೆ ಹೆಚ್ಚಾಗುವುದು.
ಮಕರ
ದೃಢ ನಿಶ್ಚಯ ಮತ್ತು ಸಾಧಿಸಲೇಬೇಕೆಂಬ ಛಲದ ಮನೋಭಾವ ಯಶಸ್ಸಿಗೆ ಕಾರಣವೆನಿಸಲಿದೆ. ಕೆಲವು ವ್ಯಕ್ತಿಗಳ ದ್ವೇಷದ ಕೃತ್ಯಗಳ ಫಲವಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಅನವಶ್ಯಕ ವಸ್ತುಗಳನ್ನು ಖರೀದಿಸದಿರಿ.
ಕುಂಭ
ಹಿರಿಯರ ಜೀವನಾನುಭವ ಸಲಹೆಗಳನ್ನು ಕೇಳಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಿಕೊಳ್ಳಿರಿ. ಚಿನ್ನಾಭರಣ ಅಥವ ಬೆಳ್ಳಿಯ ಸಾಮಗ್ರಿಗಳನ್ನು ಖರೀದಿಸುವ ಸಾಧ್ಯತೆ ಇದೆ.
ಮೀನ
ಹಲವು ದಿನಗಳ ಪ್ರತೀಕ್ಷೆಯ ಮನೋಭಿಲಾಷೆಯು ಪೂರ್ಣಗೊಳ್ಳುವ ದಿನ ಇದಾಗಲಿದೆ. ವಯಸ್ಸಿಗೆ ಮೀರಿದ ಗಾಂಭೀರ್ಯವನ್ನು ಹೊಗಳುವವರು ಕೆಲವರಾದರೆ ತೆಗಳುವವರು ಕೆಲವರಿರುತ್ತಾರೆ.
ADVERTISEMENT
ADVERTISEMENT