ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ
Published 9 ಸೆಪ್ಟೆಂಬರ್ 2025, 0:25 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾಧನೆಯಲ್ಲಿ ಮೇಲುಗೈ ಸಾಧಿಸುವಿರಿ. ವ್ಯವಹಾರದಲ್ಲಿನ ಲಾಭವು ಅಭಿವೃದ್ಧಿಗೆ ಸಹಕಾರಿ. ಆತಂಕ ಎದುರಾದಾಗ ಹಿರಿಯರ ಸಲಹೆ ಸಮಾಧಾನ ತರಲಿದೆ.
ವೃಷಭ
ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಲ್ಲಿ ನಿಧಾನವಾಗಿ ಯಶಸ್ಸು ಪ್ರಾಪ್ತಿ. ಕೌಟುಂಬಿಕವಾಗಿ ಕೆಟ್ಟು ಹೋದ ಸಂಬಂಧಗಳು ಮರಳಿ ಬರಲಿವೆ. ಬರಹಗಾರರಿಗೆ ಶುಭ ದಿನ.
ಮಿಥುನ
ಸಮೀಪವರ್ತಿಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳಲ್ಲಿನ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಕುಟುಂಬ ವರ್ಗದವರಲ್ಲಿ ಆರೋಗ್ಯ ಉತ್ತಮವಾಗಿರುವುದು. ಓದಿನಲ್ಲಿ ಅತೀವ ಆಸಕ್ತಿ ಇರುವುದು.
ಕರ್ಕಾಟಕ
ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡುವಿರಿ. ನಟ ನಟಿಯರಿಗೆ ಖ್ಯಾತಿ ಹೊಂದಲು ವಿಫುಲ ಅವಕಾಶಗಳು ದೊರೆಯಲಿವೆ. ಭಿನ್ನಾಭಿಪ್ರಾಯ ದೂರವಾಗಿ ಸಂಬಂಧ ಸುಧಾರಿಸಲಿದೆ.
ಸಿಂಹ
ಕಳೆದು ಹೋಗಿರಬಹುದೆಂದು ತಿಳಿದಿದ್ದ ದಾಖಲೆಪತ್ರಗಳು ಸಿಕ್ಕಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಕಬ್ಬಿಣ, ಸಿಮೆಂಟ್ ವ್ಯಾಪಾರದವರು ನಷ್ಟ ಫಲವನ್ನು ಅನುಭವಿಸಬೇಕಾಗುತ್ತದೆ.
ಕನ್ಯಾ
ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಜಾಣತನ ತೋರಿಸಬೇಕಾಗುತ್ತದೆ. ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಹಾಗೂ ಹೊಸ ಸಾಧ್ಯತೆಗಳನ್ನು ಸಾಧಿಸಲು ಸಮಯ ಒದಗಿದೆ.
ತುಲಾ
ಮಕ್ಕಳ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಿ. ಚಿಲ್ಲರೆ ವ್ಯಾಪಾರಿಗಳಿಗೆ ತೃಪ್ತಿಕರ ಲಾಭ. ಸಂದರ್ಭಕ್ಕೆ ಸರಿಯಾಗಿ ಹೊಂದಿಕೊಳ್ಳುವ ಗುಣ ಹಾಗೂ ಸಾಮರ್ಥ್ಯ ಮುಖ್ಯವೆನಿಸುವುದು.
ವೃಶ್ಚಿಕ
ಔಷಧಿ ವ್ಯಾಪಾರಿಗಳಿಗೆ ವ್ಯಾಪಾರದಿಂದ ಆದಾಯ ಹೆಚ್ಚುವುದು. ಯೋಚನೆಗಳನ್ನು ಜನರು ಇಷ್ಟ ಪಡುತ್ತಾರೆ. ಆರ್ಥಿಕ ತಾಪತ್ರಯಗಳೇನು ಇರುವುದಿಲ್ಲ. ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ.
ಧನು
ಕೋರ್ಟು ವ್ಯವಹಾರಗಳಿಗೆ ಓಡಾಟ ತಪ್ಪಲಿದೆ. ಮುಖ್ಯವಾದ ಕೆಲಸವೊಂದು ದಿನಾಂತ್ಯದ ವೇಳೆಗೆ ನೆರವೇರುವುದು. ಆರೋಗ್ಯದಲ್ಲಿ ಬದಲಾವಣೆಗಳಿರುವುದು. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಿದ್ದೀರಿ.
ಮಕರ
ವೃತ್ತಿರಂಗದಲ್ಲಿ ಅದೃಷ್ಟ ನಿಮ್ಮ ಪಾಲಿಗಿರುವುದು. ಆಫೀಸಿನಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ. ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು. ಸಿದ್ಧಿ ವಿನಾಯಕನನ್ನು ಆರಾಧಿಸಿ.
ಕುಂಭ
ವ್ಯವಸ್ಥಾಪಕರ ಜತೆ ನಿಮ್ಮ ಧೈರ್ಯದ ಮಾತುಗಳು ಜವಾಬ್ದಾರಿಯನ್ನು ಉತ್ತಮ ಗುಣಮಟ್ಟದ್ದಾಗಿಸುತ್ತದೆ. ಉತ್ತಮ ವಿಚಾರಗಳು ಜಾರಿಗೆ ಬರಬೇಕೆಂದು ಮಾಡುತ್ತಿರುವ ಪ್ರಯತ್ನವು ಶೀಘ್ರ ಶುಭಫಲ ನೀಡುವುದು.
ಮೀನ
ಖಾಸಗಿ ಕಂಪನಿಯಲ್ಲಿರುವವರು ಉದ್ಯೋಗದಲ್ಲಿ ತಮ್ಮ ಮೇಲಧಿಕಾರಿಗಳಿಂದ ಅನುಕೂಲ ಪಡೆಯುವರು. ಗಣಕಯಂತ್ರದ ರೀತಿಯ ಉಪಕರಣಗಳ ತಯಾರಕರು ಹಾಗೂ ದುರಸ್ತಿ ಮಾಡುವವರಿಗೆ ಉತ್ತಮ ದಿನ.
ADVERTISEMENT
ADVERTISEMENT