ದಿನ ಭವಿಷ್ಯ: ವಾಹನ ಚಾಲನೆ ಮಾಡುವಾಗ ಆತುರ ಬೇಡ
Published 2 ಮಾರ್ಚ್ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಭಾವನೆಗಳನ್ನು ಹಂಚಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಪರಿಚಯ, ಸ್ನೇಹವು ಆಗಲಿದೆ. ಬಂಗಾರದ ಮೇಲೆ ಬಂಡವಾಳ ಹಾಕಲು ದಿನ ಉತ್ತಮ. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ.
02 ಮಾರ್ಚ್ 2026, 19:30 IST
ವೃಷಭ
ಸಹಾಯ ಅಪೇಕ್ಷಿಗಳಿಗೆ ಸಹಾಯ ಹಸ್ತ ತೋರುವುದು ದೇವರು ಮೆಚ್ಚುವ ಕೆಲಸವೆಂದು ತಿಳಿದುಬರಲಿದೆ. ನೆಂಟಸ್ತಿಕೆಯಲ್ಲಿಯೇ ಉತ್ತಮ ಸಂಬಂಧ ಕೂಡಿ ಬರುವುದು.
02 ಮಾರ್ಚ್ 2026, 19:30 IST
ಮಿಥುನ
ಸುಖಕ್ಕಿಂತ ಹೆಚ್ಚಾಗಿ ಭವಿಷ್ಯದ ಕುರಿತು ಗಂಭೀರ ಆಲೋಚನೆ ಮಾಡಿ. ವಕೀಲರಿಗೆ ಹೆಚ್ಚಿನ ಆದಾಯ ಗಳಿಕೆಯಾದರೂ ಆತ್ಮಸಾಕ್ಷಿ ಒಪ್ಪಿಕೊಳ್ಳಲಾಗದ ಘಟನೆ ನಡೆಯಬಹುದು.
02 ಮಾರ್ಚ್ 2026, 19:30 IST
ಕರ್ಕಾಟಕ
ಆತ್ಮಸ್ಥೈರ್ಯ ಹಾಗೂ ದೇವರ ಮೇಲಿರುವ ನಂಬಿಕೆಯಿಂದಾಗಿ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಪರಿಹರಿಸಿಕೊಳ್ಳುವಿರಿ. ಹೊಸ ಯೋಜನೆಗಳ ತಯಾರಿಗೆ ಉತ್ತಮ ಸಮಯ.
02 ಮಾರ್ಚ್ 2026, 19:30 IST
ಸಿಂಹ
ಬದುಕಿನ ಕವಲುದಾರಿಯಲ್ಲಿರುವ ನಿಮಗೆ ದೇವತಾನುಗ್ರಹದಿಂದ ಸರಿಯಾದ ಮಾರ್ಗದರ್ಶನ ಸಿಗುವುದು. ಸಮಾಜ ಸೇವೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಿರುವವರಿಗೆ ಪ್ರಚಾರ ಸಿಗುವುದು.
02 ಮಾರ್ಚ್ 2026, 19:30 IST
ಕನ್ಯಾ
ಆದಾಯಕ್ಕಿಂತ ಜಾಸ್ತಿ ಅನಿವಾರ್ಯತೆಯ ಖರ್ಚುಗಳು ಎದುರಾಗಲಿವೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ. ವೃಥಾ ತಿರುಗಾಟದಿಂದ ಧನ ಹಾನಿ ಯಾದರೂ, ಸಂಭ್ರಮ ಇರಲಿದೆ.
02 ಮಾರ್ಚ್ 2026, 19:30 IST
ತುಲಾ
ವ್ಯವಹಾರದಲ್ಲೂ, ಸಂಬಂಧದಲ್ಲೂ ಧನಾತ್ಮಕ ಮನೋಭಾವವೇ ಸೋಲುಗಳಿಗೆ ಕಾರಣವೆಂಬುವುದನ್ನು ಮರೆಯದಿರಿ. ಮುಂದಿನ ಯೋಜನೆಗಳ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಿ.
02 ಮಾರ್ಚ್ 2026, 19:30 IST
ವೃಶ್ಚಿಕ
ಗುರಿಯನ್ನು ತಲುಪಲು ಪರಿಶ್ರಮ ಪಡಬೇಕಾದೀತು. ಮನಃಶಾಸ್ತ್ರ ವಿಚಾರದ ಅಧ್ಯಯನ ನಿರತರಿಗೆ ಅನುಕೂಲಕರ ದಿನ. ಯೋಗ, ಧ್ಯಾನಕ್ಕಾಗಿ ಅಲ್ಪ ಸಮಯವನ್ನು ಮೀಸಲಿಡಿ.
02 ಮಾರ್ಚ್ 2026, 19:30 IST
ಧನು
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉದ್ಯೋಗವನ್ನು ದೊರಕಿಸಿಕೊಳ್ಳಬಹುದು. ಪಿತೃ ವರ್ಗದ ಆಶೀರ್ವಾದವಿದೆ. ವಾಹನ ಚಾಲನೆಯಂಥ ಕಾರ್ಯದಲ್ಲಿ ಆತುರವು ಒಳ್ಳೆಯದಲ್ಲ.
02 ಮಾರ್ಚ್ 2026, 19:30 IST
ಮಕರ
ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಹೆಂಡತಿಯ ಕುಶಲಮತಿಯು ಉಪಯೋಗಕ್ಕೆ ಬರಲಿದೆ. ಬುದ್ಧಿವಂತಿಕೆ ಹಾಗೂ ಯೋಜನೆಗಳು ಸಂವಹನವನ್ನು ಸುಲಭಗೊಳಿಸುತ್ತವೆ. ಏಕಾಗ್ರತೆ ನಿಮಗೆ ಜಯ ತರಲಿದೆ.
02 ಮಾರ್ಚ್ 2026, 19:30 IST
ಕುಂಭ
ಪ್ರೀತಿ, ವಾತ್ಸಲ್ಯ ತೋರುವ ಜನರು ಇದ್ದಾರೆಂಬುದು ಆತ್ಮವಿಶ್ವಾಸ ಹೆಚ್ಚಲು ಕಾರಣ. ನೀವಾಡುವ ಮಾತುಗಳಿಂದ ಗೌರವವು ದೊರಕುವುದು. ಆಂಜನೇಯನನ್ನು ಆರಾಧಿಸಿ.
02 ಮಾರ್ಚ್ 2026, 19:30 IST
ಮೀನ
ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಿಮಗೆ ಸದ್ಯದ ಪರಿಸ್ಥಿತಿ ಅನುಕೂಲಕರವಾಗಿದೆ. ಸಂಸಾರದ ಹೊಣೆಗಾರಿಕೆಯ ಕಾರಣದಿಂದಾಗಿ ಆದಾಯ ವೆಚ್ಚಗಳು ಸರಿ ಸಮವಾಗಿರುವುದು.
02 ಮಾರ್ಚ್ 2026, 19:30 IST