ಸೋಮವಾರ, 7 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದೆ, ಮದುವೆ ಮಾತುಕತೆಗಳು ನಡೆಯಲಿವೆ.
Published 13 ಏಪ್ರಿಲ್ 2025, 23:57 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಡದಿಯಲ್ಲಿ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಭಿನ್ನಾಭಿಪ್ರಾಯ ಮೂಡದಂತೆ ಗಮನವಹಿಸಿ. ಉಳಿತಾಯದ ಹಣವನ್ನು ಮನೆಯ ನಿರ್ಮಾಣ ಕಾರ್ಯಗಳಿಗೆ ಬಳಸುವಿರಿ. ಆಲಂಕಾರಿಕ ವಸ್ತುಗಳ ಮಾರಾಟದಿಂದ ಆದಾಯ. ‌
ವೃಷಭ
ಕೇಟರಿಂಗ್ ಸೇವೆಯನ್ನು ಮಾಡುವವರಿಗೆ ಅಧಿಕ ಲಾಭ ಇರಲಿದೆ. ಸರಿಯಾದ ಪರಿಶೀಲನೆ ಇಲ್ಲದೆ ಯಾವ ಕ್ಷೇತ್ರಗಳಲ್ಲಿಯೂ ಹೂಡಿಕೆ ಸಲ್ಲದು. ಶ್ರೀರಾಮನಾಮದ ಜಪವನ್ನು ಮಾಡಿ. ‌
ಮಿಥುನ
ಸಹೋದರಿಯರ ಆಗಮನ ಅಥವಾ ಭೇಟಿಯು ಸಂತಸ ತರುತ್ತದೆ. ಆಗು ಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅನಿರೀಕ್ಷಿತ ಧನಾಗಮನದಿಂದ ಸಂತಸ ಮೂಡಲಿದೆ.
ಕರ್ಕಾಟಕ
ಬೇಕಾದ ರೀತಿಯಲ್ಲಿ ವ್ಯಕ್ತಿಯ ಮನಃ ಪರಿವರ್ತನೆ ಮಾಡುವ ವಿಚಾರದಲ್ಲಿ ಸಫಲರಾಗುತ್ತೀರಿ. ಉದರವ್ಯಾಧಿ ಅಥವಾ ಜೀರ್ಣಾಂಗಕ್ಕೆ ಸಂಬಂಧಿಸದಂತೆ ಅನಾರೋಗ್ಯ ಎದುರಾಗಬಹುದು.
ಸಿಂಹ
ಕಲಿಕೆಯಿಂದ ಆಫೀಸಿನ ಕೆಲಸಗಳನ್ನು ಇನ್ನಷ್ಟು ತಿಳಿದು ಕೊಳ್ಳುವ ಅವಕಾಶ ಸಿಗುತ್ತದೆ. ಕ್ರೀಡಾಪಟುಗಳಿಗೆ ಪುರಸ್ಕಾರ, ಅಭಿನಂದನೆಗಳು ಪ್ರಾಪ್ತಿ. ಮಗನಿಂದ ಮನಸ್ಸಿಗೆ ನೋವಾಗುವಂತಹ ಘಟನೆ ನಡೆಯಬಹುದು.
ಕನ್ಯಾ
ದೂರದ ಊರಿನಲ್ಲಿರುವ ಆಪ್ತರನ್ನು ಭೇಟಿ ಮಾಡುವ ಸಲುವಾಗಿ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದ್ದು , ಮದುವೆಯ ಮಾತುಕತೆಗಳನ್ನು ನಡೆಸಲಿದ್ದಾರೆ.
ತುಲಾ
ವ್ಯಾಪಾರಸ್ಥರು ಹೊಸ ತರದ ಯೋಜನೆಗಳನ್ನು ರೂಪಿಸಿಕೊಳ್ಳುವುದರಿಂದ ಗ್ರಾಹಕರ ಪರಿಚಯ ಆಗಬಹುದು. ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣ ಸಿಗಲಿದೆ. ಸಂಗೀತಕ್ಕೆ ಪ್ರೋತ್ಸಾಹ ಸಿಗಲಿದೆ.
ವೃಶ್ಚಿಕ
ಯಾರ ನೆರವೂ ಇಲ್ಲದೆ ಕಾರ್ಯಗಳನ್ನು ಸ್ವಯಂ ನಿರ್ವಹಿಸುವಂತಾಗಲಿದೆ. ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ರಕ್ಷಣಾ ದೇವತೆಯನ್ನು ಆರಾಧಿಸಿ. ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳು ನಿವಾರಣೆಯಾಗಲಿವೆ.
ಧನು
ವಿವಿಧ ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ಹಣಕಾಸಿನ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಿರಿ.
ಮಕರ
ನೂತನ ಕೆಲಸಗಳ ಆರಂಭಕ್ಕೆ ಮತ್ತು ಒಡಂಬಡಿಕೆಗೆ ಸೂಕ್ತ ಕಾಲವಾಗಿರುತ್ತದೆ. ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳು ಸಂತಸ ಹೊಂದುವರು.
ಕುಂಭ
ವಾಕ್ಚಾತುರ್ಯದಿಂದ ಕಾರ್ಯಗಳನ್ನು ನೆರವೇರಿಸಿಕೊಳ್ಳುವಿರಿ. ಉದಯೋನ್ಮುಖ ತಾರೆಯರಿಗೆ ಅವಕಾಶಗಳಿಂದ ಲಾಭವಿದೆ. ತತ್ವಜ್ಞಾನಿಗಳೊಡನೆ ಸುದೀರ್ಘ ಚರ್ಚೆ ನಡೆದು ಬುದ್ಧಿಮಟ್ಟ ಹೆಚ್ಚಲಿದೆ.
ಮೀನ
ಪಾಲುದಾರಿಕೆಯ ವ್ಯವಹಾರದ ಯೋಜನೆಯ ಬೆಳವಣಿಗೆಯಲ್ಲಿ ಸಂಬಂಧಿಸಿದವರಿಂದ ಚರ್ಚೆ ನಡೆಸದೆ ತೀರ್ಮಾನಗಳಿಗೆ ಬರುವುದು ಸರಿಯಲ್ಲ. ಸರ್ಕಾರಿ ಸಂಸ್ಥೆಗಳಲ್ಲಿ ಉಪನ್ಯಾಸ ಕೈಗೊಳ್ಳುವ ಅವಕಾಶವಿದೆ.
ADVERTISEMENT
ADVERTISEMENT