ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯದ ಆದೇಶ

ಸಾರಿದೆ.

ಈ ಸಂಬಂಧ ಕಾಯ್ದಿರಿಸಿದ್ದ ಆದೇಶದ ನಿರ್ಣಯಾತ್ಮಕ ಭಾಗವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶುಕ್ರವಾರ ಕಿಕ್ಕಿರಿದು ತುಂಬಿದ್ದ ತೆರೆದ ನ್ಯಾಯಾಲಯದಲ್ಲಿ (ಸಿಸಿಸಿಎಚ್–82) ಪ್ರಕಟಿಸಿದರು.

‘ಆರೋಪಿ ವಿರುದ್ಧದ ಭಾರತೀಯ ದಂಡ ಸಂಹಿತೆ–1860 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ವಿವಿಧ ಕಲಂಗಳ ಅಡಿಯಲ್ಲಿನ ದೋಷಾರೋಪಗಳು ವಿಚಾರಣೆಯಲ್ಲಿ ಸಾಬೀತಾಗಿವೆ. ಹೀಗಾಗಿ, ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಶನಿವಾರ (ಆ.2) ನಿಗದಿಪಡಿಸಲಾಗುವುದು’ ಎಂದು ನ್ಯಾಯಾಧೀಶರು ಘೋಷಿಸಿದರು.

ಪ್ರಜ್ವಲ್ನನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಾಸಿಕ್ಯೂಷನ್ ಪರ ಬಿ.ಎನ್.ಜಗದೀಶ್ ಮತ್ತು ಅಶೋಕ್ ಎನ್.ನಾಯಕ್ ವಾದ ಮಂಡಿಸಿದ್ದರು.

ಯಾವುದೀ ಪ್ರಕರಣ?: ಲೋಕಸಭೆಗೆ 2024ರ ಏಪ್ರಿಲ್ನಿಂದ ಜೂನ್ ಮಧ್ಯಭಾಗದಲ್ಲಿ ವಿವಿಧ ಹಂತಗಳಲ್ಲಿ ನಡೆದ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ

ಸ್ಪರ್ಧಿಸಿದ್ದ. ಈ ವೇಳೆ ಸಂಸದನಾಗಿದ್ದ ಪ್ರಜ್ವಲ್ನದ್ದು ಎನ್ನಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಹಲವು ವಿಡಿಯೊಗಳು ಹಾಗೂ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದ್ದವು. ಈ ವಿಡಿಯೊಗಳ ಪೈಕಿ 48 ವರ್ಷದ ಸಂತ್ರಸ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಿಡಿಯೊ ಕೂಡಾ ಬಿತ್ತರಗೊಂಡಿತ್ತು.

ಪ್ರಜ್ವಲ್ ಸ್ವಯಂ ಚಿತ್ರೀಕರಿಸಿದ್ದ ಎನ್ನಲಾದ ಹತ್ತಾರು ಅಶ್ಲೀಲ ವಿಡಿಯೊ ಗಳು ವ್ಯಾಪಕವಾಗಿ ಬಿತ್ತರಗೊಂಡು ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲೇ ಹಾಲಿ ಪ್ರಕರಣದ ಸಂತ್ರಸ್ತೆ, ತಮ್ಮ ಮನೆಯಿಂದ ಕಣ್ಮರೆಯಾಗಿದ್ದರು. ಈ ವೇಳೆ ಸಂತ್ರಸ್ತೆಯ ಪುತ್ರ 2024ರ ಮೇ 2ರಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ, ಪ್ರಜ್ವಲ್ ತಂದೆಯೂ ಆಗಿರುವ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮತ್ತು

ಸಂಬಂಧಿ ಸತೀಶ್ ಬಾಬಣ್ಣ ವಿರುದ್ಧ ‘ನನ್ನ ತಾಯಿಯ ಅಪಹರಣ ಮಾಡಲಾಗಿದೆ’ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಕ್ರಿಮಿನಲ್ ದೂರು ದಾಖಲಿಸಿ ಕೊಂಡು ಪ್ರಕರಣವನ್ನು ಭೇದಿಸಿದ್ದ ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ಸಂತ್ರಸ್ತೆಯು

ತೋಟದ ಮನೆಯೊಂದರಲ್ಲಿ ಇದ್ದ ಜಾಡನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಸಂತ್ರಸ್ತೆಯು, ‘ಪ್ರಜ್ವಲ್ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ಅತ್ಯಾಚಾರ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.

ಈ ಸಂಬಂಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ, ಭಾರತೀಯ ದಂಡ ಸಂಹಿತೆ–1860ರ ಕಲಂ 376(2)(ಕೆ), 376(2)

(ಎನ್), 354(ಎ)(ಬಿ)(ಸಿ), 506, 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66(ಇ) ಅಡಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಬಳಿಕ ಸಂತ್ರಸ್ತೆಯನ್ನು ಸಕ್ಷಮ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್ಪಿಸಿ) ಕಲಂ 164ರ ಅಡಿ ಹೇಳಿಕೆ ದಾಖಲು ಮಾಡಿಸಲಾಗಿತ್ತು.

ಯಾವುದಕ್ಕೆ ಎಷ್ಟು ಶಿಕ್ಷೆ?

376(2)(ಕೆ) ಅತ್ಯಾಚಾರ-ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ. 354(ಎ)–ಲೈಂಗಿಕ ಕಿರುಕುಳ, ಬಲವಂತದ ದೈಹಿಕ ಸಂಪರ್ಕ-ಕನಿಷ್ಠ 3 ವರ್ಷ

376(2)(ಎನ್)-ಸಾರ್ವಜನಿಕ ಸೇವಕ ಅಧಿಕಾರ ದುರ್ಬಳಕೆ ಮಾಡಿ ಎಸಗಿದ ಅತ್ಯಾಚಾರ- ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ. 354(ಬಿ)–ಬಲವಂತದಿಂದ ವಿವಸ್ತ್ರಗೊಳಿಸುವುದು-ಕನಿಷ್ಠ 3 ವರ್ಷ, ಗರಿಷ್ಠ 7 ವರ್ಷ

354(ಸಿ)-ಮಹಿಳೆಯ ಖಾಸಗಿ ಚಿತ್ರ ಸೆರೆ ಹಿಡಿಯುವುದು-ಕನಿಷ್ಠ 1 ವರ್ಷ, ಗರಿಷ್ಠ 3 ವರ್ಷ

506-ಕ್ರಿಮಿನಲ್ ಬೆದರಿಕೆ-ಕನಿಷ್ಠ 2 ವರ್ಷ, ಗರಿಷ್ಠ 7 ವರ್ಷ

201-ಸಾಕ್ಷ್ಯ ನಾಶ-ಕನಿಷ್ಠ 3 ವರ್ಷ, ಗರಿಷ್ಠ 7 ವರ್ಷ

ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66(ಇ)-ವ್ಯಕ್ತಿಯ ಗೋಪ್ಯತೆಯ ಉಲ್ಲಂಘನೆ-3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಗರಿಷ್ಟ ₹2 ಲಕ್ಷ ದಂಡ.

ಶನಿವಾರ ಏನೇನು ನಡೆಯಲಿದೆ?

ಅಪರಾಧಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಮುನ್ನ, ‘ಕಾನೂನು ಅಡಿಯಲ್ಲಿ ವಿಧಿಸಲಾಗುತ್ತಿರುವ ಈ ಶಿಕ್ಷೆಯ ಪ್ರಮಾಣವು ಗರಿಷ್ಠವಾಗದಂತೆ ಕಡಿಮೆ ಮಾಡಲು ಏನಾದರೂ ಸಕಾರಣಗಳಿವೆಯೇ’ ಎಂದು ಅಪರಾಧಿಯನ್ನು ಪ್ರಶ್ನಿಸುತ್ತಾರೆ. ಆಗ ಅಪರಾಧಿ ಇಂತಿಂತಹ ಕಾರಣಗಳಿಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೇಳಿಕೊಳ್ಳಲು ಅವಕಾಶ ಇರುತ್ತದೆ.

ಅಪರಾಧಿ ಖುದ್ದಾಗಿ ಮಾಡುವ ಈ ಮೌಖಿಕ ಮನವಿ ಸಕಾರಣವಾಗಿದೆ ಎಂದಾದಲ್ಲಿ ಅಥವಾ ನ್ಯಾಯಾಧೀಶರಿಗೆ ಮನವರಿಕೆ ಆಗುವಂತಿದ್ದಲ್ಲಿ ಶಿಕ್ಷೆಯ ಪ್ರಮಾಣವನ್ನು ಗರಿಷ್ಠ ಮಟ್ಟದಿಂದ ಕನಿಷ್ಠತಮಕ್ಕೆ ಇಳಿಸಲು ಅವಕಾಶ ಇರುತ್ತದೆ. ನಂತರ ಈ ಹೇಳಿಕೆಯನ್ನು ಪರಿಗಣಿಸಿ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ನಿಗದಿಗೊಳಿಸುತ್ತಾರೆ.

ಬಿ.ಕೆ. ಸಿಂಗ್ ನೇತೃತ್ವದ ಎಸ್ಐಟಿ

ಪ್ರಕರಣದ ತನಿಖೆ ನಡೆಸಲು ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲಾಗಿತ್ತು. ತಂಡದಲ್ಲಿ ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್, ಸೀಮಾ ಲಾಟ್ಕರ್ ಇದ್ದರು. ತನಿಖಾಧಿಕಾರಿಯಾಗಿ ಬಿ.ಸುಮಾರಾಣಿ ಅವರನ್ನು ನೇಮಿಸಲಾಗಿತ್ತು.

ಪ್ರತಿಕ್ರಿಯಿಸದ ಎಚ್.ಡಿ. ರೇವಣ್ಣ

ತಮ್ಮ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಲಯ ಶಿಕ್ಷೆ ವಿಧಿಸಿ ನೀಡಿದ ತೀರ್ಪಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ನಿರಾಕರಿಸಿದರು.

ತೀರ್ಪು ಹೊರಬೀಳುವ ವೇಳೆಗೆ ವಿಧಾನಸೌಧದಲ್ಲಿದ್ದ ರೇವಣ್ಣ ಅವರ ಪ್ರತಿಕ್ರಿಯೆ ಕೇಳಲು ಮಾಧ್ಯಮ ಪ್ರತಿನಿಧಿಗಳು ಕಾದು ನಿಂತಿದ್ದರು.

ವಿಧಾನಸೌಧದಿಂದ ಹೊರ ಬಂದ ರೇವಣ್ಣ ಅವರನ್ನು ಮಾತ ನಾಡಿಸಲು ಸುದ್ದಿ ವಾಹಿನಿಯ ಕ್ಯಾಮೆರಾಗಳು, ಪತ್ರಕರ್ತರು ಸುತ್ತುವರೆದಾಗ, ತಲೆ ತಗ್ಗಿಸಿ, ಮೌನವಾಗಿ ಹೊರ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.