ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ರಿಯಲ್ ಎಸ್ಟೇಟ್ ವ್ಯವಹಾರಗಳ ಸಮಸ್ಯೆ ನಿವಾರಣೆಯಾಗಲಿದೆ
Published 6 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರಭಾವಿ ವ್ಯಕ್ತಿಯ ಸಹಾಯದಿಂದ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಉತ್ತಮವಾಗಿ ನೆರವೇರಿಸಿಕೊಳ್ಳುವಿರಿ. ಹಣಕಾಸು ನಿರ್ವಹಣೆಯಲ್ಲಿರುವ ಕುಶಲ ಮತಿಯು ಸಹಾಯಕ್ಕೆ ಬರಲಿದೆ. ಆರೋಗ್ಯ ಸುಸ್ಥಿತಿಯಲ್ಲಿರುವುದು.
ವೃಷಭ
ಅನಾಯಾಸದಿಂದ ಧನಾದಾಯವಿದ್ದರೂ ನಾನಾ ರೀತಿಯ ಅನಾವಶ್ಯಕ ಖರ್ಚು-ವೆಚ್ಚಗಳು ಆರ್ಥಿಕ ಬಿಕ್ಕಟ್ಟಿನ ಕಡೆಗೆ ಕಂಡೊಯ್ಯಲಿದೆ. ಸರಿಯಾಗಿ ಕಾರ್ಯ ಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ.
ಮಿಥುನ
ನಿಮ್ಮ ಪ್ರಿಯವಾದ ಮಾತು ಮತ್ತು ಸಕಾಲದ ಆರ್ಥಿಕ ನೆರವು ಸೋದರಿಯ ಸಂಸಾರ ನೆಲೆ ನಿಲ್ಲುವುದಕ್ಕೆ ಕಾರಣವಾಗಲಿದ್ದು, ನಿಮ್ಮ ಜವಾಬ್ದಾರಿ ಪೂರೈಸಿದ ತೃಪ್ತಿ ಈ ದಿನ ದೊರೆಯಲಿದೆ. ಹೊಸ ಗೆಳೆತನ ಬೆಳೆಸಿಕೊಳ್ಳುವಿರಿ.
ಕರ್ಕಾಟಕ
ಬಹಳ ದಿನಗಳಿಂದ ಖಾಯಿಲೆಯಲ್ಲಿ ಬಳಲುತ್ತಿರುವವರಿಗೆ ಔಷಧಿಯು ಪ್ರತಿಕ್ರಿಯಿಸಿ ಚೇತರಿಕೆಯ ಹಂತಕ್ಕೆ ಹೋಗುವಿರಿ. ಹೊಸ ಮನೆಯ ನಿರ್ಮಾಣದ ಕೆಲಸಗಳನ್ನು ಪೂರೈಸಿಕೊಳ್ಳುವ ಬಗ್ಗೆ ನಿಮ್ಮ ಹೆಚ್ಚಿನ ಗಮನವಿರಲಿ.
ಸಿಂಹ
ಮಗನ ಬೇಡಿಕೆಗಳನ್ನು ಪೂರೈಸುವ ನಿಮ್ಮ ಪ್ರಯತ್ನಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗುವುದು. ರಿಯಲ್ ಎಸ್ಟೇಟ್ ವ್ಯವಹಾರಗಳ ಸಮಸ್ಯೆಯನ್ನು ನಿವಾರಿಸಿಕೊಂಡು, ವರಮಾನವನ್ನೂ ಹೆಚ್ಚಿಸಿಕೊಳ್ಳುವಿರಿ.
ಕನ್ಯಾ
ಮನಸ್ಸು ಧ್ಯಾನದತ್ತ ಹರಿಯಲು ಧಾರ್ಮಿಕ ವಿಚಾರಧಾರೆಯಂತಹ ಸಮಾರಂಭಗಳ ಆಲಿಕೆಯು ಕಾರಣವಾಗುವುದು. ನಿರುದ್ಯೋಗಿಗಳು ಒಂದು ಸ್ಥಿರವಾದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇರಲಿದೆ.
ತುಲಾ
ವಿದ್ಯಾರ್ಥಿಗಳಿಗೆ ಇತರೆ ಚಟುವಟಿಕೆಯ ಬಗ್ಗೆ ಹೆಚ್ಚಿನ ಒಲವು ಮೂಡಿಬಂದು ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದು. ಪ್ರಭಾವಿತ ವ್ಯಕ್ತಿಗಳಿಂದ ಸಿಕ್ಕ ಸಹಕಾರ ನಿಮಗೆ ಈ ಸಮಯದಲ್ಲಿ ಸಹಾಯಕ್ಕೆ ಬರಲಿದೆ.
ವೃಶ್ಚಿಕ
ದಿನಸಿ ವರ್ತಕರು ಆರ್ಥಿಕತೆಯಲ್ಲಿ ದುರ್ಬಲವಾಗಬಹುದು, ವಕೀಲೀ ವೃತ್ತಿಯನ್ನು ಅಭ್ಯಾಸಿಸುವವರಿಗೆ ಪಾಪ-ಪ್ರಜ್ಞೆಯು ಕಾಡಲಿದೆ. ಸರ್ಕಾರಿ ನೌಕರರಿಗೆ ಅಡ್ಡಿ-ಆತಂಕಗಳು ಕಾಡಬಹುದು.
ಧನು
ಇನ್ನಷ್ಟು ಪ್ರತಿಭೆ ಹೆಚ್ಚಿಸಿಕೊಳ್ಳುವ ಕಾಲ ಇದಾಗುವುದು. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿ ಬರುತ್ತದೆ. ಬಂಧುಗಳ ನೆರವಿನಿಂದಾಗಿ ಹಳೆಯ ಬಾಕಿಯ ಹಣವು ನಿಮ್ಮ ಕೈ ಸೇರಲಿದೆ.
ಮಕರ
ನಿಮ್ಮ ಪ್ರಧಾನವಾದ ವೃತ್ತಿಗಿಂತ ಪ್ರವೃತ್ತಿಗೆ ಸಮಯ ಕೊಡುವಿಕೆ ಹೆಚ್ಚಲಿದೆ. ಸಮಸ್ಯೆ ಬಗೆಹರಿಸಲು ಜಾಣತನ ತೋರುವಿರಿ. ಕೆಲವರಿಗೆ ಹಿರಿಯರ ಮಾರ್ಗದರ್ಶನ ಬೇಕೆನಿಸಲಿದೆ. ಬಡಗಿಗಳಿಗೆ ಇಂದು ಸುಯೋಗದ ದಿನ.
ಕುಂಭ
ವ್ಯವಹಾರದಲ್ಲಿ ನೀವು ಮೋಸ ಮಾಡಿ ಹಣ ಮಾಡಬಹುದು. ಆದರೆ, ಅದರ ದುಷ್ಫಲವನ್ನು ಅನುಭವಿಸುತ್ತೀರಿ. ಈ ದಿನ ಮನಸ್ಸನ್ನು ಸ್ತಿಮಿತದಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. ಧಾರ್ಮಿಕ ನಾಯಕರಿಗೆ ಶುಭವಾಗುವುದು.
ಮೀನ
ನಿಮ್ಮ ಕೀರ್ತಿಯು ಎಲ್ಲ ಕಡೆಗೆ ಹರಡಲಿದೆ. ಇದೇ ವಿಷಯವಾಗಿ ದಂಪತಿಗಳಲ್ಲಿ ಭವಿಷ್ಯದ ಕುರಿತು ಗಂಭೀರವಾದ ಚರ್ಚೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಹಾ ಮನಸ್ಸಾಗುವುದು.
ADVERTISEMENT
ADVERTISEMENT