ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ
Published 7 ನವೆಂಬರ್ 2025, 23:24 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಟುಂಬ ನಿರ್ವಹಣೆಗಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾದರೂ ಆದಾಯಕ್ಕೇನೂ ಕೊರತೆ ಇರುವುದಿಲ್ಲ. ಸಂತಸದ ವಿಚಾರವನ್ನು ಸ್ವೀಕರಿಸಲು ಕಷ್ಟವಾಗುವುದು.
07 ನವೆಂಬರ್ 2025, 23:24 IST
ವೃಷಭ
ಸ್ವಲ್ಪ ದಿನದ ಹಿಂದೆ ಪರಿಹಾರ ಕಾಣದೆ ಕಾಡುತ್ತಿದ್ದ ಒಂದು ಸಮಸ್ಯೆ ಹಿಮದಂತೆ ಕರಗಿಹೋಗುತ್ತದೆ. ಸಹಾಯಕ ವರ್ಗದವರ ಕಷ್ಟಗಳಿಗೆ ನೆರವಾಗುವ ಗುಣಗಳನ್ನು ರೂಢಿಸಿಕೊಳ್ಳಿ.
07 ನವೆಂಬರ್ 2025, 23:24 IST
ಮಿಥುನ
ಸ್ವಂತ ಉದ್ಯೋಗ ನಡೆಸುವವರು ಒಳ್ಳೆಯ ಆಭಿವೃದ್ಧಿ ಎದುರು ನೋಡಬಹುದು. ರಾಜಕೀಯ ವಲಯದ ಕಾರ್ಯಕರ್ತರಿಗೆ ಅರಿವಿಗೆ ಬರದಂತೆ ಮುನ್ನಡೆಯುವ ಅವಕಾಶಗಳು ಕೈ ತಪ್ಪಲಿವೆ.
07 ನವೆಂಬರ್ 2025, 23:24 IST
ಕರ್ಕಾಟಕ
ಮಕ್ಕಳ ವಿಚಾರದಲ್ಲಿ ಭವಿಷ್ಯದ ದೃಷ್ಟಿಯಿಂದ ದೊಡ್ಡದು ಸಣ್ಣದು ಎಂಬ ಬೇಧ ಮಾಡದೇ ತಕ್ಷಣ ಕಾರ್ಯೋನ್ಮುಖರಾಗಿ. ಆಶ್ವಾಸನೀಯ ವರ್ತನೆಯಿಂದ ಸಂತಸ ಉಂಟಾಗುವುದು.
07 ನವೆಂಬರ್ 2025, 23:24 IST
ಸಿಂಹ
ರಾಜಕೀಯ ವರ್ಗದವರು ರಾಜಕಾರಣದ ತಂತ್ರಗಾರಿಕೆ ನಡೆಸುವುದು ಅಗತ್ಯ. ಹಣಕಾಸಿನ ವ್ಯಾಮೋಹ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ.
07 ನವೆಂಬರ್ 2025, 23:24 IST
ಕನ್ಯಾ
ತಿಂಗಳ ಕೊನೆಯಲ್ಲಿ ಅನುಭವಿಸಿದ ಹಣದ ಕಷ್ಟವನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳುವಿರಿ. ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ಅಧಿಕಾರ, ಅನುಭವದಿಂದ ಆತ್ಮಾಭಿಮಾನ ವೃದ್ಧಿ .
07 ನವೆಂಬರ್ 2025, 23:24 IST
ತುಲಾ
ಎದ್ದ ಸಮಯದಲ್ಲಿ ಅಶುಭದ ಸಂಕೇತವೆಂದು ಕಂಡ ವಿಷಯಗಳ ಬಗ್ಗೆ ಚಿಂತಿಸದಿರಿ. ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ.
07 ನವೆಂಬರ್ 2025, 23:24 IST
ವೃಶ್ಚಿಕ
ಹೊಸ ಒಪ್ಪಂದವೊಂದನ್ನು ಒಪ್ಪಿಕೊಳ್ಳುವ ಮುನ್ನ ತುಸು ಯೋಚಿಸುವುದು ಉತ್ತಮ ಎಂಬ ಭಾವನೆ ಮನಸ್ಸಿಗೆ ಬರಲಿದೆ. ಅದು ಸರಿಯಾದದ್ದು. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ.
07 ನವೆಂಬರ್ 2025, 23:24 IST
ಧನು
ಸಾಕುಪ್ರಾಣಿಯ ತೀವ್ರ ಅನಾರೋಗ್ಯವು ದುಃಖಕರವನ್ನಾಗಿ ಮಾಡಬಹುದು. ಸ್ನೇಹಿತರೊಡನೆ ಸುಂದರ ಸಂಜೆಯನ್ನು ಕಳೆಯುವ ಅವಕಾಶಗಳನ್ನು ತಪ್ಪಿಸಿಕೊಳ್ಳುವ ಯೋಚನೆಯನ್ನು ಮಾಡದಿರಿ.
07 ನವೆಂಬರ್ 2025, 23:24 IST
ಮಕರ
ವಿದ್ಯಾಭ್ಯಾಸ, ವೃತ್ತಿಯ ಬಗ್ಗೆ ಆತುರ ನಿರ್ಧಾರ ತೆಗೆದುಕೊಳ್ಳಬೇಡಿ. ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿದವರಿಗೆ ವೈದ್ಯರ ದರ್ಶನ ಅಗತ್ಯವೆನಿಸಲಿದೆ.
07 ನವೆಂಬರ್ 2025, 23:24 IST
ಕುಂಭ
ಆಹಾರದ ವ್ಯತ್ಯಾಸದಿಂದಾಗಿ ಚರ್ಮದಲ್ಲಿ ದಡಾರಗಳು ಅಥವಾ ತುರಿಕೆ ಕಾಣಿಸಿಕೊಳ್ಳಬಹುದು. ಅನಿರೀಕ್ಷಿತವಾದರೂ ಬದುಕಿನಲ್ಲಿ ಒಳ್ಳೆಯ ಬೆಳವಣಿಗೆಗಳಾಗುವ ಲಕ್ಷಣಗಳು ಕಾಣುತ್ತಿವೆ.
07 ನವೆಂಬರ್ 2025, 23:24 IST
ಮೀನ
ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ನೂತನ ದಂಪತಿ ಸಂತಾನದ ಶುಭ ಸುದ್ದಿಯನ್ನು ಕೇಳುವಿರಿ. ಪಾಲುದಾರರು ಒಪ್ಪಿಗೆ ನೀಡುತ್ತಾರೆ.
07 ನವೆಂಬರ್ 2025, 23:24 IST