ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ವಿವಾದಗಳಿಂದ ದೂರವಿರುವುದನ್ನು ಅಭ್ಯಸಿಸಿಕೊಳ್ಳಿರಿ
Published 19 ಆಗಸ್ಟ್ 2023, 23:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೀವು ಆರಿಸಿಕೊಂಡ ಮಾರ್ಗದಲ್ಲಿ ಸರಿ ತಪ್ಪುಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ. ಕೌಟುಂಬಿಕವಾಗಿ ಜವಾಬ್ದಾರಿಗಳನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುವ ಬಗ್ಗೆ ಗಮನಹರಿಸಿ. ಹೊಸ ಸ್ಪೂರ್ತಿಯಿಂದ ಕಾರ್ಯ ನಿರ್ವಹಿಸಿ.
ವೃಷಭ
ಮಂಗಳ ಕಾರ್ಯಕ್ಕೆ ಭಾಗಿಯಾಗಲು ದೂರ ಪ್ರಯಾಣ ಮಾಡಬೇಕಾಗುತ್ತದೆ. ವೃತ್ತಿಗೆ ಸಂಬಂಧಿಸಿದಂತೆ ಶತ್ರುಬಾಧೆ ಎದುರಾಗಬಹುದು, ನಿಮ್ಮ ದೈಹಿಕ ಮತ್ತು ಧಾರ್ಮಿಕ ಪ್ರಯತ್ನದಿಂದ ಸುಧಾರಿಸಿಕೊಳ್ಳಬಹುದು.
ಮಿಥುನ
ವೈದ್ಯ ವೃತ್ತಿಯವರಿಗೆ ತೃಪ್ತಿಕರವಾದ ವರಮಾನ ಪ್ರಾಪ್ತಿಯಾಗುತ್ತದೆ. ಮಂಗಳ ಕಾರ್ಯಗಳು ಸುಗಮವಾಗಿ ನಡೆಯಲೆಂದು ಮನೆ ದೇವರಿಗೆ ಪೂಜೆ ಸಲ್ಲಿಸುವಿರಿ. ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು.‌
ಕರ್ಕಾಟಕ
ವೈದ್ಯರು ಅದರಲ್ಲೂ ನರ ರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ನಿರ್ಲಕ್ಷ್ಯ ಅಥವಾ ಬೇಜವಬ್ದಾರಿತನದಿಂದ ಪಾಪ ಸಂಗ್ರಹಣೆಯಾಗುವುದು. ಹೆಚ್ಚಿನ ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ.
ಸಿಂಹ
ಆಫೀಸಿನ ಕೆಲಸಗಳಲ್ಲಿ ಕೆಲವೊಂದು ವಿಷಯಗಳನ್ನು ಪರಾಮರ್ಶಿಸಲೇಬೇಕಾದ ಸಮಯ ಬರಲಿದೆ. ಅನಿವಾರ್ಯದ ಮಾತುಗಳನ್ನು ಯೋಚಿಸಿ ಮಾತನಾಡಿ. ತಂದೆ-ತಾಯಿಯವರ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.
ಕನ್ಯಾ
ಹಿರಿಯರ ಭೇಟಿಯಿಂದಾಗಿ ಕುಟುಂಬದ ಬಗೆಗಿನ ವಿಚಾರಗಳು ತಿಳಿಯಲಿದೆ. ದಾಖಲೆ ಪರಿಶೀಲನೆಯಿಂದ ಆದಾಯ ತೆರಿಗೆಯನ್ನು ಪಾವತಿಸುವಿರಿ.
ತುಲಾ
ಸ್ವಂತ ಉದ್ಯೋಗದವರು ಅಧಿಕ ಬಂಡವಾಳ ಹಾಕುವುದರಿಂದ ಕೈ ಸುಡುವಂತಾಗುವುದು. ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ.
ವೃಶ್ಚಿಕ
ಮಗನ ಸಹಾಯದಿಂದ ಸಂಬಂಧಿಕರೊಬ್ಬರ ಕೆಲಸ ಸುಗಮವಾಗಿ ಕೈಗೂಡುವುದರಿಂದ ಮನಸ್ಸಿಗೆ ಹೆಚ್ಚಿನ ಸಂತಸವಿರುವುದು. ಸಹೋದ್ಯೋಗಿ ಗಳೊಂದಿಗಿನ ಭಿನ್ನಾಭಿಪ್ರಾಯಗಳು ನಿವಾರಣೆಯಾವಂತೆ ವರ್ತಿಸಿ.
ಧನು
ನಿರುದ್ಯೋಗಸ್ಥರಿಗೆ ಹೊರ ರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸುವ ಅವಕಾಶ ಎದುರಾದರೆ ಒಪ್ಪಿಕೊಳ್ಳುವುದು ಉತ್ತಮ. ಪ್ರಾಮಾಣಿಕವಾಗಿ ನಡೆಯುವ ನಿಮಗೆ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುವುದು.
ಮಕರ
ಆಡಳಿತಾತ್ಮಕ ವಿಚಾರದಲ್ಲಿ ಬದಲಾವಣೆಗಳ ಅಗತ್ಯವನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಿರಿ. ಒಂದು ಘಟನೆಯಿಂದಾಗಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂಬುದು ನಿಮಗೆ ತಿಳಿಯಲಿದೆ.
ಕುಂಭ
ಈ ದಿನ ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆ ಪಡೆಯುವಿರಿ. ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದದ್ದಾಗಿರುತ್ತದೆ. ಈ ಸಂಜೆ ನೀವು ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ.
ಮೀನ
ಕೊಟ್ಟ ಮಾತಿನಂತೆ ಕೆಲಸ ನೆರವೇರಿಸಿ ಕೊಡುವುದರಿಂದ ಹೆಸರು ಗಳಿಸಬಹುದು. ಚಿತ್ರರಂಗದವರಿಗೆ ಖ್ಯಾತಿ, ಗೌರವಾನ್ವಿತ ಅವಕಾಶ ದೊರೆಯುವುದು. ವಿವಾದಗಳಿಂದ ದೂರವಿರುವುದನ್ನು ಅಭ್ಯಸಿಸಿಕೊಳ್ಳಿರಿ.