ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಫೆಬ್ರುವರಿ 24 ಶನಿವಾರ 2024– ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು
Published 23 ಫೆಬ್ರುವರಿ 2024, 19:06 IST
ಪ್ರಜಾವಾಣಿ ವಿಶೇಷ
author
ಮೇಷ
ಕಾರ್ಯದೊತ್ತಡ ಜತೆಯಲ್ಲಿ ಮನೆಯ ವಿಚಾರಗಳತ್ತಲೂ ಗಮನಹರಿಸುವುದು ಮುಖ್ಯ. ಅಗ್ನಿಯಿಂದ ಅವಘಡ ಸಂಭವಿಸಬಹುದು ಎಚ್ಚರ ವಹಿಸಿ. ಹೊಸ ಜವಾಬ್ದಾರಿಗಳು ಅರಸಿ ಬರಲಿದೆ.
ವೃಷಭ
ಕೋರ್ಟ್ ಕೆಲಸಗಳಿಗಾಗಿ ಹಿರಿಯ ಅಧಿಕಾರಿಗಳ ಸಲಹೆ ಪಡೆಯುವುದು ಅವಶ್ಯಕ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಮಂಗಳ ಕಾರ್ಯಗಳ ಶುಭ ಸೂಚನೆಗಳು ಕಂಡುಬರುತ್ತದೆ.
ಮಿಥುನ
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ದೃಢ ನಿರ್ಧಾರದಿಂದ ಕೆಲಸಕಾರ್ಯಗಳೆಲ್ಲವು ಪೂರ್ಣಗೊಳ್ಳಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕರ್ಕಾಟಕ
ಜವಾಬ್ದಾರಿಯುತ ಸ್ಥಾನವನ್ನು ನಿಭಾಯಿಸಲು ತೀರ್ಮಾನಿಸುವುದು ಸರಿಯಲ್ಲ. ಮಾತೃ ಸಂಬಂಧಿಗಳ ಸಹಾಯದಿಂದ ಉತ್ತಮ ನೌಕರಿ ದೊರೆಯುವುದು. ಮನೆ ದೇವರಿಗೆ ಹರಕೆ ಸಲ್ಲಿಸುವ ಬಗ್ಗೆ ಯೋಚಿಸಿ.
ಸಿಂಹ
ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗ ಪಡೆದುಕೊಳ್ಳಿ. ದೇಹದಲ್ಲಿ ಉಂಟಾಗಿದ್ದಂಥ ಪಿತ್ತ, ಉಷ್ಣ ಪ್ರಕೋಪ ದೂರಾಗುವವು.
ಕನ್ಯಾ
ಕರ್ತವ್ಯ ನಿಷ್ಠೆಯಿಂದ ಉತ್ತಮ ಹೆಸರು ಸಂಪಾದನೆಯಾಗುವುದು. ಪ್ರಯತ್ನಿಸಿದ ಕಾರ್ಯಗಳು ಆಪ್ತರ ಸಕಾಲಿಕ ನೆರವಿನಿಂದ ಕೈಗೂಡುವುದು. ಜನಬಲದ ಕೊರತೆಯು ಯಶಸ್ಸಿಗೆ ಅಡ್ಡಿಯನ್ನು ಉಂಟುಮಾಡಲಿದೆ.
ತುಲಾ
ವಾಹನಚಾಲನಾ ವೃತ್ತಿಯವರಿಗೆ ಶುಭವಿದೆ. ರಾಸಾಯನಿಕ ವಸ್ತುಗಳಲ್ಲಿ ಕೆಲಸ ಮಾಡುವವರು ಜಾಗ್ರತರಾಗಿರಿ. ಸ್ವಪ್ರತಿಷ್ಠೆಯನ್ನು ಕಾಪಾಡಲು ವಾದ ಮಾಡಬೇಕಾಗಬಹುದು.
ವೃಶ್ಚಿಕ
ವಿವಾಹ ವಯಸ್ಕ ಯೋಗ್ಯರಿಗೆ ನೂತನ ಸಂಬಂಧಗಳು ಕಂಡು ಬರಲಿವೆ. ವರ್ಗಾವಣೆಯಿಂದ ದೂರ ವಾಸಿಸುವ ಸಂದರ್ಭ ಬರಲಿದೆ. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಯುವುದು.
ಧನು
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಆಸ್ತಿ ಕೊಳ್ಳುವ ನಿರ್ಧಾರದಲ್ಲಿ ಲಾಭ-ನಷ್ಟವನ್ನು ಪುನಃ ಇನ್ನೊಮ್ಮೆ ಯೋಚಿಸುವುದು ಉತ್ತಮ.
ಮಕರ
ಹೊಸ ಪುಸ್ತಕಗಳ ಪ್ರಕಾಶನ ಮಾಡುವವರಿಗೆ ಶುಭದಿನ. ಪತ್ರಕರ್ತರಿಗೆ ರಹಸ್ಯ ವಿಷಯ ತಿಳಿಯುವುದು. ಆಸೆ ಆಕಾಂಕ್ಷೆಗಳು ಈಡೇರಿ ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು.
ಕುಂಭ
ಎದುರಾಗಿರುವ ಸಮಸ್ಯೆಗೆ ಸಂಬಂಧಿಸಿದ ವ್ಯಕ್ತಿಯಲ್ಲಿ ಮಾತನಾಡುವುದರಿಂದ ಸಂಪೂರ್ಣವಾಗಿ ಉತ್ತರ ಸಿಗುವುದು. ಬರಬೇಕಾಗಿದ್ದ ಹಣಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ಕಾರ್ಮಿಕ ವರ್ಗದವರ ಬಗ್ಗೆ ಗಮನವಿರಲಿ.
ಮೀನ
ಜಾಣ್ಮೆಯಿಂದ ಅವಕಾಶ ಬಳಸಿಕೊಂಡಲ್ಲಿ ಅಧಿಕಾರ ಪಡೆದು ಕೊಳ್ಳು ವುದು ಕಷ್ಟದ ಕೆಲಸವೇನಲ್ಲ. ಹಣಕಾಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸೂಕ್ತ ಕಾಲವಾಗಿದೆ. ಉಷ್ಣ ವ್ಯಾಧಿ ಉಪಶಮನಕ್ಕೆ ಔಷಧಿಯನ್ನು ಸ್ವೀಕರಿಸಿ.