ಮ್ಯಾಂಚೆಸ್ಟರ್: ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ನ ಮೂರನೇ ದಿನದ ಕೊನೆಯಲ್ಲಿ ಇಂಗ್ಲೆಂಡ್ ಕಾಲಹರಣ ತಂತ್ರ ಅನುಸರಿಸಿ ‘ಕ್ರಿಕೆಟ್ ಸ್ಪೂರ್ತಿ’ಯನ್ನು ನಿರ್ಲಕ್ಷಿಸಿತು ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ಮಂಗಳವಾರ ದೂರಿದರು.

ಇಂಗ್ಲೆಂಡ್ನ ಈ ತಂತ್ರ ಉಭಯ ತಂಡಗಳ ನಡುವೆ ಕಾವೇರಿದ ವಾತಾವರಣಕ್ಕೆ ದಾರಿಮಾಡಿಕೊಟ್ಟಿತ್ತು. ನಾಲ್ಕನೇ ದಿನವೂ ಆಗಾಗ ಪರಸ್ಪರರತ್ತ ವಾಗ್ಬಾಣಗಳು ವಿನಿಮಯವಾದವು.

ಇಂಗ್ಲೆಂಡ್ನ 387 ರನ್ಗಳಿಗೆ ಉತ್ತರವಾಗಿ ಮೂರನೇ ದಿನದ ಅಂತ್ಯಕ್ಕೆ ಕೆಲವೇ ನಿಮಿಷ ಮೊದಲು ಭಾರತ ತಂಡ ಕೂಡ ಅಷ್ಟೇ ಮೊತ್ತಕ್ಕೆ ಆಲೌಟ್ ಆಗಿತ್ತು. ನಂತರ ಇಂಗ್ಲೆಂಡ್ ಎರಡನೇ ಇನಿಂಗ್ಸ್ ಆಡಲು ಏಳು ನಿಮಿಷಗಳಿದ್ದವು. ಆದರೆ ಭಾರತ ಎರಡನೇ ಓವರ್ ಮಾಡದಂತೆ ಜಾಕ್ ಕ್ರಾಲಿ ಕಾಲಹರಣ ಮಾಡಿದ್ದರು. ಎರಡು ಸಲ ಕೊನೆಗಳಿಗೆಯಲ್ಲಿ ಸ್ಟ್ಯಾನ್ಸ್ ಬದಲಿಸಿದ್ದರು. ಒಮ್ಮೆ ಚೆಂಡು ಗ್ಲೋವ್ಗೆ ಸವರಿದರೂ, ಫಿಸಿಯೊರನ್ನು ಕರೆಸಿದ್ದರು. ಹೀಗಾಗಿ ಎರಡನೇ ಓವರ್ಗೆ ಅವಕಾಶವಾಗಲಿಲ್ಲ. ಗಿಲ್ ಅವರು ಕ್ರಾಲಿ ಅವರನ್ನು ದುರುಗುಟ್ಟಿ ಬೈದಿದ್ದರು.

ನಾಲ್ಕನೇ ಟೆಸ್ಟ್ಗೆ ಮುನ್ನಾದಿನವಾದ ಮಂಗಳವಾರ ಈ ಬಗ್ಗೆ ಗಿಲ್ ಸ್ಪಷ್ಟನೆ ನೀಡಿದರು. ಇಂಗ್ಲೆಂಡ್ ಆಡಲು ಇಳಿಯುವಾಗ ಏಳು ನಿಮಿಷಗಳು ಉಳಿದಿದ್ದವು. ಆದರೆ ಕ್ರೀಸಿಗೆ ಬರಲು 10, 20 ಸೆಕೆಂಡು ಅಲ್ಲ, 90 ಸೆಕೆಂಡು ತೆಗೆದುಕೊಂಡಿದ್ದು ಗಿಲ್ ಸಿಡಿಮಿಡಿಗೆ ಕಾರಣವಾಯಿತು.

‘ನಿಜ, ಹಲವು ತಂಡಗಳು ಈ ರೀತಿ (ಕಾಲಹರಣ) ಮಾಡುತ್ತವೆ. ನಾವೂ ಆ ಸ್ಥಿತಿಯಲ್ಲಿದ್ದರೆ ಕಡಿಮೆ ಓವರ್ ಆಡುತ್ತಿದ್ದೆವು. ಆದರೆ ಅದಕ್ಕೂ ಒಂದು ಮಿತಿಯಿದೆ’ ಎಂದರು. ಇಷ್ಟೊಂದು ತಡವಾಗಿ ಕ್ರೀಸಿಗೆ ಬಂದಿದ್ದು ಸಹ ಕ್ರೀಡಾ ಸ್ಫೂರ್ತಿಯ ನಡವಳಿಕೆಯಲ್ಲ ಎಂದರು.

‘ನಾನು ಕ್ರಾಲಿ ಅವರಿಗೆ ನಿಂದಿಸಿದ್ದನ್ನು ಸಮರ್ಥಿಸಿಕೊಳ್ಳುವುದಿಲ್ಲ. ಕಾವೇರಿದ ಆ ಕ್ಷಣದಲ್ಲಿ ಹಾಗೆ ಹೇಳಿಹೋಯಿತು’ ಎಂದು ಗಿಲ್ ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.