ಕೋಲ್ಕತ್ತ: ಭಾರತದ ಫುಟ್ಬಾಲ್ನಲ್ಲಿ ಅಗ್ರಸ್ತರದ ಲೀಗ್ ಐಎಸ್ಎಲ್ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿರುವ ನಡುವೆಯೇ, ಏಷ್ಯಾದ ಅತಿ ಹಳೆಯ ಟೂರ್ನಿಯಾದ ಡುರಾಂಡ್ ಕಪ್ ಬುಧವಾರ ಆರಂಭವಾಗಲಿದೆ.

ಮಾಸ್ಟರ್ ರೈಟ್ಸ್ ಒಪ್ಪಂದಕ್ಕೆ (ಎಂಆರ್ಎ) ಸಂಬಂಧಿಸಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಮತ್ತು ಐಎಸ್ಎಲ್ ಆಯೋಜಕರಾದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ (ಎಫ್ಎಸ್ಡಿಎಲ್) ನಡುವೆ ಬಿಕ್ಕಟ್ಟು ಮುಂದುವರಿದಿದೆ. ಮಾಸ್ಟರ್ ರೈಟ್ಸ್ ಒಪ್ಪಂದವು ಇಂಡಿಯನ್ ಸೂಪರ್ ಲೀಗ್ನ (ಐಎಸ್ಎಲ್)ನ ಕಾರ್ಯನಿರ್ವಹಣೆ ಮತ್ತು ವಾಣಿಜ್ಯಿಕ ಚೌಕಟ್ಟಿಗೆ ಸಂಬಂಧಿಸಿದೆ.

ಈ ಒಪ್ಪಂದದ ಅವಧಿ ಡಿಸೆಂಬರ್ 8ಕ್ಕೆ ಕೊನೆಗೊಳ್ಳಲಿದೆ. ಆದರೆ ಇದುವರೆಗೆ ಯಾವುದೇ ಸಕಾರಾತ್ಮಕ ಬೆಳವಣಿಗೆ ಆಗಿಲ್ಲ. ಸಾಮಾನ್ಯವಾಗಿ ಸೆಪ್ಟೆಂಬರ್ನಲ್ಲಿ ಐಎಸ್ಎಲ್ ಆರಂಭವಾಗುತ್ತದೆ.

ಇದರ ಮಧ್ಯೆಯೇ ಫುಟ್ಬಾಲ್ ಋತುವಿಗೆ ಸಾಂಪ್ರದಾಯಿಕ ಆರಂಭ ನೀಡುವ ಡುರಾಂಡ್ ಕಪ್ಗೆ ಚಾಲನೆ ದೊರೆಯಲಿದೆ. ಈ ಬಾರಿ 24 ತಂಡಗಳು ಭಾಗವಹಿಸಲಿದ್ದು ಇವುಗಳನ್ನು ಆರು ಗುಂಪುಗಳಲ್ಲಿ ವಿಂಗಡಿಸಲಾಗಿದೆ.

ಬೆಂಗಳೂರಿನ ಸೌತ್ ಯುನೈಟೆಡ್ ಎಫ್ಸಿ ಇವುಗಳಲ್ಲಿ ಒಂದಾಗಿದೆ. ಈ ಕ್ಲಬ್, ಪ್ರಬಲ ಈಸ್ಟ್ ಬೆಂಗಾಲ್, ಇಂಡಿಯನ್ ಏರ್ಫೋರ್ಸ್ ಎಫ್ಟಿ ಮತ್ತು ನಾಮಧಾರಿ ಎಫ್ಸಿ ಜೊತೆ ‘ಎ’ ಗುಂಪಿನಲ್ಲಿವೆ.

ಕಳೆದ ಋತುವಿನಲ್ಲಿ ಈಸ್ಟ್ ಬೆಂಗಾಲ್ ಐಎಸ್ಎಲ್ನಲ್ಲಿ 9ನೇ ಸ್ಥಾನ ಪಡೆದು ನೀರಸ ನಿರ್ವಹಣೆ ತೋರಿತ್ತು. ತಂಡ ಇತ್ತೀಚೆಗೆ ಮೂವರು ವಿದೇಶಿ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದ್ದು ಉತ್ತಮ ಪ್ರದರ್ಶನ ನೀಡುವ ಬಯಕೆಯಲ್ಲಿದೆ. ಬ್ರೆಜಿಲ್ನ ಮಿಡ್ಫೀಲ್ಡರ್ ಮಿಗೆಲ್ ಫಿಗುಯೆರಾ, ಅರ್ಜೆಂಟೀನಾದ ಡಿಫೆಂಡರ್ ಕೆವಿನ್ ಸಿಬಿಲ್ ಮತ್ತು ಪ್ಯಾಲಸ್ತೀನಿನ ಮೊಹಮ್ಮದ್ ರಶೀದ್ ತಂಡ ಸೇರಿಕೊಂಡಿದ್ದಾರೆ.

ಈಸ್ಟ್ ಬೆಂಗಾಲ್ 16 ಬಾರಿ ಪ್ರಶಸ್ತಿ ಗೆದ್ದಿದ್ದು ಎರಡನೇ ಅತಿ ಯಶಸ್ವಿ ತಂಡ ಎನಿಸಿದೆ. ಈ ಕ್ಲಬ್ನ ಬದ್ಧ ಎದುರಾಳಿ ಮೋಹನ್ ಬಾಗನ್ 2023ರಲ್ಲಿ 17ನೇ ಸಲ ಚಾಂಪಿಯನ್ ಆಗಿತ್ತು. ಬಾಗನ್, ಐಎಸ್ಎಲ್ನ ಹಾಲಿ ಚಾಂಪಿಯನ್ ಆಗಿದೆ.

ಐದು ರಾಜ್ಯ ತಂಡಗಳು– ಪಶ್ಚಿಮ ಬಂಗಾಳ, ಜಾರ್ಖಂಡ್, ಅಸ್ಸಾಂ, ಮೇಘಾಲಯ ಮತ್ತು ಮೊದಲ ಬಾರಿ ಮಣಿಪುರ ಕಣಕ್ಕಿಳಿಯುತ್ತಿವೆ.

ಕೋಲ್ಕತ್ತವು 15 ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಒಂದು ಕ್ವಾರ್ಟರ್ಫೈನಲ್, ಸೆಮಿಫೈನಲ್ ಮತ್ತು ಗ್ರ್ಯಾಂಡ್ ಫಿನಾಲೆ ಕೂಡ ಈ ಮಹಾನಗರದಲ್ಲೇ ನಡೆಯಲಿದೆ. ಫೈನಲ್ ಆಗಸ್ಟ್ 23ರಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.

ಪ್ರೇಕ್ಷಕರಿಗೆ ಖುಷಿಪಡಿಸಲು ಕೋಲ್ಕತ್ತದ ನಾಲ್ಕು ಸ್ಥಳೀಯ ತಂಡಗಳೂ ಕಣದಲ್ಲಿವೆ. ಈಸ್ಟ್ ಬೆಂಗಾಲ್, ಬಾಗನ್, ಮೊಹಮಡನ್ ಸ್ಪೋರ್ಟಿಂಗ್ ಜೊತೆ ಐ ಲೀಗ್ಗೆ ಬಡ್ತಿ ಪಡೆದ ಡೈಮಂಡ್ ಹಾರ್ಬರ್ ಈ ಬಾರಿ ಆಡುತ್ತಿದೆ.

ಸಂಪ್ರದಾಯದಂತೆ ವಿದೇಶಿ ತಂಡಗಳು ಈ ಬಾರಿಯೂ ಆಡುತ್ತಿವೆ. ಮಲೇಷಿಯನ್ ಆರ್ಮ್ಡ್ ಫೋರ್ಸಸ್ ತಂಡ ಮತ್ತು ನೇಪಾಳದ ತ್ರಿಭುವನ್ ಆರ್ಮಿ ಎಫ್ಸಿ ತಂಡಗಳು ಈ ಟೂರ್ನಿಗೆ ಅಂತರರಾಷ್ಟ್ರೀಯ ಸ್ಪರ್ಶ ನೀಡಿವೆ.

ಡುರಾಂಡ್ ಕಪ್ ಟೂರ್ನಿಯು ಈ ಬಾರಿ ₹3 ಕೋಟಿ ಬಹುಮಾನ ಮೊತ್ತ ಹೊಂದಿದೆ. ಟೂರ್ನಿಯಲ್ಲಿ ಅಮೋಘ ಆಟವಾಡಿದ ಮೂವರು ಆಟಗಾರರಿಗೆ ಎಸ್ಯುವಿಗಳನ್ನು ನೀಡಲಾಗುತ್ತಿದೆ. ಕ್ವಾರ್ಟರ್ಫೈನಲ್, ಸೆಮಿಫೈನಲ್ ತಲುಪುವ ತಂಡಗಳಿಗೂ ನಗದು ಬಹುಮಾನ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.