ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆದಾಯಕ್ಕೇನೂ ಕೊರತೆಯಿರದು
Published 25 ಸೆಪ್ಟೆಂಬರ್ 2024, 20:43 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಕ್ಕಳು ಜೀವನದಲ್ಲಿ ಒಂದು ಉತ್ತಮ ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ಸಂತಸಪಡುವಂತಾಗುವುದು. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಗಳು ನಿವಾರಣೆಯಾಗುವಂತೆ ವರ್ತಿಸಿ.
ವೃಷಭ
ಮನಸ್ಸಿನ ದುಗುಡಗಳು ಕಡಿಮೆಯಾಗಿ ಸಹಾಯ ಮಾಡಿದ ಸ್ನೇಹಿತರ ಪಾತ್ರವೇ ಜೀವನದಲ್ಲಿ ಮುಖ್ಯವೆನಿಸಲಿದೆ. ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಪಡೆಯುವಿರಿ.
ಮಿಥುನ
ಆದಾಯಕ್ಕೇನೂ ಕೊರತೆಯಿರದು. ಖರ್ಚು-ವೆಚ್ಚದಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಮುಂಬರುವ ಶುಭ ಕಾರ್ಯಕ್ಕೆ ತಯಾರಿಯನ್ನು ನಡೆಸಿಕೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಲಿದೆ.
ಕರ್ಕಾಟಕ
ಚಾಲಕ ವೃತ್ತಿಯವರು ನಿಯಮಬದ್ಧವಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದು. ನಾಲ್ಕಾರು ಜನರಿಂದ ಜ್ಞಾನಾರ್ಜನೆಯಾಗುವುದು. ಷೇರುಪೇಟೆಯ ವಹಿವಾಟಿನಲ್ಲಿ ಪ್ರಗತಿ ಕಂಡುಬರಲಿದೆ.
ಸಿಂಹ
ಸ್ವತಂತ್ರವಾಗಿರಲು ಇಚ್ಛಿಸಿದವರಿಗೆ ಉತ್ತಮ ಅವಕಾಶಗಳು ಎದು ರಾಗಲಿವೆ. ಸ್ವಂತ ಉದ್ಯೋಗದವರು ಅಧಿಕ ಬಂಡವಾಳ ಹಾಕುವುದರಿಂದ ಕೈ ಸುಡುವಂತಾಗುವುದು. ಸಂಬಂಧಿಗಳು ಮತ್ತೆ ಹತ್ತಿರದವರಾಗುವರು.
ಕನ್ಯಾ
ಪದೇ ಪದೇ ತೋರಿಬರುವ ಋಣಾತ್ಮಕ ಚಿಂತನೆಯು ಕಾರ್ಯಸಾಧನೆಗೆ ಅಡ್ಡಿ ಮಾಡುತ್ತದೆ. ಪ್ರಾಮಾಣಿಕವಾಗಿ ನಡೆಯುವ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುವುದು. ಮಕ್ಕಳಿಂದ ಸಂತೋಷ ನೆಮ್ಮದಿ ಇರುವುದು.
ತುಲಾ
ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಬಹಳ ಎಂದು ನೆನಪಿನಲ್ಲಿದ್ದು ಸ್ನೇಹಿತರಲ್ಲಿ ವ್ಯವಹರಿಸಿ. ಆಲೋಚನೆಗಳನ್ನು ಕಾರ್ಯ ರೂಪಕ್ಕೆ ಇಳಿಸಲು ಸೂಕ್ತ ಸಮಯವಲ್ಲ. ಹಳದಿ ಬಣ್ಣ ಅಶುಭವನ್ನು ನೀಡುವುದು.
ವೃಶ್ಚಿಕ
ಚಿನ್ನ , ಬೆಳ್ಳಿ ವ್ಯಾಪಾರಿಗಳಿಗೆ ವ್ಯಾಪಾರದ ಜತೆಗೆ ಅಂಗಡಿಯಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗಬಹುದು. ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು.
ಧನು
ಸ್ನೇಹಿತರ ಅನಿವಾರ್ಯ ಸ್ಥಿತಿಗಳನ್ನು ಮನಗಂಡ ನೀವು ಅವರ ಜಮೀನಿನ ಕೆಲಸಗಳನ್ನು ನೋಡಿಕೊಳ್ಳಬೇಕಾಗುವುದು. ಜೀವನದಲ್ಲಿ ಮಹತ್ತರ ಬದಲಾವಣೆಯಾಗುವ ಸೂಚನೆಗಳು ಗಮನಕ್ಕೆ ಬರಲಿವೆ.
ಮಕರ
ಜವಾಬ್ದಾರಿಯಲ್ಲಿ ಇರುವ ತಮ್ಮಂದಿರ ಓದಿನಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಉನ್ನತ ಶಿಕ್ಷಣದವರಿಗೆ ಕೀರ್ತಿ ಮತ್ತು ಸಾಮಾಜಿಕ ಗೌರವ ಪ್ರಾಪ್ತಿಯಾಗುವುದು. ಮಹಾಗಣಪತಿಯನ್ನು ಆರಾಧಿಸಿ.
ಕುಂಭ
ಮಕ್ಕಳಿಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಿ. ಮನೆಯ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಿ.ಕೆಲಸಗಳನ್ನು ಸಂಪೂರ್ಣಗೊಳಿಸಿಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭ .
ಮೀನ
ಗೆಳೆಯನೊಬ್ಬನ ಬಹುದಿನಗಳ ನಂತರದ ಭೇಟಿಯಿಂದಾಗಿ ಸಂತೋಷ ಮತ್ತು ಸಲಹೆಗಳಿಂದ ಜೀವನ ಮಹತ್ವದ ತಿರುವೊಂದನ್ನು ಪಡೆದುಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಗಾಧ ಪ್ರಯತ್ನ ಮಾಡಬೇಕಾಗುವುದು.
ADVERTISEMENT
ADVERTISEMENT