ಶುಕ್ರವಾರ, 11 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ದೊರೆಯುತ್ತದೆ
Published 10 ಏಪ್ರಿಲ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಂದಿನಂತೆ ಮನಸ್ಸು ಹೆಚ್ಚು ಉಲ್ಲಾಸದಿಂದ ಕೂಡಿರುವುದರಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುವುದು. ಹೋಟೆಲ್ ಉದ್ಯಮಿಗಳಿಗೆ ಮತ್ತು ಅಡುಗೆಯ ವೃತ್ತಿಯವರಿಗೆ ಲಾಭದಾಯಕ.
ವೃಷಭ
ರಾಜಿಯಾಗುವ ಮನೋಭಾವ ಬೆಳೆಸಿಕೊಳ್ಳಿ. ಹೊಸ ಕ್ಷೇತ್ರದಲ್ಲಿ ಏಳಿಗೆ ಪಡೆಯುವಿರಿ. ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಲಕ್ಷಣಗಳಿವೆ. ಸಗಟು ವ್ಯಾಪಾರಿಗಳಿಗೆ ಹೇರಳ ಲಾಭ.
ಮಿಥುನ
ಪಾಲುದಾರಿಕೆ ವಿಚಾರವಾಗಿ ಆಶ್ವಾಸನೀಯ ವರ್ತನೆಯಿಂದ ಸಹೋದರ ವರ್ಗದಲ್ಲಿ ಬಹಳ ಸಂತಸ ಉಂಟಾಗುವುದು. ಕೌಟುಂಬಿಕವಾಗಿ ತೆಗೆದುಕೊಳ್ಳಬೇಕಾದ ನಿರ್ಣಯದ ಬಗ್ಗೆ ಮೇಲ್ವಿಚಾರಣೆ ಮಾಡಬಹುದು.
ಕರ್ಕಾಟಕ
ಅಭಿರುಚಿಗೆ ತಕ್ಕಂಥ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಹೆಚ್ಚು ಸೂಕ್ತ. ದೇಹದಲ್ಲಿ ಅಧಿಕ ಉಷ್ಣಾಂಶದಿಂದ ಅನಾರೋಗ್ಯ ಉಂಟಾಗುವ ಸಂಭವವಿದೆ. ಆರ್ಥಿಕವಾಗಿ ಸೌಕರ್ಯ ಪಡೆದುಕೊಳ್ಳುವಿರಿ.
ಸಿಂಹ
ಕೃಷಿ ಭೂಮಿಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ದೊರೆಯುತ್ತದೆ. ಕರಕುಶಲ ವಸ್ತು ತಯಾರಿಕರಿಗೆ ಆದಾಯದಲ್ಲಿ ಹೆಚ್ಚಳ. ಪ್ರಗತಿಯ ಲಕ್ಷಣಗಳು ನಿಚ್ಚಳವಾಗಿ ತೋರಿಬರುವುದು.
ಕನ್ಯಾ
ಧಾರ್ಮಿಕವಾಗಿ ಹೆಚ್ಚಿನ ಏಕಾಗ್ರತೆ ಹಾಗೂ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ. ಜನಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಬಹಳ ಕೆಲಸದ ಒತ್ತಡ ಇರುವುದು. ನಂಬಿಕೆ ವಿಶ್ವಾಸ ಅಧಿಕವಾಗುವುದು.
ತುಲಾ
ಕಾರ್ಯಕ್ಷೇತ್ರದಲ್ಲಿನ ನಷ್ಟ ಪ್ರಮಾಣ ಅಧಿಕವಾಗಿದ್ದರೂ, ಹೊಸ ಜವಾಬ್ದಾರಿಗಳು ಅರಸಿ ಬರಲಿವೆ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ. ಸಂಜೆಯ ಸಮಯದಲ್ಲಿ ಆಲಸ್ಯವಾಗಬಹುದು. ‌
ವೃಶ್ಚಿಕ
ಗುರಿಯನ್ನು ತಲುಪುವಲ್ಲಿ ಪರಿಶ್ರಮದ ಕೊರತೆ ಮತ್ತು ಅದೃಷ್ಟ ಹೀನತೆ ಸಮಬಲ ಸಾಧಿಸುವುದು. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಸಂತಸದ ಕ್ಷಣಗಳನ್ನು ತಂದುಕೊಳ್ಳುವ ಪ್ರಯತ್ನ ಮಾಡಿ.
ಧನು
ಜೀವನದಲ್ಲಿ ಬೇಸರಗೊಂಡಿರುವ ನೀವು ಮಾನಸಿಕವಾಗಿ ಸದೃಢರಾಗುವಿರಿ. ಭೋಗ ವಸ್ತುವಿನ ಖರೀದಿಯ ಅವಕಾಶವು ನಿಮ್ಮದಾಗಲಿದೆ. ಆರೋಗ್ಯದಲ್ಲಿ ವ್ಯತ್ಯಯಗಳು ಕಾಣಲಿವೆ.
ಮಕರ
ಗಣ್ಯ ವ್ಯಕ್ತಿಗಳ ವೈಯಕ್ತಿಕ ಭೇಟಿಯಲ್ಲಿ ಉಂಟಾದ ಕೆಲವು ಘಟನೆಗಳಿಂದ ಸಹಚರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ವೈಯಕ್ತಿಕ ವ್ಯವಹಾರದಲ್ಲಿಯೂ ಗೌಪ್ಯತೆಯನ್ನು ಕಾಪಾಡುವುದು ಮುಖ್ಯ.
ಕುಂಭ
ಈ ದಿನ ಎಲೆಕ್ಟ್ರಿಕಲ್‌ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗುವುದು. ದಿನದಿಂದ ದಿನಕ್ಕೆ ತಂದೆ-ತಾಯಿ ಅವರ ಆರೋಗ್ಯ ಸ್ಥಿತಿಯು ಉತ್ತಮ. ಗೃಹ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ.
ಮೀನ
ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸೌಲಭ್ಯ ದೊರೆಯುವ ಅವಕಾಶಗಳಿದೆ. ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡಬೇಕಾದೀತು. ನೆನಪಿನಶಕ್ತಿ ವೃದ್ಧಿಯಾಗುವಂತೆ ಶಾರದೆಯಲ್ಲಿ ಪ್ರಾರ್ಥಿಸಿ.
ADVERTISEMENT
ADVERTISEMENT