ದಿನ ಭವಿಷ್ಯ: ಸಾಲಗಳನ್ನು ಇತ್ಯರ್ಥ ಮಾಡದ ಹೊರತು ನಿದ್ರಾದೇವಿ ಸಲಹುವುದಿಲ್ಲ
Published 29 ಜುಲೈ 2025, 22:43 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯೋಚನೆಯಂತೆ ಕೆಲಸ ನೆರವೇರಲು ಪೂರ್ವತಯಾರಿಗೆ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿಕೊಳ್ಳುವುದು ಉತ್ತಮ. ಸಭೆಯಲ್ಲಿ ಮಾತನಾಡುವಾಗ ದಾಕ್ಷಿಣ್ಯ ಮಾಡಿಕೊಳ್ಳದೆ ಬುದ್ಧಿವಂತಿಕೆಯಿಂದ ಮಾತನಾಡಿರಿ.
ವೃಷಭ
ವೃತ್ತಿಯ ಪರಿಧಿಯೊಳಗಿನ ವ್ಯಕ್ತಿಗಳ ಮೇಲೆ ಎಷ್ಟೇ ಎಚ್ಚರವಹಿಸಿ ನಂಬಿದರೂ ಕಡಿಮೆಯಾಗುತ್ತದೆ. ವೃತ್ತಿ ಸಂಬಂಧಿ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತನ ಮೊರೆ ಹೋಗಬೇಕಾಗುವುದು.
ಮಿಥುನ
ಕುಟುಂಬದಲ್ಲಿ ನಡೆಯುವ ಶುಭಕಾರ್ಯಗಳು ಸಂಭ್ರಮವನ್ನು ಉಂಟುಮಾಡುತ್ತವೆ. ಬ್ಯಾಂಕ್ ಸಂಬಂಧಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆಯೇ ಇರಬಹುದು. ಜಾರಿಕೆಯ ಸಾಧ್ಯತೆಗಳಿವೆ. ಎಚ್ಚರವಿರಲಿ.
ಕರ್ಕಾಟಕ
ಇನ್ನೊಬ್ಬರೊಂದಿಗೆ ಮಾತನಾಡುವಾಗ ತುಂಬಾ ಅಳೆದು ತೂಗಿ ಮಾತನಾಡುವ ಪ್ರವೃತ್ತಿಯು ಎದುರಿನ ವ್ಯಕ್ತಿಗಳಿಗೆ ದೂರವಿಟ್ಟಿದ್ದಾರೆ ಎಂಬ ಭಾವನೆ ತರಬಹುದು. ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಿಕೊಳ್ಳಿ.
ಸಿಂಹ
ಯಾವುದೋ ಸಂಶೋಧನೆಯಲ್ಲಿ ತೊಡಗಿರುವ ರಾಸಾಯನಿಕ ಸಂಶೋಧನಾ ವಿದ್ಯಾರ್ಥಿಗಳಿಗೆ ಸುಡುವ ವಸ್ತುಗಳ ಬಗ್ಗೆ ಜಾಗ್ರತೆ ಇರಲಿ. ಕೆಲಸಗಳು ಸತತ ಪ್ರಯತ್ನದಿಂದ ಆಗುತ್ತದೆ. ಚರ್ಮವ್ಯಾಧಿ ಕಾಡಬಹುದು.
ಕನ್ಯಾ
ಮಾಡುವ ಸಹಾಯವು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ಇಷ್ಟ ಕ್ಷೇತ್ರದಲ್ಲಿ ಹೊಸ ಉದ್ಯೋಗ ಪಡೆಯುವವರಿಗೆ ಕೆಲಸ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾಗಲಿದೆ.
ತುಲಾ
ಯಾರದೆಂದು ಗೊತ್ತಿರದ ಅಪರಾಧಗಳನ್ನು ಬೆಳಕಿಗೆ ತರಲುಹೋಗಿ ಅಪರಾಧಿ ಎನ್ನುವ ಪದವಿ ತಲೆ ಏರುವ ಸಾಧ್ಯತೆ ಇದೆ. ಸಾಲಗಳನ್ನು ಇತ್ಯರ್ಥ ಮಾಡದ ಹೊರತು ನಿದ್ರಾದೇವಿ ಸಲಹುವುದಿಲ್ಲ.
ವೃಶ್ಚಿಕ
ಸಣ್ಣ ಕಿಚ್ಚಿನಿಂದ ದೊಡ್ಡ ಬೆಂಕಿ ಹೊತ್ತುವಂತೆ ಸಣ್ಣ ಜಗಳಗಳೇ ಮುಂದೆ ದೊಡ್ಡ ಮನಸ್ತಾಪಗಳಿಗೆ ಕಾರಣವಾಗಬಹುದು. ದಿನಸಿ ಅಂಗಡಿಯ ಮಾಲೀಕರಿಗೆ ಗುಣಮಟ್ಟದ ವಸ್ತು ಪೂರೈಸುವುದೇ ಕಷ್ಟವಾಗುವುದು.
ಧನು
ಶೂರತ್ವ ಪ್ರದರ್ಶನ ಬರಿಯ ಕನ್ನಡಿಯ ಮುಂದಾಗದೆ ಅಧಿಕಾರಿಗಳ ಮುಂದೆ ತೋರಿಸಿದಲ್ಲಿ ಕೆಲಸಗಳು ಮುಂದುವರಿಯಬಹುದು. ಸ್ವಂತ ತೀರ್ಮಾನದ ಔಷಧಿಯು ಅಡ್ಡಪರಿಣಾಮ ಬೀರಬಹುದು.
ಮಕರ
ಹಾಸ್ಯ ವ್ಯಕ್ತಿತ್ವವನ್ನು ಅನುಭವಿಸಿ ಸಾಥ್ ಕೊಡುವ ಯೋಗ್ಯ ವ್ಯಕ್ತಿಯೊಂದಿಗೆ ಆನಂದ ದಿನವನ್ನು ಕಳೆಯುವಿರಿ. ನಿರ್ವಾಹಕರಿಗೆ ಅದ್ದೂರಿಯಾದ ಕಾರ್ಯಕ್ರಮ ನಿರ್ವಹಿಸುವ ಜವಾಬ್ದಾರಿ ಸಿಗಬಹುದು.
ಕುಂಭ
ದೇಹಾಲಸ್ಯವು ವಿಶೇಷವಾಗಿ ವಿದ್ಯಾರ್ಥಿಗಳನ್ನು ಕಾಡಲಿದೆ. ಆಲಸಿಯಾಗದಿರಿ. ಕೆಲವು ಶೋಕಿ ಎನ್ನಿಸುವ ಅಭ್ಯಾಸಗಳು ಇತರಿಗೆ ಅಡ್ಡಿಯಾಗುವಂತಿದ್ದಲ್ಲಿ ಆ ಅಭ್ಯಾಸವನ್ನು ಕೈಬಿಡುವ ಕಾರ್ಯವನ್ನು ಮಾಡಿ.
ಮೀನ
ಅರ್ಹತೆಗೆ ತಕ್ಕಂತಹ ಕೆಲಸವಿಲ್ಲವೆಂದು ಕೊರಗುತ್ತಿರುವವರು ಬೇಕಾದಂಥ ಉದ್ಯೋಗಾವಕಾಶವನ್ನು ಹುಡುಕುವಿರಿ. ಪ್ರಕೃತಿಯ ವಿಸ್ಮಯ ರೂಪು–ರೇಷೆಗಳಿಗೆ ಮಾರುಹೋಗುವಿರಿ.