ವಾರ ಭವಿಷ್ಯ: 26-10-2025 ರಿಂದ 1-11-2025 ರವರೆಗೆ
Published 25 ಅಕ್ಟೋಬರ್ 2025, 23:57 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ಮೇಲೆ ನೀವು ನಂಬಿಕೆ ಇಟ್ಟುಕೊಳ್ಳಿರಿ. ಆದಾಯವು ಕಡಿಮೆ ಇರುತ್ತದೆ. ಬಂಧುಗಳೊಳಗಿನ ವ್ಯಾಪಾರ ನಷ್ಟಕ್ಕೆ ಕಾರಣವಾಗಬಹುದು. ಆಸ್ತಿ ಮಾಡಿಕೊಳ್ಳುವ ಯೋಗವಿದೆ, ಈಗ ಬಳಸಿಕೊಳ್ಳಿರಿ. ಪ್ರತಿಭೆಗೆ ತಕ್ಕ ಅವಕಾಶಗಳು ಒದಗಿ ಬರುತ್ತವೆ. ವೈಯಕ್ತಿಕ ಕೆಲಸಗಳ ಬಗ್ಗೆ ಹೆಚ್ಚು ಗಮನಹರಿಸಿರಿ. ಕ್ರಯವಿಕ್ರಯ ಒಪ್ಪಂದದ ವ್ಯವಹಾರಗಳಿಂದ ಲಾಭ ಬರುತ್ತದೆ. ಯಂತ್ರೋಪಕರಣಗಳನ್ನು ಬಳಸಿ ಮಾಡುವ ಕೆಲಸಗಳಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ವಿದೇಶಿ ವ್ಯವಹಾರಗಳಲ್ಲಿ ಆದಾಯ ಹೆಚ್ಚುತ್ತದೆ. ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರವಿರುತ್ತದೆ. ವಾಹನ ದುರಸ್ತಿ ಮಾಡುವವರಿಗೆ ಆದಾಯ ಅಧಿಕವಾಗಿರುತ್ತದೆ.
(ಅಶ್ವಿನಿ ಭರಣಿ ಕೃತಿಕ 1)
ವೃಷಭ
ನಿಮ್ಮ ವೈಯಕ್ತಿಕ ಅಲಂಕಾರಕ್ಕೆ ಹೆಚ್ಚು ಗಮನಕೊಡುವಿರಿ. ಸಂಗಾತಿಯ ಸಹಕಾರದಿಂದ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ವ್ಯವಹಾರಗಳಲ್ಲಿ ಬಂಧುಗಳ ನಡುವೆ ಒಮ್ಮತ ಮೂಡುವ ಸಾಧ್ಯತೆಗಳಿವೆ. ಅನಾರೋಗ್ಯ ಸಮಸ್ಯೆ ಇದ್ದವರಿಗೆ ಸ್ವಲ್ಪ ಸುಧಾರಣೆ ಕಂಡುಬರುತ್ತದೆ. ಹೆಚ್ಚಿನ ಮೊತ್ತದ ವಸ್ತುಗಳನ್ನು ಖರೀದಿ ಮಾಡುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡು ಅಧ್ಯಯನದತ್ತ ಗಮನಹರಿಸುವುದು ಒಳ್ಳೆಯದು. ಸ್ವಂತ ವ್ಯವಹಾರದಲ್ಲಿ ಜಾಣತನವನ್ನು ತೋರಿ ಲಾಭ ಹೆಚ್ಚು ಮಾಡಿಕೊಳ್ಳುವಿರಿ. ಕೆಲವು ಅಧಿಕಾರಿಗಳಿಂದ ಸ್ವಲ್ಪ ಕಾನೂನಿನ ತೊಂದರೆ ಬರಬಹುದು.
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಆರಂಭದಲ್ಲಿ ದ್ವಂದ್ವ ನೀತಿಗಳು ನಿಮ್ಮಲ್ಲಿ ಇರುತ್ತವೆ. ಆದಾಯವು ನಿರೀಕ್ಷೆಯನ್ನು ತಲುಪುತ್ತವೆ. ಕೃಷಿಕರಿಗೆ ಆದಾಯದಲ್ಲಿ ಸ್ವಲ್ಪ ಅನಿಶ್ಚಿತತೆ ಎದುರಾಗಬಹುದು. ಮಧ್ಯಸ್ಥಿಕೆ ವಹಿಸುವುದು, ಜಾಮೀನು ಕೊಡುವುದು ಬಹಳ ದುಬಾರಿಯಾಗಬಹುದು. ವಿಶ್ವಾಸಪೂರ್ವಕ ಮಾತುಗಳಿಂದಾಗಿ ಎಲ್ಲರಲ್ಲೂ ಸ್ನೇಹ ಸಂಪಾದನೆ ಮಾಡುವಿರಿ. ಎಲ್ಲರ ಸಹಕಾರ ನಿಮಗೆ ದೊರೆತು ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ವಿದ್ಯುತ್ ಗುತ್ತಿಗೆದಾರರಿಗೆ ಬರಬೇಕಾಗಿದ್ದ ಹಣ ಸ್ವಲ್ಪ ಬರಬಹುದು. ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರಿಗೆ ಸರ್ಕಾರದ ಸಹಾಯ ದೊರೆಯುತ್ತದೆ. ಹಿರಿಯರಿಂದ ಅಮೂಲ್ಯ ದಾಖಲೆಗಳು ನಿಮಗೆ ಹಸ್ತಾಂತರ ಆಗಬಹುದು.
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಸ್ವಾಭಿಮಾನ ಬಹಳ ಹೆಚ್ಚಾಗಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಕೆಲವು ಮಹಿಳೆಯರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ. ನಿಮ್ಮ ಲಾಭದ ಲೆಕ್ಕಾಚಾರಗಳು ಸ್ವಲ್ಪ ವ್ಯತ್ಯಾಸವಾಗಿ ಲಾಭದಲ್ಲಿ ಕಡಿಮೆಯಾಗಬಹುದು. ಈಗ ದೈನಂದಿನ ಕೆಲಸಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಸೂಕ್ಷ್ಮ ನೇಯ್ಗೆಯನ್ನು ಮಾಡುವ ನೇಕಾರರಿಗೆ ಬೇಡಿಕೆ ಹೆಚ್ಚಾಗಿ ಕೈತುಂಬಾ ಕೆಲಸ ಬಂದು ಧನ ಸಂಪಾದನೆಯಾಗುತ್ತದೆ. ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗೆ ಸಾಕಷ್ಟು ಕೆಲಸಗಳು ದೊರೆಯುತ್ತವೆ. ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣ ಈಗ ಬರುವ ಸಾಧ್ಯತೆ ಇದೆ. ಸರ್ಕಾರಿ ಸಾಲ ಪಡೆದು ಉಳಿದ ಕೈ ಸಾಲಗಳನ್ನು ತೀರಿಸಿಕೊಳ್ಳಬಹುದು.
(ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಅಧ್ಯಾತ್ಮದತ್ತ ಒಲವು ಹೆಚ್ಚುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳ ಸಹಕಾರ ನಿಮಗೆ ದೊರೆಯುತ್ತದೆ. ಕೃಷಿಭೂಮಿಯನ್ನು ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆದು ನಿಮಗೆ ವ್ಯಾಪಾರದಲ್ಲಿ ಸೂಕ್ತಸ್ಥಾನ ಸಿಕ್ಕಿ ಲಾಭ ಪಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಯಶಸ್ಸು ದೊರೆಯುತ್ತದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಉದ್ಯೋಗದ ವಿಚಾರದಲ್ಲಿ ಸಂತಸದ ಸುದ್ದಿಯೊಂದನ್ನು ಕೇಳುವಿರಿ. ಮಾನಸಿಕ ಚಿಂತನೆಗಳು ದೂರವಾಗಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಈಗ ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನದ ಕಾಲ.
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಸಿರಿವಂತರಂತೆ ಕಾಣಿಸಿಕೊಳ್ಳಲು ಪ್ರಯತ್ನಪಡುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ವ್ಯವಹಾರಿಕತೆ ತುಂಬಿರುತ್ತದೆ. ನಿಮ್ಮ ಬಂಧುಗಳು ನಿಮಗೆ ಸಹಕಾರ ನೀಡುವುದು ಕಡಿಮೆಯಾಗಬಹುದು. ಆಸ್ತಿ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಲೇವಾದೇವಿ ನಡೆಸುವವರಿಗೆ ಮಧ್ಯಮ ಫಲಿತಾಂಶ ಇರುತ್ತದೆ. ನೂತನ ವಾಹನ ಕೊಳ್ಳುವ ಯೋಗವಿದೆ. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಸಾಕಷ್ಟು ಹಣ ಉಳಿಸುವಿರಿ. ಕಚೇರಿಯ ಆಂತರಿಕ ಸಮಸ್ಯೆಗಳಿಂದ ಈಗ ಮುಕ್ತಿಯನ್ನು ಹೊಂದುವಿರಿ. ಕುಶಲಕರ್ಮಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ.
(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಮುನ್ನುಗ್ಗುವ ಶಕ್ತಿ ಇರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಷ್ಟು ಇರುವುದಿಲ್ಲ. ನ್ಯಾಯಾಲಯದ ತೀರ್ಪುಗಳು ಮುಂದೂಡಿಕೆಯಾಗುವ ಸಾಧ್ಯತೆ ಇದೆ, ಸಹನೆಯಿಂದ ಇದ್ದರೆ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು. ಸಾವಯವ ಕೃಷಿ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಬಂಧುಗಳೊಡನೆ ನಿಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳುವುದು ನಿಮಗೆ ಒಳ್ಳೆಯದು. ಆಸ್ತಿ ಖರೀದಿಯ ವಿಚಾರದಲ್ಲಿ ಎಚ್ಚರದಿಂದಿರಿ. ಈಗ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ಮೂತ್ರಕೋಶಕ್ಕೆ ಸಂಬಂಧಪಟ್ಟ ಕಾಯಿಲೆ ಇರುವವರು ಎಚ್ಚರವಹಿಸಿರಿ. ಸಂಸಾರದಲ್ಲಿ ಕಠಿಣ ಮಾತುಗಳು ಕೇಳಿಬರಬಹುದು. ವಿದೇಶಿ ಪ್ರಯಾಣ ಮಾಡಬೇಕೆನ್ನುವವರಿಗೆ ಅವಕಾಶ ದೊರೆಯುತ್ತದೆ.
(ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ಜಾಣತನದಿಂದ ಮಾತನಾಡುವ ಕಲೆಯನ್ನು ರೂಢಿ ಮಾಡಿಕೊಳ್ಳುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳಲ್ಲಿನ ಶತ್ರುಗಳಾರೆಂದು ನಿಮಗೆ ತಿಳಿಯುತ್ತದೆ. ವಿದೇಶಿ ಕಂಪನಿಗಳಿಗೆ ಭೂಮಿಯನ್ನು ಒದಗಿಸಿಕೊಡುವ ಕೆಲಸ ಮಾಡುವವರಿಗೆ ಲಾಭ ಹೆಚ್ಚು. ಕುಟುಂಬ ಸದಸ್ಯರಲ್ಲಿ ವಾದ ವಿವಾದಗಳ ಸಾಧ್ಯತೆ ಇದೆ. ನ್ಯಾಯಾಲಯದ ವಿಷಯದಲ್ಲಿ ಉತ್ತಮ ವಕೀಲರನ್ನು ನೇಮಿಸಿಕೊಳ್ಳುವುದು ನಿಮಗೆ ಬಹಳ ಅನುಕೂಲ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೆ ಉತ್ತಮ ಗಳಿಕೆಯ ಜೊತೆ ಹೆಸರು ಬರುವುದು. ಹೊಸ ರೀತಿಯ ವ್ಯವಹಾರದಲ್ಲಿ ನಿರೀಕ್ಷಿತ ವ್ಯಕ್ತಿಗಳಿಂದ ಸಹಕಾರ ದೊರೆಯುವುದು. ಮುನ್ನುಗ್ಗಿ ಮಾಡುವ ಕೆಲಸಗಳಲ್ಲಿ ಈಗ ಸಾಕಷ್ಟು ಯಶಸ್ಸು ಇರುತ್ತದೆ.
(ವಿಶಾಖಾ 4 ಅನುರಾಧ ಜೇಷ್ಠ)
ಧನು
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗಬಹುದು. ಆದಾಯವು ಕಡಿಮೆ ಇರುತ್ತದೆ. ಬಂಧುಗಳಲ್ಲಿ ಕೆಲವರು ನಿಮ್ಮನ್ನು ವಿರೋಧಿಸಿದರೂ ಸಾಕಷ್ಟು ಜನ ಸಹಕರಿಸುವರು. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕುವುದು. ಅಧಿಕಾರಿಗಳಿಂದ ಸೂಕ್ತ ಸಹಾಯ ಸಿಕ್ಕಿ ಸಂತೋಷವಾಗುವುದು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹೆಚ್ಚಿನ ಆಸಕ್ತಿ ಮೂಡುವುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ನಿರೀಕ್ಷೆಯಂತೆ ಕೆಲವು ಕೆಲಸಗಳು ಕೈಗೂಡುವುದರಿಂದ ಮನಸ್ಸು ನಿರಾಳವಾಗುವುದು. ಹೊಸ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆಗೆ ಸೂಕ್ತ ಬೆಲೆ ಸಿಗುತ್ತದೆ.
(ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ವೃತ್ತಿ ಶ್ರಮ ಅಧಿಕವಾಗಬಹುದು. ಆರ್ಥಿಕ ಸ್ಥಿತಿಯು ಸಾಮಾನ್ಯ ಗತಿಯಲ್ಲಿ ಇರುತ್ತದೆ. ನ್ಯಾಯಾಲಯದ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ. ಅನಾವಶ್ಯಕ ವ್ಯವಹಾರಗಳಿಂದ ದೂರ ಇರುವುದು ಒಳ್ಳೆಯದು. ರಾಜಕೀಯ ವ್ಯಕ್ತಿಗಳಿಗೆ ಶುಭ ಸಮಾಚಾರಗಳು ದೊರೆಯುತ್ತವೆ. ಸಂತಾನ ಅಪೇಕ್ಷಿತರಿಗೆ ಹಿನ್ನಡೆ ಇರುತ್ತದೆ. ವಸ್ತ್ರಗಳ ಸಗಟು ವ್ಯಾಪಾರ ಮಾಡುವವರಿಗೆ ಅಭಿವೃದ್ಧಿ ಇದೆ. ಈಗ ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ಕಣ್ಣಿನ ತೊಂದರೆ ಇರುವವರು ಉದಾಸೀನ ಮಾಡದೆ ಚಿಕಿತ್ಸೆಗೆ ಹೋಗುವುದು ಒಳ್ಳೆಯದು.
(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಎಲ್ಲಾ ಕೆಲಸಗಳನ್ನು ನೀವೇ ಮಾಡಲು ಹೋಗಬೇಡಿರಿ. ಆದಾಯವು ಕಡಿಮೆ ಇದ್ದು ಅದರಲ್ಲೇ ನಿಭಾಯಿಸಬೇಕು. ಹಿರಿಯರಿಗೆ ಬಂಧುಗಳಿಂದ ಸಹಕಾರ ಸಿಗುತ್ತದೆ. ಯುವಕರ ಅಸಹನೆ ಮತ್ತು ಉದಾಸೀನ ಅವರಿಗೆ ತೊಂದರೆ ತರುತ್ತವೆ. ಆಸ್ತಿ ಖರೀದಿ ಮಾಡುವ ಬಗ್ಗೆ ಮುಂದುವರಿಯಬಹುದು. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ದಾಯಾದಿಗಳ ನಡುವೆ ಇದ್ದ ಕಲಹಗಳು ಈಗ ಕಡಿಮೆಯಾಗುವ ಸಾಧ್ಯತೆಗಳಿವೆ. ಉತ್ಸವ ಹಾಗೂ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಸಂತಾನ ಅಪೇಕ್ಷಿತರಿಗೆ ಶುಭ ಸಮಾಚಾರಗಳು ಸಿಗುತ್ತವೆ. ಪ್ರಿಯ ವ್ಯಕ್ತಿಗಳಿಂದ ಅಥವಾ ಮಕ್ಕಳಿಂದ ಶುಭ ಸಮಾಚಾರಗಳನ್ನು ಕೇಳುವಿರಿ.
(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ವಾರದ ಆರಂಭದಲ್ಲಿ ಆಲಸ್ಯತನ ಎದ್ದು ಕಾಣುತ್ತದೆ. ಒರಟು ಮಾತಿನಿಂದ ಜನಗಳ ನಡುವೆ ನಿಷ್ಠುರವಾಗಬಹುದು. ಒಡಹುಟ್ಟಿದವರ ನಡುವೆ ಆರ್ಥಿಕ ಸಮಸ್ಯೆಗಳು ಉಲ್ಬಣಿಸಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ಇರುತ್ತದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಅನವಶ್ಯಕ ಖರ್ಚುಗಳಿಂದ ಆರ್ಥಿಕ ಅಸಮತೋಲನ ಆಗಬಹುದು. ಉದ್ಯಮಿಗಳು ಋಣ ಭಾರದಿಂದ ಹೊರ ಬರಲು ಮಾರ್ಗ ದೊರೆಯುತ್ತದೆ. ಗುತ್ತಿಗೆದಾರರಿಗೆ ಗುತ್ತಿಗೆಗಳು ದೊರೆತು ಕೈತುಂಬಾ ಸಂಪಾದನೆ ಇರುತ್ತದೆ. ನವೀನ ರೀತಿಯ ಕೃಷಿ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.
(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)