ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಪಕ್ಕೆಲುಬಿಗೆ ಪೆಟ್ಟುಮಾಡಿಕೊಂಡಿದ್ದ ಭಾರತ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಸಿಡ್ನಿಯ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ನಡೆದ ಆ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಹೊಡೆದ ಚೆಂಡನ್ನು ಹಿಂದಕ್ಕೆ ಓಡಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಅಮೋಘವಾಗಿ ಕ್ಯಾಚ್ ಪಡೆಯುವ ವೇಳೆ ಅಯ್ಯರ್ ಅವರ ಪಕ್ಕೆಲುಬು ನೆಲಕ್ಕೆ ಉಜ್ಜಿಹೋಗಿತ್ತು.

‘ಡ್ರೆಸಿಂಗ್ರೂಮ್ನಲ್ಲಿ ಅಯ್ಯರ್ ಪ್ರಜ್ಞೆತಪ್ಪಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಗುಲ್ಮಕ್ಕೆ (ಪ್ಲೀಹ ಸ್ಪ್ಲೀನ್) ಸೀಳು ಗಾಯವಾಗಿರುವುದು ಸ್ಕ್ಯಾನ್ಗಳಿಂದ ದೃಢಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ.

‘ಅಯ್ಯರ್ ಅವರಿಗೆ ಎಡ ಪಕ್ಕೆಲುಬಿನ ಕೆಳಭಾಗದಲ್ಲಿ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಲ್ಮಕ್ಕೆ ಗಾಯವಾಗಿರುವುದು ಸ್ಕ್ಯಾನ್ಗಳಿಂದ ಗೊತ್ತಾಗಿದೆ. ಅವರು ಚಿಕಿತ್ಸೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಬಿಸಿಸಿಐ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಅವರಿಗೆ ಆಂತರಿಕ ರಕ್ತಸ್ರಾವವಾಗಿರುವುದೂ ಪತ್ತೆಯಾಗಿದೆ. ಅವರ ಗಾಯದ ಸ್ಥಿತಿಗತಿಗಳ ಬಗ್ಗೆ ಬಿಸಿಸಿಐನ ವೈದ್ಯಕೀಯ ತಂಡವು, ಸಿಡ್ನಿಯಲ್ಲಿರುವ ತಜ್ಞ ವೈದ್ಯರ ಜೊತೆ ನಿಗಾವಹಿಸಿದೆ. ತಂಡದ ವೈದ್ಯರು ಸಿಡ್ನಿಯಲ್ಲೇ ಇರಲಿದ್ದು, ದೈನಂದಿನ ಪ್ರಗತಿಯ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

30 ವರ್ಷದ ಅಯ್ಯರ್ 2 ರಿಂದ 7 ದಿಗಳ ಕಾಲ ನಿಗಾದಲ್ಲಿ ಇರಲಿದ್ದಾರೆ. ಅವರು ಮೂರು ವಾರ ಕ್ರಿಕೆಟ್ನಿಂದ ದೂರವಿರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಚಿಕಿತ್ಸೆ ಮತ್ತು ವಿಶ್ರಾಂತಿ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಕಡೇಪಕ್ಷ ಒಂದು ವಾರ ಅವರು ಸಿಡ್ನಿಯಲ್ಲೇ ಉಳಿದುಕೊಳ್ಳಬೇಕಾಗಬಹುದು. ಅವರು ಪ್ರಯಾಣ ಮಾಡಲು ಫಿಟ್ ಆಗಿದ್ದಾರೆ ಎಂದು ವೈದ್ಯರು ಸೂಚಿಸಿದ ನಂತರವಷ್ಟೇ ಸ್ವದೇಶಕ್ಕೆ ಮರಳಬಹುದು. ಅಯ್ಯರ್ ಅವರು ಭಾರತ ಟಿ20 ತಂಡದ ಭಾಗವಾಗಿಲ್ಲ.
.ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ಗೆ ಗಾಯ: 3 ವಾರ ವಿಶ್ರಾಂತಿ.ಭಾರತ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯಕ್ಕೆ ಆ್ಯಡಂ ಜಂಪಾ ಅಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.