ಸೋಮವಾರ, 14 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಮಾಧಾನದಿಂದ ಯೋಚಿಸಿದರೆ ಸಮಸ್ಯೆ ಉಪಶಮನವಾಗುವುದು
Published 25 ಜೂನ್ 2025, 1:05 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸದ ಒತ್ತಡದಿಂದ ದೂರಾಗಿ ಮಿತ್ರರೊಡನೆ ಉಲ್ಲಾಸದಿಂದ ಕಾಲ ಕಳೆಯುವಿರಿ. ಸಂಸಾರದಲ್ಲಿ ಸುಖವನ್ನು ಕಾಣಲಿರುವಿರಿ. ಅರ್ಧದಲ್ಲಿ ಕೈಬಿಟ್ಟಿದ್ದ ಕಾರ್ಯಗಳಿಗೆ ಮರುಚಾಲನೆ ನೀಡುವ ಬಗ್ಗೆ ಗಮನಹರಿಸಿ.
ವೃಷಭ
ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಧನಾಗಮನ ಹೆಚ್ಚಿದ್ದರೂ ಸಂಪಾದನೆಯ ಬಹುಪಾಲು ವೆಚ್ಚವಾಗಲಿದೆ. ಮಕ್ಕಳ ಜೀವನದ ಹಾದಿ ಬದಲಾಗಲಿದೆ.
ಮಿಥುನ
ಆತ್ಮಸ್ಥೈರ್ಯದಿಂದ ಯೋಚಿಸಿದ ಎಲ್ಲಾ ಕೆಲಸದಲ್ಲಿಯೂ ಜಯ ಕಾಣುವಿರಿ. ವಾಯುಸಂಬಂಧ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಷೇರು ಮಾರಾಟಗಳಿಂದ ಲಾಭ ಹೊಂದುವಿರಿ.
ಕರ್ಕಾಟಕ
ವೈಯಕ್ತಿಕ ಸಮಸ್ಯೆಗಳ ಇತ್ಯರ್ಥಕ್ಕೆ ಬಂಧುಗಳ ಸಹಕಾರ ಪಡೆಯಲು ನಿರ್ಧರಿಸಿ. ಸಮಾಧಾನದಿಂದ ಯೋಚಿಸಿದರೆ ಸಮಸ್ಯೆ ಉಪಶಮನವಾಗುವುದು. ತಂದೆಯವರ ಆರೋಗ್ಯ ಸುಧಾರಣೆಯಿಂದ ನೆಮ್ಮದಿ.
ಸಿಂಹ
ವೈದ್ಯ ವೃತ್ತಿಯವರಿಗೆ ವಿಶೇಷ ಅನುಭವ ಸಿಗಲಿದೆ. ಉನ್ನತ ಅಧಿಕಾರಿಗಳ ಮೇಲೆ ಇದ್ದ ತಪ್ಪು ತಿಳಿವಳಿಕೆಗಳು ದೂರಾಗಲಿವೆ. ಸತತ ಪ್ರಯತದಿಂದ ಕೆಲಸ ಕಾರ್ಯ ಆರಂಭಿಸುವಿರಿ.
ಕನ್ಯಾ
ವಿದ್ಯುತ್ ಸಂಬಂಧಿ ವಸ್ತುಗಳ ಬಳಕೆಯನ್ನು ಮಾಡುವಾಗ ಮುಂಜಾಗ್ರತಾ ಕ್ರಮ ವಹಿಸಿ. ಗೃಹಿಣಿಯರು ಉತ್ತಮ ಶಿಫಾರಸ್ಸಿನ, ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು.
ತುಲಾ
ಬಾಡಿಗೆ ಮನೆ ಹುಡುಕುವ ಕೆಲಸದಲ್ಲಿ ಸಹೋದ್ಯೋಗಿಯೊಬ್ಬರು ನೆರವಿಗೆ ಬರುವರು. ಕೋರ್ಟು ಕಚೇರಿ ವ್ಯವಹಾರ ನಿರ್ವಹಣೆ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಿರಿ. ಕಚೇರಿ ಕೆಲಸಗಳಿಗೆ ಅಲೆದಾಟ ಇರುತ್ತದೆ.
ವೃಶ್ಚಿಕ
ವೈದ್ಯ ವೃತ್ತಿಯಲ್ಲಿರುವವರಿಗೆ ವಿಕ್ಷಿಪ್ತ ರೋಗಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ‌. ಸೂಕ್ಷ್ಮಗ್ರಾಹಿಯಾದ ನೀವು ಮುಂದಿನ ಆತಂಕಗಳನ್ನು ಕಂಡುಕೊಳ್ಳಲಿದ್ದೀರಿ. ಪ್ರತಿಭೆ ಸಾಮರ್ಥ್ಯ ಈ ದಿನ ಬೆಳಕಿಗೆ ಬರಲಿದೆ.
ಧನು
ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಕೆಲಸ ನಡೆಸುತ್ತಿರುವವರು ಅವಗಢಗಳಿಂದ ಜಾಗರೂಕರಾಗಿ ಇರಿ. ಓಡುತ್ತಿರುವ ಪ್ರಪಂಚದೊಂದಿಗೆ ಓಡಲು ಪ್ರಯತ್ನಿಸುವುದು ಉತ್ತಮ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ.
ಮಕರ
ಬೆಳವಣಿಗೆಯ ಹಾದಿಯಲ್ಲಿ ದಿಕ್ಕು ತಪ್ಪಿಸುವವರೇ ಹೆಚ್ಚಿರುವುದರಿಂದ ನಿಮ್ಮತನ ಪ್ರದರ್ಶಿಸುವುದು ಸ್ವಲ್ಪ ಕಷ್ಟ. ದುರ್ಜನರಿಂದ ದೂರವಿದ್ದು ಸಜ್ಜನರಲ್ಲಿ ಸ್ನೇಹ ಮತ್ತು ವ್ಯವಹಾರ ಮಾಡಿ.
ಕುಂಭ
ಸುತ್ತಣ ಪರಿಸರದಲ್ಲಿರುವ ಬುದ್ಧಿವಂತ ವ್ಯಕ್ತಿಗಳಿಂದ ಲಾಭ ಉಂಟಾಗುವುದು. ನಿಯಮಿತ ಆಹಾರದಿಂದ ದೇಹದಲ್ಲಿ ವಾತದ ಬಾಧೆ ಕಡಿಮೆಯಾಗಲಿದೆ. ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ.
ಮೀನ
ಉನ್ನತ ಅಧಿಕಾರಿಗಳ ಜತೆಗಿನ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರಿಂದ ಲಾಭವಾಗುತ್ತದೆ. ಕರ್ತವ್ಯ ಕೊರತೆಯಿಂದಾಗಿ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳಲಿದ್ದೀರಿ.
ADVERTISEMENT
ADVERTISEMENT