ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ
Published 31 ಆಗಸ್ಟ್ 2024, 21:30 IST
​ಪ್ರಜಾವಾಣಿ ವಾರ್ತೆ
author
ಮೇಷ
ಆತುರದ ಸ್ವಭಾವವನ್ನು ಕೊಂಚ ಸುಧಾರಿಸಿಕೊಂಡು ಮತ್ತೊಬ್ಬರ ಭಾವನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ತಿಳಿದುಕೊಂಡರೆ ಉತ್ತಮ ವ್ಯಕ್ತಿಯಾಗುವಿರಿ. ಲೇವಾದೇವಿ ವ್ಯವಹಾರಗಳು ಮುಂದುವರಿಯುವುದು.
ವೃಷಭ
ಕಷ್ಟ–ಕಾರ್ಪಣ್ಯಗಳ ಜೀವನವನ್ನು ಈಗಷ್ಟೇ ಕಳೆದ ನಿಮಗೆ ಈಗ ಮಗನು ಹೊಸ ತಲೆನೋವನ್ನು ತರುವಂತಹ ಸಾಧ್ಯತೆ ಇದೆ. ಈ ಮಾಸದ ಪ್ರಯುಕ್ತವಾಗಿ ದಾನ ಧರ್ಮದಂತಹಾ ಉತ್ತಮ ಕಾರ್ಯಗಳನ್ನು ಮಾಡುವಿರಿ.
ಮಿಥುನ
ವಾಹನ ಮಾರಾಟದ ಯೋಚನೆಯನ್ನು ಸದ್ಯದ ಮಟ್ಟಿಗೆ ಕೈ ಬಿಡುವುದೇ ಸರಿಯಾದ ಮಾರ್ಗ. ನಿಮಗಿರುವ ಶತ್ರು ಬಾಧೆ ಈ ದಿನದಿಂದ ಹಂತ ಹಂತವಾಗಿ ನಿವಾರಣೆ ಆಗಲಿದೆ. ಮಕ್ಕಳ ಉನ್ನತಿಯನ್ನು ಕಾಣುವಿರಿ.
ಕರ್ಕಾಟಕ
ಮಹತ್ತರವಾದುದನ್ನು ಸಾಧಿಸಲಿಕ್ಕಾಗಿ ಕುಟುಂಬ ಹಾಗೂ ಸ್ವಸ್ಥಾನದಿಂದ ದೂರವಾಗುವ ಸಾಧ್ಯತೆಗಳಿವೆ.  ವೈಯಕ್ತಿಕ ಮನೋಭಾವವನ್ನು ಬದಲಿಸಿಕೊಳ್ಳುವಿರಿ. ರಾಜಕೀಯದಲ್ಲಿ ವಿಶೇಷ ಪ್ರಭಾವ ಗಳಿಸಿಕೊಳ್ಳುವಿರಿ.
ಸಿಂಹ
ಉಳಿಸಿಕೊಂಡಿರುವ ಸರ್ಕಾರಿ ಕೆಲಸಗಳನ್ನು ಆದಷ್ಟು ಬೇಗಪೂರ್ಣಗೊಳಿಸಿಕೊಳ್ಳುವ ಯೋಚನೆಯನ್ನು ಮಾಡಿ. ಕುಟುಂಬದಲ್ಲಿನ ನೂತನ ಶಿಶುವಿನ ಜನನ ಕುಟುಂಬದ ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ.
ಕನ್ಯಾ
ಜವಳಿ ಮಾರಾಟಗಾರರು ಹೊಸ ದಾಸ್ತಾನು ತರಲು ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ನಿಮ್ಮನ್ನು ಅವಲಂಬಿಸಿಕೊಂಡು ಕೆಲಸಮಾಡುತ್ತಿರುವವರ ಕಡೆಗಣನೆ ಸರಿಯಲ್ಲ. ಹೊಸತನದಲ್ಲಿ ಜಯ ಕಾಣುವಿರಿ.
ತುಲಾ
ನಿಮ್ಮ ಹೊಸ ಜವಾಬ್ದಾರಿಗಳು ನೀವು ಅಂದುಕೊಂಡಷ್ಟು ಸುಲಭವಾ ದದ್ದಲ್ಲದೇ ಇರುವುದರಿಂದ ಹೊಂದಿಕೊಳ್ಳಲು ಅಧಿಕ ಪರಿಶ್ರಮ ಬೇಕಾಗುತ್ತದೆ. ಮನೆಯಲ್ಲಿ ಸೌಹಾರ್ದಯುತವಾದ ವಾತಾವರಣ ಸೃಷ್ಟಿಯಾಗಲಿದೆ.
ವೃಶ್ಚಿಕ
ಮಕ್ಕಳ ಆರೋಗ್ಯದ ಏರುಪೇರಿನಿಂದಾಗಿ ನಿಮಗೆ ಮಾನಸಿಕವಾಗಿ ಕಿರಿಕಿರಿ ಉಂಟಾಗಲಿದೆ. ಚರ್ಮಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸುವುದು.
ಧನು
ಅರಿಷಡ್ವರ್ಗಗಳ ನಿವಾರಣೆಗಾಗಿ ಅಧಿಕ ಮಟ್ಟದಲ್ಲಿ ಸಾಧನೆ ಮಾಡಲು ಪ್ರಾರಂಭಿಸಬಹುದು. ಶ್ರೀಕೃಷ್ಣನ ಸ್ಮರಣೆಯನ್ನು ನಿರಂತರವಾಗಿ ಮಾಡುವುದರಿಂದ ಸಕಲ ದುರಿತಗಳು ದೂರವಾಗುವುದು.
ಮಕರ
ಅಧಿಕ ತಂಡಿಯ ವಾತವರಣದಿಂದಾಗಿ ಮನೆಯಲ್ಲಿನ ಸೂಕ್ಷ್ಮ ವ್ಯಕ್ತಿಯ ನಿಗಾವಹಿಸುವುದು ನಿಮ್ಮ ಪ್ರಮುಖ ಕಾರ್ಯವಾಗುವುದು. ಪ್ರಾಧ್ಯಾಪಕರಿಗೆ ಮತ್ತು ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಇದು ಶುಭ ದಿನವಾಗಿದೆ.
ಕುಂಭ
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಉತ್ತಮವಾದ ಯಶಸ್ಸು ಪ್ರಾಪ್ತಿ.ಶಸ್ತ್ರಚಿಕಿತ್ಸಾ ವೈದ್ಯರಿಗೆ ರೋಗಿಯ ಕುಟುಂಬಸ್ಥರ ಕಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರುವುದು. ಕುಟುಂಬದ ಸಂತೋಷ ವೃದ್ಧಿಯಾಗುವುದು.
ಮೀನ
ಇಷ್ಟವಿಲ್ಲದ ಸಂಬಂಧವನ್ನು ಹೊತ್ತು ತಂದ ಮಗಳ ಮೇಲೆ ಕೋಪ ಸಹಜವಾದರು ಜೀವನ ಆಕೆಯದ್ದು ಎಂಬುವುದನ್ನು ಅರ್ಥೈಸಿಕೊಳ್ಳುವುದು ಸೂಕ್ತ. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ.
ADVERTISEMENT
ADVERTISEMENT