ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯವರಿಗೆ ಆಹಾರದ ವ್ಯತ್ಯಾಸದಿಂದಾಗಿ ಆರೋಗ್ಯ ಸಮಸ್ಯೆ ಕಾಣಿಸಲಿದೆ
Published 25 ಫೆಬ್ರುವರಿ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಯಾರನ್ನು ಹಿತೈಷಿಗಳು ಎಂದು ತಿಳಿದಿರುವಿರೋ ಅವರೇ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಾರೆ. ವಿದೇಶಕ್ಕೆ ತೆರಳಲು ತಯಾರಿ ನಡೆಸುತ್ತಿರುವವರು ಆಘಾತಕಾರಿ ಸುದ್ದಿ ಕೇಳಬಹುದು.
ವೃಷಭ
ವೃಷಭ: ಮದುವೆ ತಯಾರಿ ನಡೆಸುತ್ತಿರುವವರು ಶೀಘ್ರವಾಗಿ ಕೆಲಸಗಳನ್ನು ಮುಗಿಸುವಿರಿ. ಮನೆಯಲ್ಲಿನ ವೃದ್ಧರ ಆರೋಗ್ಯದಲ್ಲಿ ಏರುಪೇರಾಗುವ ಸಂದರ್ಭ ವಿರುವುದರಿಂದ ಜಾಗ್ರತರಾಗಿರಿ.
ಮಿಥುನ
ಮಿಥುನ: ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಬಯಸುತ್ತಿರುವ ಗೃಹಿಣಿಯರಿಗೆ ಸರಿಯಾದ ಮಾರ್ಗವೊಂದು ಪ್ರಾಪ್ತಿಯಾಗಲಿದೆ. ಮಧ್ಯಮವರ್ಗದವರಿಗೆ ವಿವಿಧ ಕೆಲಸಗಳಿಗೆ ಹಣ ಹೊಂದಿಸುವ ಚಿಂತೆಯಾಗಲಿದೆ.
ಕರ್ಕಾಟಕ
ಮಿಥುನ: ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಬಯಸುತ್ತಿರುವ ಗೃಹಿಣಿಯರಿಗೆ ಸರಿಯಾದ ಮಾರ್ಗವೊಂದು ಪ್ರಾಪ್ತಿಯಾಗಲಿದೆ. ಮಧ್ಯಮವರ್ಗದವರಿಗೆ ವಿವಿಧ ಕೆಲಸಗಳಿಗೆ ಹಣ ಹೊಂದಿಸುವ ಚಿಂತೆಯಾಗಲಿದೆ.
ಸಿಂಹ
ಸಿಂಹ: ಉತ್ಸವಾದಿ ಬೃಹತ್ ಕಾರ್ಯಕ್ರಮದ ಉಸ್ತುವಾರಿಯನ್ನು ನೋಡಿ ಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆ ಇರುವುದು ಆಯಾಸಕ್ಕೆ ಕಾರಣವಾಗಿದೆ. ಮಕ್ಕಳ ಬಗ್ಗೆ ಅತಿಯಾಗಿ ಚಿಂತೆ ಮಾಡುವುದನ್ನು ಕಡಿಮೆ ಮಾಡಿ.
ಕನ್ಯಾ
ಕನ್ಯಾ: ಮರಳಿ ಯತ್ನವ ಮಾಡು ಮನುಜ ಎಂದು ಹಿರಿಯರು ಹೇಳುವಂತೆ ವ್ಯವಹಾರದಲ್ಲಿ ಒಮ್ಮೆ ಸೋಲನ್ನು ಅನುಭವಿಸಿದ ಮಾತ್ರಕ್ಕೆ ಹಿಂದೆ ಸರಿಯಬೇಡಿ. ಹೂವುಗುಚ್ಛ ವ್ಯಾಪಾರಿಗಳಿಗೆ ಉತ್ತಮ ದಿನ.
ತುಲಾ
ತುಲಾ: ಕೇಶ ವಿನ್ಯಾಸಕಾರರು ಮತ್ತು ಬ್ಯೂಟಿ ಪಾರ್ಲರ್‌ನವರಿಗೆ ವೈಯಕ್ತಿಕ ಜೀವನದ ಬಗ್ಗೆ ಗಮನಹರಿಸಲು ಸಮಯಾವಕಾಶ ದೊರೆಯುತ್ತದೆ. ಗೃಹಿಣಿಯರಿಗೆ ಕೆಲವು ಕೆಲಸಗಳಲ್ಲಿ ಏರುಪೇರು ಉಂಟಾಗಬಹುದು.
ವೃಶ್ಚಿಕ
ವೃಶ್ಚಿಕ: ಸರಕುಗಳನ್ನು ರಫ್ತು ಹಾಗು ಆಮದನ್ನು ಮಾಡಿಕೊಳ್ಳುವವರು ಕೆಲಸಗಾರರ ಮೇಲೆ ಕಣ್ಣಿಡಿ. ಸಿಹಿ ತಿಂಡಿಗಳ ತಯಾರಕರು ಹಾಗೂ ಮಾರಾಟಗಾರರು ಲಾಭವನ್ನು ಎದುರುನೋಡಬಹುದು
ಧನು
ಧನು: ವಿವಾಹ ಯೋಗ್ಯ ವಯಸ್ಕರು ಜೀವನ ಸಂಗಾತಿಯ ಮೇಲೆ ಇರುವ ನಿರೀಕ್ಷೆಗಳನ್ನು ಸ್ವಲ್ಪ ಕಡಿಮೆಗೊಳಿಸಿಕೊಳ್ಳುವುದು ಒಳ್ಳೆಯದು. ಸಣ್ಣ ಗುಡಿಕೈಗಾರಿಕೆ ಅವರಿಗೆ ಉತ್ತಮ ವೇದಿಕೆ ಸಿಗಲಿದೆ.
ಮಕರ
ಮಕರ: ಕಾಲೇಜು ವಿದ್ಯಾರ್ಥಿಗಳು ರಜಾದಿನದಲ್ಲಿ ಮಾಡಿದ ಮೋಜುಮಸ್ತಿಯ ಅಡ್ಡಪರಿಣಾಮ ಇಂದು ಗೊತ್ತಾಗಲಿದೆ. ಮೊದಲ ಮಗಳ ಉತ್ತಮ ನಡತೆಯಿಂದ ಗೌರವವನ್ನು ಕೊಡಲಿದ್ದಾರೆ.
ಕುಂಭ
ಕುಂಭ: ಕೆಲಸ ಬದಲಾವಣೆಗಾಗಿ ಪ್ರಯತ್ನಪಡುತ್ತಿದ್ದರೆ ಸೋದರಮಾವನ ಸಹಾಯ ಪಡೆದುಕೊಂಡಲ್ಲಿ ಶೀಘ್ರವಾಗಿ ನಡೆಯುವುದು. ಕುಟುಂಬದಲ್ಲಿ ಎಲ್ಲರ ಸಹಕಾರ ದೊರೆಯುವ ಅದೃಷ್ಟವಂತರಾಗಿರುತ್ತೀರಿ.
ಮೀನ
ಮೀನ: ಆಹಾರದ ವ್ಯತ್ಯಾಸದಿಂದಾಗಿ ಆರೋಗ್ಯದ ತೊಂದರೆಗಳನ್ನು ಎದುರಿಸುವಿರಿ. ಹೊಸದಾಗಿ ಕಾರ್ಯವನ್ನು ಶುರುಮಾಡುವ ಮೊದಲು ಹಿರಿಯರಿಂದ ಉತ್ತಮ ದಿನ ತಿಳಿದುಕೊಂಡು ಆಶೀರ್ವಾದ ಪಡೆಯಿರಿ.