ದಿನ ಭವಿಷ್ಯ: ಈ ರಾಶಿಯವರ ಆಸೆಗಳು ಈಡೇರಿ ಜೀವನದಲ್ಲಿ ನೆಮ್ಮದಿ ಕಾಣಲಿದ್ದೀರಿ
Published 6 ಜೂನ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೃಷಿಗೆ ಸಂಬಂಧಿಸಿದ ಆರ್ಥಿಕತೆಯಲ್ಲಿ ಪಡೆದ ಸಾಲವನ್ನು ಹಿಂದಿರುಗಿಸುವ ಶಕ್ತಿ ದೊರಕಲಿದೆ. ಅನೇಕ ಕಾಲದಿಂದ ಕಾಡುತ್ತಿರುವ ದೇಹಬಾಧೆಯನ್ನು ನಿವಾರಿಸಿಕೊಳ್ಳಲು ವೈದ್ಯರನ್ನು ಬದಲಾಯಿಸಿ.
ವೃಷಭ
ಸಮಯದ ಗಡುವಿರುವ ಕೆಲಸಗಳನ್ನು ಕಡೆಯ ತನಕ ಉಳಿಸಿಕೊಳ್ಳುವ ಬದಲು ಮುಗಿಸಿಕೊಳ್ಳಿ. ವೃದ್ಧರಾದ ತಂದೆಯ ಆರೋಗ್ಯವು ಕ್ಷೀಣಿಸಬಹುದು, ಎಚ್ಚರವಹಿಸಿ.
ಮಿಥುನ
ಎಷ್ಟು ಜಾಗರೂಕತೆಯಿಂದ ಕೆಲಸ ಮಾಡಿದರೂ ಮೇಲಿನ ಅಧಿಕಾರಿಗಳ ಹದ್ದಿನಕಣ್ಣಿಗೆ ಕೆಲವು ದೋಷಗಳು ಕಾಣುತ್ತವೆ. ಸ್ನೇಹಿತನಿಗಾದ ವಾಹನ ಅಪಘಾತವು ಖೇದವಾಗಿಸುವುದು.
ಕರ್ಕಾಟಕ
ವ್ಯಕ್ತಿಯನ್ನು ಅವರ ಮೊದಲ ಭೇಟಿಯಲ್ಲಿ ನೋಡಿದ ಸ್ವಭಾವವೆಂದು ತೂಕಹಾಕಿ ತೀರ್ಮಾನಿಸಬೇಡಿ. ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಗೌರವದಿಂದ ನೋಡಿ.
ಸಿಂಹ
ನ್ಯಾಯಯುತವಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಯೋಚನೆಯನ್ನು ಮಾಡಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಡಿರುವ ಯೋಗಪಟುಗಳಿಗೆ ಉತ್ತಮ ಅವಕಾಶಗಳು ಬರಲಿವೆ.
ಕನ್ಯಾ
ವಿವಿಧ ಕಾರ್ಯಗಳ ಜವಾಬ್ದಾರಿಗಳ ಭಾರ ಬೀಳುವುದರಿಂದ ಕೆಲಸದ ಒತ್ತಡ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಆಸೆಗಳು ಈಡೇರಿ ಜೀವನದಲ್ಲಿ ನೆಮ್ಮದಿ ಕಾಣಲಿದ್ದೀರಿ.
ತುಲಾ
ಪ್ರಶ್ನಿಸಿಕೊಳ್ಳುವ ಸಮಯ ಎದುರಾಗುವುದು. ಅವಿವೇಕಿಗಳ ನಡುವೆ ವಾದಿಸಲು ಹೋಗಬೇಡಿ. ವಿವೇಕಯುತ ನಡವಳಿಕೆಯು ಪ್ರಯೋಜನಗಳನ್ನು ನೀಡುತ್ತದೆ. ಅಸಹಾಯಕರಿಗೆ ಸಹಾಯ ಮಾಡಿ, ಪುಣ್ಯ ಸಂಪಾದಿಸಬಹುದು.
ವೃಶ್ಚಿಕ
ಪ್ರಯೋಜನ ಪಡೆದ ವ್ಯಕ್ತಿಗಳು ದೂಷಿಸುವರು. ಪರಿಸ್ಥಿತಿ ಭಾವುಕರನ್ನಾಗಿ ಮಾಡಲಿದೆ. ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತನಾಡುವಿರಿ. ವಾಹನಚಾಲನೆಯಲ್ಲಿ ಮುತುವರ್ಜಿ ವಹಿಸಿ.
ಧನು
ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಸಹಿ ಮಾಡಿ. ಆಭರಣವನ್ನು ಕೊಳ್ಳುವ ಬಗ್ಗೆ ಯೋಚಿಸಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಕೊಳ್ಳುವಿರಿ. ಸಿದ್ಧ ಉಡುಪು ಮಾರಾಟಗಾರರಿಗೆ ವಿಶೇಷ ಲಾಭ .
ಮಕರ
ಎಷ್ಟೇ ಪ್ರಯತ್ನವಿದ್ದರೂ ಮೊದಲನೇ ಬಾರಿ ವಿಘ್ನವೇ ಸಂಭವಿಸಲಿದೆ. ನಂತರ ಗುರಿ ಸಾಧಿಸಬೇಕಿದ್ದಲ್ಲಿ ಜನರೊಂದಿಗೆ ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳುವುದು ಉತ್ತಮ. ಅಗ್ನಿಯಿಂದ ಅಪಾಯವಾಗುವ ಭೀತಿ ಇದೆ. ಜಾಗ್ರತೆವಹಿಸಿ.
ಕುಂಭ
ಹವ್ಯಾಸಿ ಕಲಾವಿದರಾದ ನೀವು ಕತೆ, ಕವನಗಳ ಬರವಣಿಗೆಯಲ್ಲಿ ಸಮಯ ಕಳೆಯುವಿರಿ. ಉನ್ನತ ಅಧಿಕಾರಿಗಳ ಮೇಲೆ ಇದ್ದ ತಪ್ಪು ತಿಳಿವಳಿಕೆಗಳು ದೂರಾಗಲಿವೆ. ಪ್ರಶಸ್ತಿ ಗೆಲ್ಲುವಂಥ ಚಿತ್ರ ಸೆರೆಹಿಡಿಯುವ ಅವಕಾಶ ಸಿಗಲಿದೆ.
ಮೀನ
ಧನಾಗಮನಕ್ಕೆ ಹಲವು ರೀತಿಯ ಅವಕಾಶಗಳು ಇದ್ದರೂ ಪರಿಶ್ರಮ, ಆತ್ಮವಿಶ್ವಾಸದ ಅಗತ್ಯವಿರುತ್ತದೆ. ಸಹಾಯಕರಲ್ಲಿ ಕೆಲಸ ಮಾಡಿಸಿಕೊಳ್ಳುವ ಬದಲು ಸ್ವಂತವಾಗಿ ಕೆಲಸ ಮಾಡುವುದು ಉತ್ತಮವೆಂದು ಅನಿಸಲಿದೆ.