ಮಂಗಳವಾರ, 22 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ಲಾಭ
Published 21 ಜುಲೈ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಡಿಕೆ ಬೆಳೆಗಾರರಿಗೆ ನಷ್ಟದ ಸಲುವಾಗಿ ಬೇರೆ ಬೆಳೆ ಮುಂದುವರಿಸುವುದು ಸೂಕ್ತ ಎಂಬ ಯೋಚನೆಗಳು ಬರಬಹುದು. ಇತಿ–ಮಿತಿಯ ಬಗ್ಗೆ ಮೇಲಿನ ಅಧಿಕಾರಿಗಳು ಅರಿವು ಮೂಡಿಸುವರು.
ವೃಷಭ
ನಿತ್ಯದ ವಸ್ತುಗಳ ಖರೀದಿಯಲ್ಲಿ ಅತಿಯಾದ ಕೃಪಣತೆ ತೋರಿ ಸಮಾಜದಲ್ಲಿ ಸಣ್ಣವರಾಗಬೇಡಿ. ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಕುಟುಂಬದವರ ದೂಷಣೆಗೆ ಒಳಗಾಗುವ ಲಕ್ಷಣವಿದೆ.
ಮಿಥುನ
ಗೆಳೆಯರ ಸವಾಲಿನಲ್ಲಿ ಸದಾ ವಿಜಯ ನಿಮ್ಮದೇ ಆದ್ದರಿಂದ ಬೇಸರವಿಲ್ಲದೇ ಸಂತಸದಿಂದಿರುವಿರಿ. ದುಶ್ಚಟಗಳಿಗೆ ಒಳಗಾಗಿ ಅದರಿಂದ ಹೊರ ಬರಬೇಕೆಂದು ಇರುವವರು ಸಜ್ಜನರಾಗುವ ಪ್ರಯತ್ನ ಮಾಡಿ.
ಕರ್ಕಾಟಕ
ಹೊಸ ಗೆಳೆಯರು ನಿಮಗೆ ಪ್ರಯೋಜನಕಾರಿ ಎನಿಸಲಿದ್ದಾರೆ. ಷೇರು ಮಾರುಕಟ್ಟೆಯ ವ್ಯವಹಾರಗಳು ಲಾಭದತ್ತ ಸಾಗುವುದು. ಹಿಂಜರಿಕೆಯ ಸ್ವಭಾವ ಬಿಟ್ಟು ಕಾರ್ಯ ಕೈಗೊಳ್ಳಲು ಮುಂದಾಗಿ. ಅವಕಾಶಗಳು ಸಿಗಲಿವೆ.
ಸಿಂಹ
ಬೌದ್ಧಿಕ ಸಾಮರ್ಥ್ಯದಿಂದ ಕೆಲಸಗಳನ್ನು ನಿರ್ವಹಿಸುವಿರಿ. ರಚನಾತ್ಮಕ ಕೆಲಸಗಳ ನಿರ್ವಹಣೆಯಿಂದ ಸತ್ಕೀರ್ತಿ ದೊರೆಯುವುದು. ಸಾಲ ಮರುಪಾವತಿಗೆ ಸುಲಭ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.
ಕನ್ಯಾ
ದೀರ್ಘಕಾಲೀನ ಯೋಜನೆಗಳು ಫಲದಾಯಕವಾಗಿ ವೃತ್ತಿಪರರಿಗೆ ಕಾರ್ಯರಂಗದಲ್ಲಿ ಪ್ರಗತಿ. ನಿಮ್ಮ ವ್ರತ ಹಾಗೂ ಅನುಷ್ಠಾನದ ಫಲವಾಗಿ ಮಗ ಅಥವಾ ಮಗಳಿಗೆ ಶ್ರೇಯಸ್ಸಾಗುವುದು  ಅನುಭವಕ್ಕೆ ಬರುತ್ತದೆ.
ತುಲಾ
ಉದ್ಯೋಗ ಸಂಬಂಧಿತ ಚಟುವಟಿಕೆಯಲ್ಲಿ ಈ ದಿನ ಅಸಮಾಧಾನ, ನಿರಾಸಕ್ತಿ ಕಾಡಲಿದೆ. ಆದರೆ ಶ್ರೇಯಸ್ಸಿಗಾಗಿ ಸೋಮಾರಿತನ  ದೂರಮಾಡಿ. ಅನಿರೀಕ್ಷಿತ ಬದಲಾವಣೆಗಳು ಸಮಸ್ಯೆಗಳನ್ನು ಕಡಿಮೆ ಮಾಡಲಿವೆ.
ವೃಶ್ಚಿಕ
ಮೃದು ಧೋರಣೆ ಸ್ವಭಾವವನ್ನು ವ್ಯವಹಾರಿಕ ವಿಷಯದಲ್ಲಿ ತ್ಯಜಿಸುವುದು ಉತ್ತಮ. ವ್ಯವಹಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಯೋಜನೆಗಳಿಗೆ ಪಾಲುದಾರರಿಂದ ಉತ್ತೇಜನಕಾರಿ ಪ್ರತಿಕ್ರಿಯೆ ಸಿಗುವುದು.
ಧನು
ಅಧಿಕಾರಿಗಳೊಂದಿಗೆ ವಾದಿಸದೆ ಅವರು ಹೇಳುವ ಕಾರ್ಯಗಳನ್ನು ಮಾಡುವುದು ನಿಮಗೆ ಒಳ್ಳೆಯದು. ಮಗಳ ಆರೋಗ್ಯದ ಹೆಚ್ಚಿನ ಗಮನ ಹರಿಸಿ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳನ್ನು ನಂಬಿ ಮೋಸ ಹೋಗದಿರಿ.
ಮಕರ
ಯಾಂತ್ರಿಕ ಬದುಕಿನ ಭಾಗವಾದ ನಿಮ್ಮ ಜೀವನದಲ್ಲಿ ಸ್ವಲ್ಪವಾದರೂ ಭರವಸೆ ಇಟ್ಟುಕೊಳ್ಳಿ. ವಿದ್ಯುತ್ ಉಪಕರಣಗಳ ಖರೀದಿ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳೆಯುತ್ತೀರಿ.
ಕುಂಭ
ಕುಟುಂಬದವರು ಬಯಸುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಕಡೆ ಹೆಚ್ಚಿನ ಗಮನ ಹರಿಸಿ. ಕೃಷ್ಣ –ಸುಧಾಮನಂತಹ  ಸ್ನೇಹಕ್ಕೆ  ಇಲ್ಲದ ವಿಚಾರಗಳಿಗೆ ಜಗಳವೇಳುವ ಸಾಧ್ಯತೆಗಳಿವೆ.
ಮೀನ
ಮನೆ ಕಟ್ಟುವ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ಗಂಭೀರವಾದ ಚರ್ಚೆ ಮಾಡುವುದು ಉಚಿತ. ಪ್ರಶಸ್ತವಾದ ಸಲಹೆ ಸಿಗುವುದು. ಸಂಸಾರದಲ್ಲಿ ಅಂತಃಕಲಹಗಳು ನಡೆದು, ಅಸಮಾಧಾನಕ್ಕೆ ಕಾರಣವಾಗುವಂತೆ ಆಗಲಿದೆ.
ADVERTISEMENT
ADVERTISEMENT