ಬುಧವಾರ, 30 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರದಲ್ಲಿ ಲಾಭ ದೊರೆಯಲಿದೆ
Published 23 ಏಪ್ರಿಲ್ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇವರ ಕೃಪೆಯಿಂದ ಭಾಗ್ಯದ ಬಾಗಿಲು ತೆರೆಯುವುದು. ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ನಿಮಗೆ ಹೆಚ್ಚು ಆನಂದ ಸಿಗಬಹುದು. ಪುಸ್ತಕ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಾಗುವ ಸಂಭವವಿದೆ.
ವೃಷಭ
ಬಂಧುಗಳ ಆಗಮನ ಮನಸ್ಸಿಗೆ ಸಂತೋಷ ಕೊಡಲಿದೆ, ಆದರೆ ಇಂದಿನ ನಿಮ್ಮ ಯೋಜಿತ ಪೂರ್ವತಯಾರಿ ಕೆಲಸಗಳು ವಿಘ್ನಕ್ಕೆ ಬಲಿಯಾಗಬಹುದು. ಬಟ್ಟೆ ಹೊಲಿಯುವವರಿಗೆ ಬೇಡಿಕೆ ಗೆಚ್ಚಾಗುತ್ತದೆ.
ಮಿಥುನ
ಕುಟುಂಬದಲ್ಲಿ ಹಿತಕರ ವಾತಾವರಣ ಸೃಷ್ಟಿಯಾಗಲಿದೆ. ಧನಾಗಮನದಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುವುದು. ಖರ್ಚು ವೆಚ್ಚಗಳು ಸಮನಾಗಿರುತ್ತದೆ. ತಾಯಿಯಿಂದ ಉಡುಗೊರೆ ದೊರೆಯವ ಸಾಧ್ಯತೆಗಳಿದೆ.
ಕರ್ಕಾಟಕ
ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ತಿಳಿಯಲಿದೆ. ಪ್ರಗತಿಯ ಹಾದಿಯನ್ನು ಸ್ಪರ್ಶಿಸಲಿದ್ದೀರಿ. ನಿಮ್ಮ ಪ್ರತಿಭೆ ಸಾಮರ್ಥ್ಯ ಬೆಳಕಿಗೆ ಬರಲಿದೆ.
ಸಿಂಹ
ನಿಮ್ಮ ಸಮಯೋಚಿತ ನಡೆಯಿಂದ ಶತ್ರುಗಳು ನಿಮ್ಮನ್ನು ಭಯದಿಂದ ಕಾಣುತ್ತಾರೆ. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ ಪ್ರಾಪ್ತಿಯಾಗಿ ಮನಸ್ಸಿಗೆ ಉಲ್ಲಾಸ ದೊರೆಯಲಿದೆ. ವಕೀಲರು ಖ್ಯಾತಿಯನ್ನು ಹೊಂದುವರು.
ಕನ್ಯಾ
ಗೃಹ ನಿರ್ಮಾಣದಂತಹ ಕಾರ್ಯಗಳು ಪೂರ್ಣವಾಗುತ್ತವೆ. ಕುಟುಂಬ ಸಮೇತ ತೀರ್ಥಯಾತ್ರೆಗೆ ತೆರಳುವ ಅವಕಾಶವಿದೆ. ಆರ್ಥಿಕ ವಿಷಯದ ಬರವಣಿಗೆಯ ವೃತ್ತಿಯವರು ಹೆಚ್ಚಿನ ಗಮನವಹಿಸುವುದು ಅಗತ್ಯ.
ತುಲಾ
ನಿಮ್ಮ ನಿಸ್ವಾರ್ಥ ಸೇವೆಯಿಂದಾಗಿ ಕಚೇರಿಯಲ್ಲಿ ನಿಮಗೆ ವಿಶೇಷ ಗೌರವ ದೊರೆಯಲಿದೆ. ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ದೊರೆಯುವ ಸಂಭವವಿದೆ. ವನಸ್ಪತಿ ಉದ್ಯಮಗಳಿಂದ ಹೆಚ್ಚಿನ ಲಾಭವಿರುವುದು.
ವೃಶ್ಚಿಕ
ಮನೆಯವರ ಸಹಾಯದಿಂದ ಹಿಂದಿನ ಹಣಕಾಸಿನ ತೊಂದರೆಗಳು ದೂರಾಗಿ ಈ ದಿನ ಹೊಸ ಯೋಜನೆಗೆ ಚಾಲನೆ ದೊರೆಯಲಿದೆ. ಮಗಳ ಮದುವೆಯ ವಿಚಾರದಲ್ಲಿ ನೀವು ಇಡುವ ಹೆಜ್ಜೆ ಬಹಳ ಪ್ರಮುಖವಾದುದು.
ಧನು
ಬಹಳ ದಿನಗಳಿಂದ ನೀವು ಅಂದುಕೊಂಡಂತೆ ಕೆಲಸದಲ್ಲಿ ಹೊಸ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ಈಶ್ವರನ ಕೃಪೆಯಿಂದ ಆರ್ಥಿಕ ಸ್ಥಿತಿಗತಿ ಇನ್ನಷ್ಟು ಉತ್ತಮಗೊಳ್ಳಲಿದೆ. ವಾಹನದ ಮೇಲೆ ಆಸೆಯಾಗುವುದು.
ಮಕರ
ಖಾಸಗಿ ಸಂಸ್ಥೆಗಳಲ್ಲಿ ಅಧಿಕ ಜವಾಬ್ದಾರಿಯು ನಿಮ್ಮ ಹೊಣೆಗಾರಿಕೆ ಯಾದ್ದರಿಂದ ಒತ್ತಡವೂ ಸಹ ಅಧಿಕವಾಗಿರುವುದು. ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದಲ್ಲಿ ಉತ್ಸಾಹ ವೃದ್ಧಿಯಾಗಲಿದೆ.
ಕುಂಭ
ಮುಂದಾಲೋಚನೆ ಇಲ್ಲದೆ ನಡೆಸಿದ ಕಾರ್ಯಗಳಿಂದ ನಷ್ಟಅನುಭವಿಸುವಂತಾಗಲಿದೆ. ಷೇರು ವ್ಯವಹಾರದಲ್ಲಿ ಲಾಭ ಇರುವುದು. ಈ ದಿನ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುವೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿರಲಿ.
ಮೀನ
ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡುಬರುವುದು. ಹೆಚ್ಚಿನ ಅಧ್ಯಯನಕ್ಕೆ ಇದು ಸಕಾಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ಶಾರದೆಯ ಆರಾಧನೆಯಿಂದ ಜ್ಞಾನ ವೃದ್ಧಿಯಾಗುವುದು.
ADVERTISEMENT
ADVERTISEMENT