ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವಿದೇಶ ಪ್ರವಾಸದ ಯೋಗವಿದೆ
Published 30 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿರುದ್ಯೋಗಿಗಳು ಸಾಧಾರಣವಾದ ಉದ್ಯೋಗ ದೊರಕಿದರೂ ಯಾವುದೇ ಕಾರಣಕ್ಕೂ ತಿರಸ್ಕರಿಸಬೇಡಿ. ಸ್ವಂತ ಉದ್ಯೋಗದಲ್ಲಿ ಆಭಿವೃದ್ಧಿ ಹೊಂದುವಿರಿ. ಯೋಗಾಭ್ಯಾಸ ಮನೋಲ್ಲಾಸವನ್ನು ಹೆಚ್ಚಿಸುತ್ತದೆ.
ವೃಷಭ
ಕೃತಕ ಅಂಗಾಂಗಗಳ ಅಳವಡಿಕೆ ಮಾಡಿಸಿಕೊಂಡವರು ಆರೋಗ್ಯದಲ್ಲಿ ಉಂಟಾಗುವ ಯಾವುದೇ ಬದಲಾವಣೆಗಳನ್ನು ಸಸಾರ ಮಾಡದಿರಿ. ನೀವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.
ಮಿಥುನ
ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ಸಿಗಬಹುದು ಅಥವಾ ಕಾರ್ಮಿಕರಾಗುವ ಅವಕಾಶ ಸಿಗಬಹುದು. ನಿಮ್ಮ ಕೆಲಸಗಳ ಬಗ್ಗೆ  ಅವಲೋಕನ ಮಾಡುವಂತಹ ಪದ್ಧತಿಯನ್ನು ರೂಢಿಸಿಕೊಳ್ಳಿರಿ. ಅತಿಥಿ ಸತ್ಕಾರ ಮಾಡುವಿರಿ.
ಕರ್ಕಾಟಕ
ನೀವು ಅಂತರ್ಮುಖಿಯಾಗಿದ್ದರೂ ಅತಿಥಿಗಳನ್ನು ಶಿಷ್ಟಾಚಾರಕ್ಕಾಗಿ ಸತ್ಕರಿಸಲೇಬೇಕಾಗುತ್ತದೆ. ವ್ಯವಸಾಯಗಾರರಿಗೆ ಹೆಚ್ಚಿನ ಬೆಳೆ ಕೈ ಸೇರುವ ನಿರೀಕ್ಷೆ ಇರುವುದು. ಮುಂದಿನ ಹಾದಿ ಏನೆಂಬುದು ಈ ದಿನ ಸ್ಪಷ್ಟವಾಗಿರಲಿ.
ಸಿಂಹ
ನಂಬಿ ಕೆಟ್ಟವರಿಲ್ಲ ಎಂಬ ಮಾತು ನಿಮ್ಮ ಪಾಲಿಗೆ ಅಕ್ಷರಷಃ ಸತ್ಯವಾಗು ವಂತಹ ಘಟನಾವಳಿಗಳು ನಡೆಯುತ್ತವೆ. ಪರಿಸ್ಥಿತಿಯನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆಯು ಪ್ರಾಪ್ತಿಯಾಗುವುದು.
ಕನ್ಯಾ
ಪಾರಂಪರಿಕ ಔಷಧಗಳ ಕಲೆಯನ್ನು ಕಲಿಯುವ ಸದವಕಾಶಗಳು ಸಿಗಬಹುದು. ವ್ಯವಹಾರದಲ್ಲಿ ಸಂಭವಿಸುವ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ.
ತುಲಾ
ಮನೆಗೆ ವಿಶೇಷ ಕಾರಣದಿಂದಾಗಿ ಬರುತ್ತಿರುವ ಮಗಳಿಗೆ ಪ್ರಿಯವಾಗುವ ಖಾದ್ಯಗಳನ್ನು ತಯಾರು ಮಾಡುವಿರಿ. ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳು ತನ್ನಿಂತಾನೆ ಬಗೆಹರಿದು ಮನಸ್ಸು ನಿರಾಳವಾಗಲಿದೆ.
ವೃಶ್ಚಿಕ
ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರ ಸಲಹೆ ಸರಿಯಾಗಿರುತ್ತದೆ. ಅವಿವಾಹಿತರಿಗೆ ಕುಟುಂಬದವರು ನೋಡುವ ಸಂಬಂಧಗಳು ಸರಿ ಹೋಗದಿರಬಹುದು.
ಧನು
ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ. ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಿ ಇರುವುದು.
ಮಕರ
ಅನಿರೀಕ್ಷಿತವಾಗಿ ಹಾಗೂ ಅನಿವಾರ್ಯವಾಗಿ ಸಂಘ-ಸಂಸ್ಥೆಗಳಲ್ಲಿ ಅಧಿಕಾರ ವಹಿಸಿಕೊಳ್ಳಬೇಕಾಗಬಹುದು. ಕಾರ್ಯರಂಗದಲ್ಲಿ ಅಪವಾದದ ಭೀತಿ ಕಳವಳ ಮೂಡಿಸಲಿದೆ. ವಿದೇಶ ಪ್ರವಾಸದ ಯೋಗವಿದೆ.
ಕುಂಭ
ಆರೋಗ್ಯದಲ್ಲಿ ವಾಯು ಸಂಬಂಧವಾಗಿ ತೊಂದರೆಗಳುಕಾಣಿಸಿಕೊಳ್ಳಬಹುದು. ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು. ವಿವಾಹ ಸಂಬಂಧದ ಮಾತುಕತೆಗಳು ಫಲಕಾರಿಯಾಗುವುದು.
ಮೀನ
ವೈಯಕ್ತಿಕ ಕಾರ್ಯಗಳನ್ನು ಸಾಧಿಸಿಕೊಳ್ಳುವ ಸಲುವಾಗಿ ವಾಮಮಾರ್ಗ ವನ್ನು ಹಿಡಿಯುವುದು ಸರಿಯಲ್ಲ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿಕೆ ಯಿಂದ ಮಾನಸಿಕ ಶಾಂತಿ, ಜೀವನೋಲ್ಲಾಸ ಹೆಚ್ಚಾಗಲಿದೆ.