ಶುಕ್ರವಾರ, 11 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ತಪ್ಪುಗಳನ್ನು ಹುಡುಕುವವರ ಜತೆಯಲ್ಲಿಯೇ ಈ ದಿನ ಇರಬೇಕಾಗುತ್ತದೆ
Published 12 ಜೂನ್ 2025, 23:26 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸದಾಕಾಲ ಪಕ್ಕದಲ್ಲಿಯೇ ಇರುವ ಶತ್ರುಗಳಿಂದ ವಂಚನಾ ಪ್ರಸಂಗವಿದ್ದರೂ, ಖಂಡಿತವಾಗಿ ಜಯಶಾಲಿಯಾಗುವಿರಿ. ದೈಹಿಕ ಶ್ರಮ ಜಾಸ್ತಿಯಾದರೂ ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ.
ವೃಷಭ
ಒಳಾಂಗಣ ವಿನ್ಯಾಸಕಾರರಿಗೆ ಅಧಿಕ ಬೇಡಿಕೆ ಮತ್ತು ವರಮಾನ ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು. ಮಹಿಳೆಯರು ಆಭರಣ ಕೊಳ್ಳಲಿದ್ದಾರೆ.
ಮಿಥುನ
ತಪ್ಪುಗಳನ್ನು ಹುಡುಕುವವರ ಜತೆಯಲ್ಲಿಯೇ ಈ ದಿನ ಇರಬೇಕಾಗುತ್ತದೆ. ಸಾರಿಗೆ ವ್ಯವಸ್ಥೆಯಲ್ಲಿ ಅಥವಾ ಸಂಪರ್ಕ ಮಾಧ್ಯಮದಲ್ಲಿ ಸೇವೆ ಸಲ್ಲಿಸುವವರಿಗೆ ಅಧಿಕ ಒತ್ತಡ.
ಕರ್ಕಾಟಕ
ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಆರ್ಥಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ. ಮಿತ್ರರೊಬ್ಬರು ಎಲ್ಲ ರೀತಿಯಲ್ಲಿಯೂ ಸಹಾಯ ಮಾಡಲಿದ್ದಾರೆ.
ಸಿಂಹ
ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಏರಿಳಿತದ ನಡುವಿನ ಜೀವನ ಹೊಸ ಅನುಭವವನ್ನು ನೀಡುವುದು. ಸಾಮಾಜಿಕವಾಗಿ ಹೆಸರು ಮಾಡುವ ಉದ್ದೇಶದಿಂದ ವಿಭಿನ್ನ ವಿಷಯಗಳಲ್ಲಿ ತೊಡಗಿಸಿಕೊಳ್ಳುವಿರಿ.
ಕನ್ಯಾ
ವಿಳಂಬವಾಗಿದ್ದ ಕಾರ್ಯಗಳು ಚುರುಕುಗೊಂಡು ಅನುಕೂಲ ಒದಗಿ ಬರಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇಕಾದ ಆರ್ಥಿಕ ವ್ಯವಸ್ಥೆಯು ಸಿಗುವುದು. ಅಧಿಕಾರಿಗಳ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗುವಿರಿ.
ತುಲಾ
ಸತ್ಕಾರ್ಯಗಳ ನಿರ್ವಹಣೆಗೆ ಸಹಕಾರ ಕೋರಿ ಬರುವವರಿಗೆ ನಿಮ್ಮಿಂದಾಗುವ ಸಹಾಯವನ್ನು ಮಾಡಿ ಪುಣ್ಯ ಸಂಪಾದಿಸುವಿರಿ. ಮಕ್ಕಳ ಓದಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಎಲ್ಲವು ಎಣಿಕೆಯಂತೆ ನಡೆಯುವುದು.
ವೃಶ್ಚಿಕ
ಸ್ವಂತ ಕೆಲಸಕ್ಕಾಗಿ ಹೊಸ ಅಧಿಕಾರಿಗಳನ್ನು ಭೇಟಿ ಮಾಡಲು ಇದು ಒಳ್ಳೆಯ ದಿನ. ಪ್ರಾಮಾಣಿಕತೆಯಿಂದ ಮೇಲಧಿಕಾರಿಗಳ ನಂಬಿಕೆ ಪಡೆಯುವಿರಿ. ಭೂತಕಾಲದ ಕಹಿ ನೆನಪುಗಳು ನಿಮ್ಮನ್ನು ಕಾಡಬಹುದು.
ಧನು
ಎಲ್ಲಾ ಸನ್ನಿವೇಶಗಳು ನಿಮ್ಮ ಪರ ಇರುವುದರಿಂದ ನಿರಾಳವಾಗಿ ಮುಂದುವರಿಯಬಹುದು. ಕಾರ್ಮಿಕ ವರ್ಗದವರಿಗೆ ಹೆಚ್ಚಿನ ಸವಲತ್ತುಗಳು ಒದಗಲಿವೆ. ಮಾನವೀಯತೆ ಮುಖ್ಯ ಧ್ಯೇಯವಾಗಿರಲಿ.
ಮಕರ
ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯೊಂದಿಗೆ ಸಮಾಲೋಚನೆ ನಡೆಸಿದಲ್ಲಿ ಉತ್ತಮ ಪರಿಹಾರ ದೊರೆಯುವುದು. ಹಿರಿಯರೊಂದಿಗೆ ಯಾತ್ರೆ ಕೈಗೊಳ್ಳುವುದರ ಪುಣ್ಯದಿಂದ ಕಾರ್ಯಾನುಕೂಲವಾಗುವುದು.
ಕುಂಭ
ಇತರರಿಗಿಂತ ಭಿನ್ನವಾದ ಹಾಗೂ ಧನಾತ್ಮಕವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉದ್ಯಮಿ ಹಾಗೂ ಅಧಿಕಾರಿಗಳಿಗೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇರುವುದು. ಷೇರು ವ್ಯಾಪಾರ ಅದೃಷ್ಟದಾಯಕವಾಗಿರುತ್ತದೆ.
ಮೀನ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಒಂದು ರೀತಿಯ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ನೀರಿನ ಬದಲಾವಣೆಯಿಂದ ಅನಾರೋಗ್ಯ ಎದುರಾಗಬಹುದು.
ADVERTISEMENT
ADVERTISEMENT