ದಿನ ಭವಿಷ್ಯ: ಆಫೀಸಿನ ಸಿಬ್ಬಂದಿಯೊಂದಿಗೆ ಮಾತುಗಳನ್ನು ಕಡಿಮೆ ಮಾಡಿ
Published 28 ಜುಲೈ 2025, 23:09 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೃಷಿಭೂಮಿಯನ್ನು ಖರೀದಿಸುವ ವಿಚಾರದಲ್ಲಿ ಅಕ್ಕಪಕ್ಕದ ರೈತರು ಕೊಡುವ ಸಲಹೆಯಿಂದ ಅನುಕೂಲವಾಗುವಂಥ ಸನ್ನಿವೇಶ ಒದಗಿ ಬರಲಿದೆ. ಹಣದ ವಿಚಾರದಲ್ಲಿ ಜಿಗುಟುತನ ತೋರಿ ಅವಹೇಳನಕ್ಕೆ ಒಳಗಾಗುವಿರಿ.
ವೃಷಭ
ನ್ಯಾಯಾಲಯದ ಮೆಟ್ಟಿಲನ್ನು ಏರುವ ವಿಚಾರಗಳು ನಡೆಯದಂತೆ ಎಚ್ಚರವಹಿಸಿ. ದಿನಾಂತ್ಯದಲ್ಲಿ ಆಶ್ಚರ್ಯ ಸುದ್ದಿ ಕೇಳುವಿರಿ. ಆಪ್ತ ಸಹಾಯಕ್ಕೆ ಧನ್ಯವಾದ ತಿಳಿಸಲು ಮರೆಯದಿರಿ. ಸಂಪರ್ಕವನ್ನು ಭದ್ರ ಮಾಡಿಕೊಳ್ಳಿ.
ಮಿಥುನ
ಆಫೀಸಿನ ಸಿಬ್ಬಂದಿಯೊಂದಿಗೆ ಮಾತುಗಳನ್ನು ಕಡಿಮೆ ಮಾಡಿ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡಬೇಕಾದ ಸಂದರ್ಭ ಬರುವುದು. ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನಿಸಿ.
ಕರ್ಕಾಟಕ
ಮಾನಸಿಕ ನೆಮ್ಮದಿ ಇರುವುದು. ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ಮಗನಿಗೆ ಹೇಳುವ ಅನಿವಾರ್ಯತೆಯ ಸನ್ನಿವೇಶ ಎದುರಾಗುವುದು. ಮಗನ ಓದಿನ ಬಗ್ಗೆ ಗಮನಹರಿಸಿ.
ಸಿಂಹ
ಮಾರಾಟ ಪ್ರತಿನಿಧಿಗಳು ಈ ದಿನದ ಗುರಿಯನ್ನು ಸುಲಭವಾಗಿ ಮುಟ್ಟುವುದರಿಂದ ಸಂತೋಷ ಇಮ್ಮಡಿಯಾಗಲಿದೆ. ಪೊಲೀಸ್ ವೃತ್ತಿಯಲ್ಲಿ ಇರುವವರು ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ
ಮಹಿಳೆಯರಿಗೆ ತನ್ನ ತವರು ಮನೆಯಲ್ಲಿ ನಡೆದ ದುರ್ಘಟನೆ ಭಾವುಕರನ್ನಾಗಿ ಮಾಡಲಿದೆ. ವಾಹನ ಚಾಲನೆ ಅಥವಾ ಕಬ್ಬಿಣ ಕೆಲಸ ಮಾಡುವವರು ಕಾಳಜಿ ವಹಿಸಿ. ವಿದ್ಯಾರ್ಥಿಗಳು ಅಭ್ಯಾಸ ನಡೆಸಿ.
ತುಲಾ
ಆಡಳಿತಾಧಿಕಾರಿಗಳಿಗೆ ಸತ್ಫಲಗಳು ಸಿಗಲಿವೆ. ದ್ವಿಚಕ್ರ ವಾಹನಗಳ ಮಾರಾಟಗಾರರು ಭರ್ಜರಿ ವಹಿವಾಟು ನಡೆಸುವರು. ಆಹಾರದ ವ್ಯತ್ಯಾಸ ದಿಂದ, ವಾತಾವರಣದ ಬದಲಾವಣೆಯಿಂದ ಅನಾರೋಗ್ಯ ಉಂಟಾಗಲಿದೆ.
ವೃಶ್ಚಿಕ
ಕ್ರೀಡೆಗಳಲ್ಲಿ ಸಮಯ ಕಳೆಯುವಿರಿ. ಮನೆಯ ಜವಾಬ್ದಾರಿಯನ್ನು ಮಗನಿಗೆ ವಹಿಸುವ ಆಲೋಚನೆಗಳು ಬರಲಿವೆ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ. ಕಾಲು ನೋವು ನಿವಾರಣೆಗೆ ಅಭ್ಯಂಗ ಮಾಡಿರಿ.
ಧನು
ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಬರುವುದು. ಮಧ್ಯಮ ವರ್ಗದವರಿಗೆ ಹಣದ ಅಭಾವ ಇರುವುದಿಲ್ಲ. ವಿವಾಹದ ವಿಷಯಗಳು ತೀರ್ಮಾನಕ್ಕೆ ಬರಲು ಕೌಟುಂಬಿಕವಾಗಿ ಚರ್ಚೆಯಾಗುವುದು.
ಮಕರ
ಸಂಶೋಧನಾ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಮುನ್ನಡೆ ಕಂಡುಬರುತ್ತದೆ. ಅಧಿಕವಾದ ಕೆಲಸಗಳ ಬಗ್ಗೆ ಗಮನ ಹರಿಸಿ ಪೂರ್ವತಯಾರಿ ಮಾಡಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಾಗಿರುತ್ತದೆ.
ಕುಂಭ
ಷೇರು ಮಾರಾಟದಿಂದ ಅಧಿಕ ಲಾಭ ಹೊಂದಬಹುದು. ಬಂಗಾರ ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯುವುದು. ಧಾರ್ಮಿಕ ನಡೆಗೆ ಶೀಘ್ರ ಫಲವನ್ನು ಹೊಂದುವ ಯೋಗವಿದೆ.
ಮೀನ
ಹೆಂಡತಿಗೆ ಹೊಸ ಉದ್ಯೋಗ ದೊರೆತು ಸಂತೋಷವಾಗುವುದು. ಹಿರಿಯರ ಮಾತಿನಂತೆ ನಡೆದುಕೊಳ್ಳುವಿರಿ. ಮಗನ ವಿದ್ಯಾಭ್ಯಾಸದಲ್ಲಿ ಅಡೆತಡೆಗಳು ಇದ್ದರೂ, ಪ್ರಗತಿಗೆ ಕೊರತೆ ಆಗುವುದಿಲ್ಲ.