ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ
Published 21 ಮೇ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಾಹನ ಖರೀದಿಗಾರರಿಗೆ ಸೂಕ್ತ ಸಮಯವಲ್ಲದಿದ್ದರೂ ಮಾರಾಟಗಾರಿಗೆ ಲಾಭದ ದಿನ. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು. ನೀಲಿ ಬಣ್ಣವು ಶುಭ ಉಂಟುಮಾಡುತ್ತದೆ.
ವೃಷಭ
ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಶಿಕ್ಷಕ ವೃತ್ತಿ ಆರಂಭಿಸುವ ಬಗ್ಗೆ ಆಲೋಚಿಸಿ. ತಂದೆ ಅಥವಾ ಹಿರಿಯ ಸಹೋದರರಲ್ಲಿ ಸಂಯಮದ ನಡವಳಿಕೆ ಅಗತ್ಯ.
ಮಿಥುನ
ಮಗನ ಕೆಲಸ ನೆರವೇರಿದ ಕಾರಣಕ್ಕೆ ಹೇಳಿಕೊಂಡ ಹರಕೆ ಪೂರ್ಣ ಗೊಳಿಸುವ ಬಗ್ಗೆ ಮಗನಲ್ಲಿ ಪ್ರಸ್ತಾಪಿಸಿ. ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಫಲ ಕೊಡುವುದು. ಸಣ್ಣ ಪ್ರಮಾಣದ ಪ್ರಯಾಣ ಮಾಡುವಿರಿ.
ಕರ್ಕಾಟಕ
ಕೆಲವು ದಿನಗಳ ಬಳಿಕ ಸಮಾನಮನಸ್ಕರ ಜತೆ ಕಳೆದ ಸಮಯ ಜ್ಞಾನವನ್ನು ವರ್ಧನೆ ಮಾಡಿಕೊಳ್ಳಲು ಸಹಾಯಕಾರಿ. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ.
ಸಿಂಹ
ಒಳ್ಳೆಯತನದಿಂದಾಗಿ ನೀವು ನುಂಗಿಕೊಂಡ ಸಿಟ್ಟು, ತಪ್ಪು ಮಾಡಿದವರ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ. ಮನೆ ಖರೀದಿಸುವ ವಿಷಯದ ಬಗ್ಗೆ ಮನೆಯವರಿಂದ ಮಾಹಿತಿಯನ್ನು ಕೇಳಬೇಕಾಗುತ್ತದೆ.
ಕನ್ಯಾ
ಇಷ್ಟು ದಿನ ಇದ್ದಂತಹ ಕೆಲವು ಜವಾಬ್ದಾರಿಗಳ ಭಾರ ಕಡಿಮೆ ಆಗಿ ನಿರಾಳದ ಜೀವನವನ್ನು ನಡೆಸುವಿರಿ. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಗಳು ಅನುಭವಕ್ಕೆ ಬಂದಲ್ಲಿ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ.
ತುಲಾ
ಉರಿಯುವಂಥ ಬೆಂಕಿಗೆ ತುಪ್ಪ ಸುರಿಯುವಂಥ ಮಾತುಗಳನ್ನಾಡಿ ಸಂಗಾತಿಯೊಂದಿಗಿನ ಸಂಬಂಧವನ್ನು ಕೆಡಿಸಿಕೊಳ್ಳಬೇಡಿ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಉದಾಸೀನತೆ ತೋರಬೇಡಿ. 
ವೃಶ್ಚಿಕ
ಯಾವುದೇ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡದಿರುವ ತೀರ್ಮಾನವನ್ನು ಮಾಡದಿರಿ. ತಂದೆಯವರ ವ್ಯವಹಾರದ ವಿಷಯಗಳನ್ನು ತಿಳಿದು ಮುಂದುವರಿಯುವಿರಿ.
ಧನು
ಸ್ವಪ್ರಯತ್ನದಿಂದಾಗಿ ತಲುಪಿದ ಸ್ಥಾನವು ಇತರರ ಸಹಾಯದಿಂದ ಪಡೆದದ್ದು ಎನ್ನುವ ಮಾತು ಜನರ ಬಾಯಲ್ಲಿ ಕೇಳಿ ನಿಮ್ಮ ಅಸಮಾಧಾನಕ್ಕೆ ಕಾರಣವಾಗುತ್ತದೆ. ರಾಜಕೀಯ ವಿದ್ಯಮಾನಗಳಿಂದ ವಿಶ್ರಾಂತಿ ಪಡೆಯಿರಿ.
ಮಕರ
ಆಪ್ತರ ಕಷ್ಟಗಳ ಕಡೆಗೆ ನೆರವಾಗುವ ತೀರ್ಮಾನಕ್ಕೆ ಬನ್ನಿ. ಅದರಿಂದಾಗಿ ನಿಮ್ಮ ಸ್ನೇಹಕ್ಕೆ ಅರ್ಥ ಇರುವುದು ಹಾಗೂ ಪುಣ್ಯ ಸಂಪಾದನೆಯಾಗುವುದು. ಅತಿ ಹಟವು  ಹೆತ್ತವರನ್ನು ಕಂಗಾಲು ಪಡಿಸುತ್ತದೆ.
ಕುಂಭ
ಒಂದೇ ಸಮಯದಲ್ಲಿ ಹೆಚ್ಚಿನ ವಿಷಯಗಳ ಮೇಲೆ ಗಮನ ಹರಿಸುವುದು ಕಲೆ ಎಂದು ಭಾವಿಸಿದ್ದರೂ ಇತರರು ಚಂಚಲತೆ ಎಂದು ದೂಷಿಸುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.
ಮೀನ
ಮಗನು ಅನಿವಾರ್ಯ ಕಾರಣಗಳಿಂದ ಪರ ಊರಿಗೆ ತೆರಳುವುದು ದುಃಖಕರ ಸಂಗತಿಯಾಗಬಹುದು. ಎದುರಾಳಿಗೆ ಪರಿಣಾಮಕಾರಿಯಾಗುವ ನಿರ್ಧಾರಗಳನ್ನು ಅಗತ್ಯವಾಗಿ ತೆಗೆದುಕೊಳ್ಳಿ. ಬಿಳಿ ಬಣ್ಣ ಶುಭವನ್ನು ತರಲಿದೆ.