ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಇಷ್ಟವಾಗುವ ರೀತಿಯ ಸಂಬಂಧ ಪ್ರಾಪ್ತಿ
Published 28 ಡಿಸೆಂಬರ್ 2023, 23:47 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿ ಮಂಗಳ ಕಾರ್ಯವನ್ನು ನೆಡೆಸಲು ತೀರ್ಮಾನಿಸಿ, ಅದಕ್ಕೆ ಬೇಕಾದ ಜನಬಲ ಮತ್ತು ಆರ್ಥಿಕ ಬೆಂಬಲವು ಬಂಧುಗಳಿಂದ ತಾನಾಗಿಯೇ ಒದಗಿಬರಲಿದೆ. ಆರಕ್ಷಕ ಅಧಿಕಾರಿಗಳಿಗೆ ಕೆಲಸಗಳ ಒತ್ತಡ ಕಡಿಮೆಯಾಗಲಿದೆ.
ವೃಷಭ
ನಿಮ್ಮ ಇಷ್ಟಾರ್ಥ ನೆರವೇರುವ ಸಲುವಾಗಿ ಹೇಳಿಕೊಂಡಿರುವ ಹರಕೆಯನ್ನು ತೀರಿಸುವ ಬಗ್ಗೆ ಗಮನವಿರಲಿ. ಕುಟುಂಬ ವರ್ಗದಲ್ಲಿ ಆರೋಗ್ಯ ಉತ್ತಮವಾಗಿ ಇರುವುದು. ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಯಾಗುವುದು.
ಮಿಥುನ
ಸಂಬಂಧಿಕರೊಂದಿಗಿದ್ದ ವ್ಯವಹಾರಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿರಪರಾಧಿಯಾದರೂ ಶಿಕ್ಷೆಗೆ ಒಳಗಾಗುವ ಲಕ್ಷಣಗಳಿರುವುದರಿಂದ ಜಾಗ್ರತರಾಗಿರಿ. ಸಿನೆಮಾ ರಂಗದವರಿಗೆ ಹೆಚ್ಚಿನ ಅವಕಾಶ ಲಭಿಸುವುದು.
ಕರ್ಕಾಟಕ
ಮೇಧಾವಿಗಳ ಮೂಲಕ ಧನ ಸಂಪಾದನೆ ಹೊಂದುವಿರಿ. ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಲ್ಲಿ ಹೊಸ ಬದಲಾವಣೆಯ ಸೂಚನೆಯು ಸಿಗಲಿದೆ. ಈಶ್ವರನ ಸೇವೆ ಮಾಡುವುದರಿಂದ ಹೆಚ್ಚಿನ ಕಾರ್ಯ ಸಾಧನೆಗೆ ಸಹಾಯವಾಗುವುದು.
ಸಿಂಹ
ಅಧಿಕಾರಸ್ಥರು ಹಾಗೂ ನಿಮ್ಮ ಹಿರಿಯ ನೌಕರರ ಜತೆ ನಿಮ್ಮ ಸ್ನೇಹ ಸಂಬಂಧ ಹೆಚ್ಚಾಗಿ ಬೆಳೆದು ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ಇಂದು ವೃತ್ತಿರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು.
ಕನ್ಯಾ
ಮರಕೆಲಸ ಮಾಡುವವರಿಗೆ ಹೆಚ್ಚಿನ ಅವಕಾಶಗಳು ಬಂದುರೂ ಕೆಲಸಕ್ಕೆ ಸೋಮಾರಿತನ ಅಡ್ಡಬರುವುದು. ರಾಜಕೀಯ ವ್ಯಕ್ತಿಗಳಿಗೆ ತಮ್ಮ ಚಟುವಟಿಕೆಗಳಿಗಾಗಿ ಬಿರುಸಿನ ಓಡಾಟ ಅನಿವಾರ್ಯವಾಗುವುದು.
ತುಲಾ
ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲ್ಯಗಳನ್ನು ಹೊರ ತೆಗೆಯಲು ವೇದಿಕೆ ಸಿಗುವುದು. ಲೆಕ್ಕ ಪತ್ರಗಳ ವ್ಯವಹಾರ ನೋಡುವವರಿಗೆ ಸಂದಿಗ್ಧ ಪರಿಸ್ಥಿತಿಗಳು ಎದುರಾಗಬಹುದು. ನಿಮ್ಮ ಮಾತುಗಳಲ್ಲಿ ಸತ್ಯವಿರಲಿ.
ವೃಶ್ಚಿಕ
ಅನಾರೋಗ್ಯದಿಂದ ಹೊರಬರಲು ಚಿಕಿತ್ಸೆಯ ಜೊತೆಯಲ್ಲಿ ನವಗ್ರಹ ಶಾಂತಿಯಂತಹ ಧಾರ್ಮಿಕ ಮಾರ್ಗವನ್ನೂ ಆಚರಿಸುವುದು ಶುಭಫಲಕ್ಕೆ ದಾರಿಯಾಗಲಿದೆ. ಆಪ್ತರ ಕಷ್ಟಗಳ ಕಡೆಗೆ ಗಮನ ಹರಿಸುವುದು ಸಾಧ್ಯವಾಗುತ್ತದೆ.
ಧನು
ವಿಭಿನ್ನ ರೀತಿಯ ಕೆಲಸವೊಂದನ್ನು ನಿಮ್ಮ ಸ್ನೇಹಿತರೊಬ್ಬರು ನಿಮಗೊಪ್ಪಿಸಲಿದ್ದಾರೆ, ಒಪ್ಪಿಕೊಳ್ಳಿ ಅದು ನಿಮಗೆ ಸಾಕಷ್ಟು ಆದಾಯ ಮತ್ತು ಹೆಸರನ್ನು ತರಲಿದೆ. ಹಿಂದಿನ ಕಹಿ ಘಟನೆಗಳು ಪುನಃ ಮರುಕಳಿಸದಂತೆ ಎಚ್ಚರ ವಹಿಸಿ.
ಮಕರ
ಗೌರವಯುತವಾದಂತಹ ಸ್ಥಾನಮಾನಗಳು ಈ ದಿನ ನಿಮ್ಮದಾಗಲಿದೆ. ಅಧಿಕಾರಕ್ಕಾಗಿ ಯಾವುದೇ ಅಡ್ಡದಾರಿಯನ್ನು ಅನುಸರಿಸಬೇಡಿ. ಹೊಸ ಮನೆಯೊಂದನ್ನು ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯಲಿದೆ.
ಕುಂಭ
ಅತೀ ಸಂಭ್ರಮದ ಜೀವನ ಶೈಲಿಯಿಂದ ಖರ್ಚುಗಳು ಸಂಭವಿಸುವುದು. ಆದರೆ ಆದಾಯಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗಲಾರದು. ಪತ್ನಿ ವರ್ಗದವರಿಂದ ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಸಹಾಯ ದೊರೆಯಲಿದೆ.
ಮೀನ
ಅವಿವಾಹಿತರಿಗೆ ಅವರ ಮನಸ್ಸಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಈ ದಿನ ಪ್ರಾಪ್ತಿಯಾಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಅತಿ ಜಾಗರೂಕರಾಗಿರುವುದು ಅವಶ್ಯ. ಕುಟುಂಬದವರಿಂದ ಶುಭವಾರ್ತೆ ಕೇಳುವಿರಿ.