ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಸೆ.8: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ
Published 7 ಸೆಪ್ಟೆಂಬರ್ 2023, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸೋಮಾರಿತನ ಅಥವಾ ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಶತ್ರುಗಳಿಗೂ ಶುಭವನ್ನು ಹಾರೈಸುವ ರೀತಿಯಲ್ಲಿ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಶ್ರೇಯಸ್ಸು ಉಂಟಾಗುವುದು.
ವೃಷಭ
ಯೋಗ, ಧ್ಯಾನಕ್ಕಾಗಿ ಅಲ್ಪ ಸಮಯ ಮೀಸಲಿಡಿ. ಇದರ ಆಚರಣೆಯಿಂದಾಗಿ ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ಪ್ರೀತಿಯ ವಿಷಯದಲ್ಲಿ ಮುಂದೇನು ಮಾಡಬೇಕೆಂಬ ಸೂಚನೆ ಈ ದಿನ ಲಭಿಸುವುದು.
ಮಿಥುನ
ಯಶೋದಾಯಕವಾದ ಭವಿಷ್ಯಕ್ಕಾಗಿ ಯೋಜನೆ ರೂಪಿಸುವಲ್ಲಿ ಪತ್ನಿಯ ಸಲಹೆಯನ್ನು ಸ್ವೀಕರಿಸಿ. ಇನ್ನೊಬ್ಬರಿಗೆ ಕೊಡಬೇಕಾದ ವಸ್ತುಗಳನ್ನು ಅವರಿಗೆ ತಲುಪಿಸುವಲ್ಲಿನ ಕರ್ತವ್ಯವನ್ನು ಮರೆಯದಿರಿ.
ಕರ್ಕಾಟಕ
ಮಳೆಯಲ್ಲಿ ನೆನೆಯುವುದು ಅಥವಾ ನಿಮ್ಮ ದೇಹಕ್ಕೆ ಅಹಿತಕರ ಕೆಲಸದ ಕಾರಣದಿಂದ ಜ್ವರಾದಿ ಬಾಧೆಗಳು ಕಾಣಿಸಿಕೊಳ್ಳಬಹುದು. ಜಾಣತನದಿಂದ ಕೆಲಸ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ.
ಸಿಂಹ
ನಂಬಿರುವ ವ್ಯಕ್ತಿಗಳ ಬಗ್ಗೆ ನಿಮ್ಮ ನಿಲುವುಗಳನ್ನು ಬದಲಾಯಿಸಿ ಕೊಳ್ಳಬೇಕೆನಿಸಿದ್ದರೂ ಹಾಗೆ ಮಾಡದಿರಿ, ಅದು ಈ ದಿನಕ್ಕೆ ಫಲ ಪ್ರದವಲ್ಲ. ಸಮಸ್ಯೆಗಳು ಹೆಚ್ಚುವುದಕ್ಕೆ ಮುಂಚಿತವಾಗಿ ಜಾಣ್ಮೆಯಿಂದ ಪರಿಹರಿಸಿಕೊಳ್ಳಿ.
ಕನ್ಯಾ
ಧಾರ್ಮಿಕ ನಾಯಕರಿಗೆ ಈ ದಿನ ಮರೆಯಲಾಗದ ಘಟನೆಯೊಂದು ಸುತ್ತಮುತ್ತಲಿನಲ್ಲಿ ನಡೆಯುವುದು. ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಧ್ಯವರ್ತಿಗಳ ಮಾತನ್ನು ನಿರ್ಲಕ್ಷಿಸುವುದು ಸಮಂಜಸವೆಂಬುವುದು ಅನಿಸಿಕೆ.
ತುಲಾ
ಆಲೋಚಿಸಿದಂತೆ ಕೆಲಸ ಕಾರ್ಯಗಳು ನಡೆಯದೇ ಸೋಲು, ಹಿನ್ನಡೆ ಎಂಬಂತೆ ನಿಮ್ಮ ಮನಸ್ಸಿಗೆ ಕಾಣಬಹುದು, ಆದರೆ ದೇವರ ಆಶೀರ್ವಾದ ನಿಮ್ಮ ಮೇಲಿರುವುದರಿಂದ ಕಾಲಕ್ಕೆ ಸರಿಯಾಗಿ ಕೆಲಸಗಳು ಪೂರ್ಣಗೊಳ್ಳುತ್ತದೆ.
ವೃಶ್ಚಿಕ
ಸಂಘ ಸಂಸ್ಥೆಗಳ ಸಭೆಗಳಲ್ಲಿ ನಿಮ್ಮ ಮಾತಿಗೆ ಬೆಲೆ ಇಲ್ಲದಂತೆ ಅಥವಾ ನಿಮ್ಮ ಮಾತನ್ನು ಅಪಾರ್ಥವಾಗಿ ಕಲ್ಪಿಸಿಕೊಂಡು ದೂಷಿಸುವಂತಹ ಘಟನೆಗಳು ಸಂಭವಿಸಬಹುದು. ಔಷಧಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು.
ಧನು
ಈ ದಿನದ ಕೆಲಸಕ್ಕೆ ಇನ್ನೊಂದು ಕೆಲಸ ಜೊತೆ ಜೊತೆಗೂಡಿ ಮುಕ್ತಾಯದ ಹಂತ ತಲುಪಲು ಸಾಧ್ಯವಾಗುವುದಿಲ್ಲ. ಈವರೆಗೂ ಕೂಡಿಟ್ಟ ಶ್ರಮದ ಠೇವಣಿ ಹಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸ ಬೇಕಾಗುವುದು.‌
ಮಕರ
ಸಹಾಯ ಹಸ್ತಗಳ ಮುಖಾಂತರವಾಗಿ ಅಪೂರ್ಣ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದು. ಜೀವಶಾಸ್ತ್ರದ ಶೈಕ್ಷಣಿಕ ರಂಗದಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಇಂದಿನ ದಿನವು ಯಶೋದಾಯಕವಾಗಿರುತ್ತದೆ.
ಕುಂಭ
ನಿಮ್ಮ ಸಕಾರಾತ್ಮಕ ಮನೋಭಾವವು ಕಳೆದು ಹೋದಂತಿದ್ದ ಕಲೆಯಲ್ಲಿನ ಆಸಕ್ತಿಯನ್ನು ಮತ್ತೆ ಮರುಕಳಿಸುವಂತೆ ಮಾಡುವುದು. ನೀವಾಡುವ ಮಾತುಗಳಿಂದ ಗೌರವವು ದೊರಕುವುದು.
ಮೀನ
ಅನೇಕ ದಿನಗಳಿಂದ ನೀವು ಸೇವಿಸುತ್ತಿರುವ ಅಪಥ್ಯದ ಆಹಾರದ ಪರಿಣಾಮವಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಿದೆ. ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ಹಲವು ಚಿಂತೆಗಳಿಗೆ ಉತ್ತರ ಸಿಗುವುದು.
ADVERTISEMENT
ADVERTISEMENT