ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ
Published 18 ಡಿಸೆಂಬರ್ 2023, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದು ನೀವು ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ಪಡೆಯುವಿರಿ. ಗಿಡಗಳ ನರ್ಸರಿ ಮಾಡುವವರಿಗೆ ಕೀಟ ಬಾಧೆ ಬಹಳ ಪ್ರಮಾಣದಲ್ಲಿ ಉಂಟಾಗುವುದು.
ವೃಷಭ
ದಿನಾಂತ್ಯದಲ್ಲಿ ಆಭರಣ ಅಥವಾ ಕಲಾವಸ್ತುಗಳನ್ನು ಖರೀದಿಸುವ ಮನಸ್ಸು ಬರಲಿದೆ. ನೆಮ್ಮದಿಯ ವಿಷಯವೇನೆಂದರೆ ಧನಾಗಮದಲ್ಲಿ ಚಿಂತೆ ಇರದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸೌಲಭ್ಯವಿರಲಿದೆ.
ಮಿಥುನ
ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಯಶಸ್ಸು ಪ್ರಾಪ್ತಿಯಾಗುವುದು. ತೀರ್ಥಯಾತ್ರೆ ಕೈಗೊಳ್ಳುವ ಬಗ್ಗೆ ಮನೆಯವರೊಡನೆ ಸಮಾಲೋಚನೆ ನಡೆಸಿ. ಆತ್ಮೀಯರ ಸಮಾಗಮವಾಗಲಿದೆ.
ಕರ್ಕಾಟಕ
ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸಹವರ್ತಿಗಳ ಅಭಿಪ್ರಾಯ ಪಡೆದುಕೊಳ್ಳಿ. ಎಲ್ಲ ಕಷ್ಟಗಳೂ ನಿವಾರಣೆಯಾಗಲಿವೆ. ಮನರಂಜನೆಗಾಗಿ ಕೆಲ ಸಮಯವನ್ನು ಕಳೆಯುವಂತಾಗಲಿದೆ.
ಸಿಂಹ
ಜೀವನದಲ್ಲಿ ಬೇರೆಯವರ ಹಿಡಿತದಿಂದ ಬಳಲಿರುವ ನಿಮಗೆ ಆ ಸಮಸ್ಯೆಯಿಂದ ಹೊರಬರುವ ಅವಕಾಶಗಳು ಎದುರಾಗುವುದು. ವ್ಯವಹಾರ ರಂಗದಲ್ಲಿ ಆತ್ಮೀಯರ ಸಲಹೆ ಸ್ವೀಕರಿಸಿ ನಷ್ಟವು ತೋರಿ ಬರುವುದು.
ಕನ್ಯಾ
ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ಸಿಗಲಿದೆ. ಮಾನಸಿಕ ಸ್ಥಿತಿ ಏರುಪೇರಾದ ಸಮಯದಲ್ಲಿ ಹಿರಿಯರ ಸಲಹೆ ಸಮಾಧಾನ ತರಲಿದೆ.
ತುಲಾ
ಮಕ್ಕಳ ಹೆಸರಿನಲ್ಲಿ ನಿವೇಶನ ಖರೀದಿಸುವ ಯೋಜನೆಯನ್ನು ಈ ದಿನ ಕಾರ್ಯರೂಪಕ್ಕೆ ತರಬಹುದು. ಹಣಕಾಸಿನ ವ್ಯವಹಾರ ನಡೆಸುವವರು ನೂತನ ಯೋಜನೆಗಳನ್ನು ವಿಸ್ತರಿಸಬಹುದು. ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ.
ವೃಶ್ಚಿಕ
ಸಹೋದ್ಯೋಗಿಗಳಲ್ಲಿ ಪ್ರೀತಿಯಿಂದ ವರ್ತಿಸುವುದರಿಂದ ನಿಮ್ಮ ಕೆಲಸ ಸರಾಗವಾಗಿ ಸಾಗಲಿದೆ. ದೇಹಾರೋಗ್ಯದ ಸಲುವಾಗಿ ಎಲ್ಲ ಕೆಲಸ ಬಿಟ್ಟು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ನಿಮಗೆ ಅನಿಸಲಿದೆ.
ಧನು
ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವುದು. ಸಹವರ್ತಿಗಳೊಡನೆ ಸಂಯಮದಿಂದ ವರ್ತಿಸಿ. ಬಂದ ಸಮಸ್ಯೆಗಳು ಆಂಜನೇಯನ ಅನುಗ್ರಹದಿಂದ ಸರಾಗವಾಗಿ ದೂರಾಗಲಿವೆ.
ಮಕರ
ಏರುಪೇರಾಗಿದ್ದ ನಿಮ್ಮ ವ್ಯಾಪಾರ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಸಿಗಲಿದೆ. ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು.
ಕುಂಭ
ಆರ್ಥಿಕವಾಗಿ ಲಾಭ ಪಡೆಯುವುದಕ್ಕೆ ಹೋರಾಟ ನೆಡೆಸಬೇಕಾಗುವ ಪರಿಸ್ಥಿತಿ ಎದುರಾಗಬಹುದು. ಈ ದಿನ ಯಾರಲ್ಲಿಯೂ ಯಾವ ವಿಚಾರವನ್ನೂ ಮುಚ್ಚಿಡಬೇಡಿ. ಕುಟುಂಬದವರ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.
ಮೀನ
ನೀವಿಂದು ಇನ್ನೊಬ್ಬರ ಅಧೀನದಿಂದ ಹೊರಬಂದು ಸ್ವತಂತ್ರ ಮನೋಭಾವದಿಂದ ಜೀವನವನ್ನು ನೆಡೆಸುವಂತಾಗಲಿದೆ. ನಿಮಗೆ ಒದಗಿಬರಲಿರುವ ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.