ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಖರ್ಚಿನ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ
Published 23 ಡಿಸೆಂಬರ್ 2023, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಿತರೊಂದಿಗಿನ ಕಳೆದುಕೊಂಡ ವಿಶ್ವಾಸವನ್ನು ಪುನಃ ಪಡೆದುಕೊಳ್ಳುವ ಅವಕಾಶವಿರಲಿದೆ. ಹಿರಿಯ ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿ. ಅಧ್ಯಯನಕ್ಕಾಗಿ ವಿದೇಶ ಪ್ರಯಾಣದ ಯೋಗವಿದೆ.
ವೃಷಭ
ಅತಿಯಾದ ಆಲಸ್ಯವು ನಿಮ್ಮ ಕೆಲಸಕ್ಕೆ ಅಡ್ಡಿಯನ್ನು ಮಾಡಲಿದೆ ಹಾಗೂ ಅದರ ಪರಿಣಾಮವಾಗಿ ಜನರ ಅಪಹಾಸ್ಯಕ್ಕೆ ಕಾರಣರಾಗುವಿರಿ. ಕ್ಯಾಟರಿಂಗ್ ನಡೆಸುವವರಿಗೆ ಬಿಡುವಿಲ್ಲದ ವಾತಾವರಣ ಎದುರಾಗುವುದು.
ಮಿಥುನ
ಸೋದರರು ನಿಮ್ಮ ಕೆಲಸದಲ್ಲಿ ದೈಹಿಕ ಹಾಗೂ ಆರ್ಥಿಕವಾಗಿ ಹೆಚ್ಚಿನ ನೆರವಿಗೆ ಬರಲಿದ್ದಾರೆ. ಸಾಹಸ ಕೃತ್ಯಗಳನ್ನು ಕೈಗೊಳ್ಳುವ ನಿಮ್ಮ ಮನೋಭಿಲಾಷೆ ಇಂದು ನಿಮ್ಮನ್ನು ಕಾಡಲಿದ್ದು ಅದಕ್ಕೆ ಪ್ರಯತ್ನಿಸುವಿರಿ.
ಕರ್ಕಾಟಕ
ವಿವಾದಾಸ್ಪದ ವಿಷಯಗಳ ಕಡೆ ಗಮನ ಕೊಡದೆ ನಿಮ್ಮ ಕೆಲಸಗಳನ್ನು ಮಾಡಿಕೊಂಡಲ್ಲಿ ಲಾಭ ದೊರಕುವುದು. ಮನೆಯ ನವೀಕರಣಗೊಳಿಸಲು ಮುಂದಾದ ವ್ಯಕ್ತಿಗಳು ವಾಸ್ತುಶಾಸ್ತ್ರದ ಬಗ್ಗೆ ಗಮನಹರಿಸಿ.
ಸಿಂಹ
ಕೆಲವೊಂದು ವಿಷಯಗಳನ್ನು ಹಾಗೂ ಅದರಿಂದಾಗುವ ಲಾಭ ನಷ್ಟಗಳ ಬಗ್ಗೆ ಪುನರವಲೋಕನವನ್ನು ಮಾಡುವುದು ಉತ್ತಮ. ತುರ್ತು ಕೆಲಸವಾದರೂ ಅವಸರವನ್ನು ಮಾಡಿಕೊಳ್ಳದೇ ಆಲೋಚಿಸಿ ಕೆಲಸವನ್ನು ನಿರ್ವಹಿಸಿ.
ಕನ್ಯಾ
ವಸ್ತ್ರಗಳ ಖರೀದಿಯಲ್ಲಿ ವಿಶೇಷ ರಿಯಾಯಿತಿ ಮಾರಾಟಗಳಿಂದ ಹೆಚ್ಚಿನ ಲಾಭ ಪಡೆಯುವಿರಿ. ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಿರಿ. ನಿಮ್ಮ ಮನದ ಇಚ್ಚೆ ಈಡೇರಲು ಲಕ್ಷ್ಮೀರಮಣನನ್ನು ಆರಾಧಿಸಿ.
ತುಲಾ
ನಿಮ್ಮ ಮಾತುಗಳಿಗೆ ವಿರುದ್ಧವಾದ ಮಾತನ್ನು ನಿಮ್ಮ ಮಕ್ಕಳಿಂದ ಕೇಳಬಹುದು. ನ್ಯಾಯಾಲಯದ ಕೆಲಸಗಳಲ್ಲಿ ಮುನ್ನಡೆಗಾಗಿ ಓಡಾಟ ನೆಡೆಸಬೇಕಾಗುತ್ತದೆ. ಖರ್ಚಿನ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ.
ವೃಶ್ಚಿಕ
ಜಮೀನಿನ ತಕರಾರು ವಿಷಯಗಳು ಇತ್ಯರ್ಥ ಗೊಳ್ಳುವುದು. ಕೆಲಸವು ಮೊದಲ ಪ್ರಯತ್ನದಲ್ಲೇ ಸಫಲವಾಗಿದ್ದರಿಂದ ಉತ್ಸಾಹ ಗರಿಗೆದರಲಿದೆ. ನಾಯಕತ್ವ ಹೊಂದಿರುವ ನಿಮಗೆ ಜನಬಲ ಕಡಿಮೆಯಾಗಲಿದೆ.
ಧನು
ಹೊಸ ಆಕಾಂಕ್ಷೆಗಳನ್ನು ಹಾಗೂ ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಂಡು ಬದುಕಿನಲ್ಲಿ ನಿಮ್ಮ ಮುಂದಿನ ಹೆಜ್ಜೆ ಇಡುವುದು ಉತ್ತಮ. ನಿಮ್ಮ ಮಕ್ಕಳ ನಡವಳಿಕೆಯಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು.
ಮಕರ
ಉದಾಸೀನತೆಯನ್ನು ದೂರ ಮಾಡುವುದರಿಂದ ಹೆಚ್ಚಿನ ಯಶಸ್ಸನ್ನು ಪಡೆಯಬಹುದು. ಅನಾರೋಗ್ಯದ ಪರಿಸ್ಥಿತಿಯಲ್ಲಿ ಸ್ವಂತ ನಿರ್ಧಾರದಿಂದ ಔಷಧಿಯನ್ನು ತೆಗೆದುಕೊಳ್ಳಬೇಡಿ. ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿದೆ.
ಕುಂಭ
ಮನೆಯವರ ವಿಚಾರದಲ್ಲಿ ದೃಢ ನಿಲುವು ತಾಳಬೇಕಾಗುವುದು. ಅರ್ಥಪೂರ್ಣ ಮಾತುಕತೆಗಳಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ಪಡೆಯುವಿರಿ. ಹಣದ ವಿಚಾರದಲ್ಲಿ ಮಿತವ್ಯಯಿಗಳಾಗಿರಿ.
ಮೀನ
ಕೆಲಸ ಆರಂಭಿಸುವ ಮುನ್ನ ಆಮೂಲಾಗ್ರ ಚಿಂತನೆ ಅಗತ್ಯ ಎಂಬುದು ತಿಳಿಯಲಿದೆ. ಯುವ ಕಲಾವಿದರಿಗೆ ಪ್ರೋತ್ಸಾಹ ಅವಕಾಶಗಳು ಲಭಿಸುವುದು. ಗೋ ಸೇವೆಯಿಂದ ನೆಮ್ಮದಿ ಸಂಪಾದಿಸಬಹುದು.