ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ನೂತನ ದಂಪತಿಗಳು ಸಂತಾನದ ಶುಭ ಸುದ್ದಿ ಕೇಳುವಿರಿ
Published 20 ಜೂನ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಷೇರುಗಳಲ್ಲಿ ಹೂಡಿಕೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಲಾಭದಾಯಕವಾಗಿ ತೋರುವುದಿಲ್ಲ. ಕೆಲಸಗಳನ್ನು ಸಾಧಿಸಿಕೊಳ್ಳಬೇಕಿದ್ದರೆ ಅವಿರತ ಶ್ರಮ ಅಗತ್ಯ. ದಿನದಲ್ಲಿ ಅಧಿಕ ಸಮಯ ಸಂತೋಷವಿರುವುದು.
ವೃಷಭ
ಸಮಸ್ಯೆಗಳು ಏನೇ ಇದ್ದರೂ ಸಮಾಧಾನವಾಗಿ ನಗು ಮೊಗದಿಂದ ವರ್ತಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಕಣ್ಣು, ಕಿವಿಗೆ ಸಂಬಂಧಿಸಿದಂತೆ ಆನಾರೋಗ್ಯ ಉಂಟಾದಲ್ಲಿ ವೈದ್ಯರನ್ನು ಭೇಟಿ ಮಾಡಿರಿ.
ಮಿಥುನ
ತವರು ಮನೆಯಲ್ಲಿನ ಜಗಳವು ಗಂಡನ ಮನೆಯಲ್ಲಿರುವ ನಿಮ್ಮ ಮನಶ್ಶಾಂತಿಯನ್ನು ಕೆಡಿಸುತ್ತದೆ. ಜಯದ ಜೊತೆಗೆ ನೆಮ್ಮದಿ ಕೂಡ ನಿಮ್ಮದಾಗುತ್ತದೆ. ಕುಟುಂಬದವರೊಡನೆ ಸಂತೋಷದಿಂದ ಕಾಲ ಕಳೆಯುವಂತಾಗಲಿದೆ.
ಕರ್ಕಾಟಕ
ಅದ್ಭುತವಾದ ಉಪನಿಷತ್ ವಾಕ್ಯಗಳ ಬಳಕೆಯನ್ನು ಮಾಡಿ ಪತ್ರಿಕೆಗೆ ಬರೆದ ಲೇಖನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವಿರಿ. ಹಣದ ವಿಷಯದಲ್ಲಿ ದಾಕ್ಷಿಣ್ಯದ ಮಾತುಗಳಿಗೆ ಮರುಳಾಗಬೇಡಿ.
ಸಿಂಹ
ಕಟ್ಟಡದ ಕಂಟ್ರಾಕ್ಟರ್‌ಗಳಿಗೆ ಕೆಲಸಗಾರರ ಕೊರತೆ ಕಾಣಲಿದೆ ಅಥವಾ ಪರಿಣಿತ ಕೆಲಸಗಾರರ ಗೈರುಹಾಜರಿಯಿಂದ ನಷ್ಟ ಸಂಭವಿಸುವುದು. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ.
ಕನ್ಯಾ
ಸ್ವಂತ ಊರಿನಲ್ಲಿ ಉತ್ತಮ ಸ್ಥಾನಮಾನದಿಂದಾಗಿ ಹೆಚ್ಚಿನ ಗೌರವ ದೊರೆಯುವುದು. ಎಣ್ಣೆಯಲ್ಲಿ ಕರಿದ ಖಾದ್ಯಗಳ ಸೇವನೆಯಿಂದ ಅನಾರೋಗ್ಯ ಎದುರಾಗಬಹುದು. ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರಲಿದೆ.
ತುಲಾ
ಆಹಾರದ ವ್ಯತ್ಯಾಸದಿಂದಾಗಿ ಚರ್ಮದಲ್ಲಿ ದಡಾರಗಳು ಅಥವಾ ತುರಿಕೆಯಂಥ ಕಾಯಿಲೆಗಳು ಉಂಟಾಗಬಹುದು. ಅನಿರೀಕ್ಷಿತವಾದರೂ ಬದುಕಿನಲ್ಲಿ ಒಳ್ಳೆಯ ಬೆಳವಣಿಗೆಗಳಾಗುವ ಲಕ್ಷಣಗಳು ಕಾಣುತ್ತಿವೆ.
ವೃಶ್ಚಿಕ
ಹವಾಮಾನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸವನ್ನು ಉಳಿಸಿಕೊಳ್ಳಲು ಸಾಹಸವನ್ನು ಮಾಡಬೇಕಾಗಬಹುದು. ಸಂಗೀತ ಕಚೇರಿ, ನೃತ್ಯಕಾರ್ಯಕ್ರಮ ನೀಡುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಲಿದೆ.
ಧನು
ಬಹಳ ದಿನಗಳಿಂದ ಅಪೇಕ್ಷಿಸಿದ ಯಾತ್ರೆಗೆ ಶುಭ ಮುಹೂರ್ತ ಸಿಗುವುದು. ಮನಸ್ಸಿನಲ್ಲಿ ನೋವಿದ್ದರೂ ಇತರರ ಎದುರು ನಗುಮೊಗದ ಮುಖವಾಡವನ್ನು ಧರಿಸಬೇಕಾಗುವಂತಹ ಪರಿಸ್ಥಿತಿ ನಿಮ್ಮದಾಗಾಗುತ್ತದೆ.
ಮಕರ
ಸ್ನೇಹಿತರ ಭರವಸೆಯ ಮಾತುಗಳು ಸೋಲುಗಳನ್ನು ಮೆಟ್ಟಿ ಆಶಾ ಭಾವನೆಯನ್ನು ತರುತ್ತದೆ. ಅನುಭವದ ಕೊರತೆಯಿಂದಾಗಿ ಕೆಲಸಗಳಲ್ಲಿ ವಿಳಂಬವಾಗಬಹುದು. ಈಶ್ವರನನ್ನು ಆರಾಧಿಸಿರಿ. ಶುಭವಾಗುತ್ತದೆ.
ಕುಂಭ
ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ನೂತನ ದಂಪತಿಗಳು ಸಂತಾನದ ಶುಭ ಸುದ್ದಿ ಕೇಳುವಿರಿ. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.
ಮೀನ
ಹತ್ತಿ ಬಟ್ಟೆಯ ತಯಾರಕರಿಗೆ ಹಾಗೂ ವ್ಯಾಪಾರಸ್ಥರಿಗೆ ಗ್ರಾಹಕರು ದೊರಕಲಿದ್ದಾರೆ. ಗುರುಗಳ ಮನಸ್ಸಿಗೆ ನೋವು ಉಂಟುಮಾಡುವಂಥ ಕೆಲಸವನ್ನು ಮಾಡದಿರಿ. ವಕೀಲೀ ವೃತ್ತಿಯವರಿಗೆ ಶುಭವಾಗುವುದು.