ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಪ್ರೀತಿಸುವವರ ಮಾರ್ಗದರ್ಶನ ದೊರೆಯಲಿದೆ
Published 31 ಜನವರಿ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರೀತಿಸುವವರ ಮಾರ್ಗದರ್ಶನ ಈ ದಿನ ದೊರೆಯಲಿದ್ದು ,ಹೊಸ ಚೈತನ್ಯ ತುಂಬಿಬರಲಿದೆ. ಆಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ನೇತ್ರ ಚಿಕಿತ್ಸಕರಿಗೆ ಅಧಿಕ ಲಾಭವಿರುವುದು.
ವೃಷಭ
ಹಲವು ಬಗೆಯ ಖರ್ಚು ವೆಚ್ಚಗಳನ್ನು ಮಾಡಬೇಕಾದರೂ ಆದಾಯದ ಹೊಸ ಮೂಲವೊಂದು ಕುಡಿಯೊಡೆದು ಲಾಭ ಬರುವುದರಿಂದ ಸಂತೋಷಗೊಳ್ಳುವಿರಿ. ಹೊಸ ಕೆಲಸಕ್ಕೆ ಪ್ರಯತ್ನಿಸಬಹುದು.
ಮಿಥುನ
ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರಗಳಲ್ಲಿ ಹೇಳುವ ಲಾಭವಿಲ್ಲದ್ದಿದ್ದರೂ ಹೆದರುವ ಅವಶ್ಯಕತೆ ಇರುವುದಿಲ್ಲ. ಅದು ತಾತ್ಕಾಲಿಕವಷ್ಟೇ. ಬದಲಾಗಿ ಪಾಲುದಾರಿಕೆಯಲ್ಲಿ ಲಾಭ ಗಳಿಸುವಿರಿ.
ಕರ್ಕಾಟಕ
ಹಿಡಿತಕ್ಕೆ ಸಿಕ್ಕಿರುವ ಕೆಲಸಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುವಲ್ಲಿ ಇಂದಿನ ಪ್ರಯತ್ನ ಯಶಸ್ಸನ್ನು ಉಂಟುಮಾಡುವುದು. ಗುರು ವಾಕ್ಯವನ್ನು ಅಕ್ಷರಶಃ ಪರಿಪಾಲನೆ ಮಾಡುವುದನ್ನು ಮರೆಯದಿರಿ.
ಸಿಂಹ
ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸುವುದರಿಂದ ಫಲಕಾರಿಯಾಗುತ್ತದೆ. ರೈತರಿಗೆ ಲಾಭ ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ಅಧಿಕ ಬೆಲೆ ಬರುತ್ತದೆ.
ಕನ್ಯಾ
ದಿನದ ಗುತ್ತಿಗೆಯಂಥ ಕೆಲಸದ ವೃತ್ತಿಯವರಿಗೆ ಆಕಸ್ಮಿಕ ರೀತಿಯಲ್ಲಿ ಉದ್ಯೋಗ ದೊರೆತು ಸಂತೋಷ. ಪ್ರಭಾವಿ ವ್ಯಕ್ತಿಯಿಂದ ನಿಮ್ಮ ಕಾರ್ಯಸಾಧನೆ ಹಾಗೂ ಸಾಮಾಜಿಕವಾಗಿ ಅನುಕೂಲ ಆಗಲಿದೆ.
ತುಲಾ
ಮೇಲಿದ್ದ ಆಪಾದನೆಗಳು ದೂರಾಗಿ, ಮೇಲಧಿಕಾರಿಗಳಿಂದ ಗೌರವವನ್ನು ಹಿಂತಿರುಗಿ ಪಡೆಯುವ ಸುದಿನ ಇದಾಗಲಿದೆ. ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನಾ ಪ್ರಸಂಗ ಇರಲಿದೆ.
ವೃಶ್ಚಿಕ
ಯೋಜನೆಗಳಲ್ಲಿ ಮುಂದಾಳತ್ವ ವಹಿಸಿ ಮತ್ತು ನಿಮ್ಮ ತಂಡ ಎದುರಿಸುತ್ತಿರುವ ಪ್ರಮುಖ ವಿಷಯಗಳ ತೊಂದರೆಯನ್ನು ನಿವಾರಣೆ ಮಾಡುವ ಸಾಮರ್ಥ್ಯ ಸಿಗಲಿದೆ. ಮಕ್ಕಳ ಆರೈಕೆಯ ಬಗ್ಗೆ ಅಧಿಕ ಗಮನವಿರಲಿ.
ಧನು
ಪರಮಾಪ್ತರ ಭೇಟಿ ಸಂಭವದಂಥ ಮನಸ್ಸಿಗೆ ಮುದ ನೀಡುವ ಸಂಗತಿಗಳು ನಡೆಯಲಿವೆ. ವರ್ತಕರಿಗೆ ಹೊಸ ವಸ್ತುಗಳ ವ್ಯಾಪಾರದಿಂದ ಲಾಭವಿರಲಿದೆ. ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲು ಇದು ಸೂಕ್ತ ಕಾಲ.
ಮಕರ
ಆಸೆ ಆಕಾಂಕ್ಷೆಗಳಿಗೆ ಅಥವಾ ಯೋಜನೆಗಳಿಗೆ ನಿಮ್ಮವರಿಂದಲೇ ಅಡ್ಡಿ ಎದುರಾಗಬಹುದು. ದಾಂಪತ್ಯ ಜೀವನದಲ್ಲಿ ತಾಳ್ಮೆ, ಹೊಂದಾಣಿಕೆಯಿಂದ ಮುಂದುವರಿಯಿರಿ. ಮಕ್ಕಳ ಖುಷಿಗಾಗಿ ಆಟಿಕೆಯ ವಸ್ತು ಕೊಳ್ಳುವಿರಿ.
ಕುಂಭ
ಆಲೋಚಿಸಿದ ರೀತಿಯಲ್ಲಿ ನಿಮ್ಮ ಕೆಲಸಗಳೆಲ್ಲವೂ ನಡೆದು ನೆಮ್ಮದಿ ಕಾಣುವಿರಿ. ಅವಶ್ಯಕತೆಗಿಂತ ಹೆಚ್ಚಾಗಿ ಖರ್ಚುಗಳನ್ನು ಮಾಡಬೇಡಿ. ಕೃಷಿ ಕ್ಷೇತ್ರದಲ್ಲಿನ ತುಸು ಚೇತರಿಕೆಯು ರೈತರಿಗೆ ನೆಮ್ಮದಿ ತರುವುದು.
ಮೀನ
ಸಹೋದರರಲ್ಲಿನ ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದು ತಂದೆಯವರ ಮಾತಿನಂತೆಯೇ ನಡೆಯಲು ಒ‍ಪ್ಪುವಿರಿ. ಸಾರ್ಥಕವಾದ ಕಾರ್ಯ ಮಾಡಿ ಮುಗಿಸಿದ ತೃಪ್ತಿ ತೋರಿಬರಲಿದೆ.