‘ಕಾಂತಿ ಸ್ವೀಟ್ಸ್’ ಬೆಂಗಳೂರಿನ ಪ್ರಮುಖ ಸಿಹಿ ತಿನಿಸು ಅಂಗಡಿಗಳಲ್ಲಿ ಒಂದಾಗಿದೆ. ನಗರದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲೊಂದು ಅಂಗಡಿ ಇದ್ದೆ ಇರುತ್ತದೆ. ಇದಕ್ಕೆ ಕಾರಣ ಅಲ್ಲಿ ಸಿಗುವ ಸ್ವಾದಿಷ್ಟ, ಗುಣಮಟ್ಟದ ಸಿಹಿ ತಿನಿಸುಗಳು. ಬಹುತೇಕ ಸಿಹಿ ತಿನಿಸು ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ಅತ್ಯಂತ ಮಹತ್ವದ್ದಾಗಿರುತ್ತವೆ.

ಈ ಪೈಕಿ ಅವುಗಳಲ್ಲಿ ಬಳಸುವ ಹಾಲು ಕೂಡಾ ಮಹತ್ವದ್ದಾಗಿದೆ. ಆ ಹಾಲಿನ ಮೂಲ ಬೆಂಗಳೂರಿನಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿರುವ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ.

ನಮ್ಮ ತಂದೆಯವರು ಬೆಂಗಳೂರಿನ ಹೆಸರಾಂತ ಕಾಮತ್ ಹೋಟೆಲ್ಗೆ ಹಾಲು ಪೂರೈಸುತ್ತಿದ್ದರು. ಬಳಿಕ ನಾವು ಅಡ್ಯಾರ್ ಆನಂದ ಭವನಕ್ಕೆ ಮಾರಾಟ ಮಾಡುತ್ತಿದ್ದೆವು. ಇದೀಗ ಕಳೆದ 16 ವರ್ಷದಿಂದ ಬೆಂಗಳೂರಿಗರ ಮನಸ್ಸಿನಲ್ಲಿ ಅಚ್ಚೊತ್ತಿರುವ ‘ಕಾಂತಿ ಸ್ವೀಟ್ಸ್’ನ 140 ಮಳಿಗೆಗಳಿಗೆ ಹಾಲು ಪೂರೈಸುತ್ತಿದ್ದೇವೆ -ಇದು ಜಂಗಮಕೋಟೆ ಬಳಿ ಇರುವ ನಾಯ್ಡು ಫಾರಂ ಮಾಲೀಕ ಗೋಪಾಲ್ ಅವರ ಮಾತು.

ಹೈನುಗಾರಿಕೆ ರೈತರ ಪ್ರಮುಖ ಉಪ ಕಸುಬು. ಹೈನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿರುವ ಹಲವಾರು ಕುಟುಂಬಗಳು ನಮ್ಮ ಕಣ್ಣ ಮುಂದಿವೆ. ಜತೆಗೆ, ನಮ್ಮ ಕುಟುಂಬ ಹಿಂದುತ್ವದ ಸಿದ್ಧಾಂತಕ್ಕೆ ಕಟಿಬದ್ಧವಾಗಿ ಗೋವುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ಡೈರಿ ಫಾರಂ ಆರಂಭಿಸಿದ್ದೇವೆ. ನಮ್ಮಲ್ಲಿ ಪ್ರತಿನಿತ್ಯ 1,000 ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ ಎನ್ನುತ್ತಾರೆ ಗೋಪಾಲ್ ನಾಯ್ಡು.

‘ಉದ್ಯೋಗಂ ಪುರುಷ ಲಕ್ಷಣಂ’ ಎಂಬಂತೆ ಪ್ರತಿಯೊಬ್ಬರು ಒಂದೊಂದು ಉದ್ಯೋಗ ಮಾಡಬೇಕು. ಅದರಂತೆಯೇ ಡೈರಿ ಫಾರಂ ಅನ್ನು ನಡೆಸುತ್ತಿದ್ದೇವೆ. ನಾವು ಎಮ್ಮೆ, ಹಸುಗಳನ್ನು ಲಾಭದ ಉದ್ದೇಶಕ್ಕೆ ತರುವುದಾಗಲಿ ಅಥವಾ ಮಾರಾಟ ಮಾಡುವುದಾಗಲಿ ಮಾಡುವುದಿಲ್ಲ. ಆದ್ದರಿಂದಲೇ ನಮ್ಮ ಡೈರಿ ಫಾರಂಗೆ ‘ಪುಣ್ಯಕೋಟಿ’ ಎಂದು ಹೆಸರಿಟ್ಟಿದ್ದೇವೆ ಎಂಬುದು ನಾಯ್ಡು ಅವರ ಮಾತು.

‘ನಾವು ಒಂದು ಎಕರೆ ಮೂರು ಗುಂಟೆ ಜಾಗದಲ್ಲಿ ಡೈರಿ ಫಾರಂ ಅನ್ನು ನಿರ್ಮಿಸಿದ್ದು, 140 ಎಮ್ಮೆಗಳು, ವಿವಿಧ ತಳಿಯ ಹಸುಗಳು ಸೇರಿದಂತೆ ಕುದುರೆ, ಕತ್ತೆ, ಮೇಕೆ, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿದ್ದೇವೆ. ರಾಜ್ಯದ ದೇಶಿಯ ತಳಿಯಾದ ಹಳ್ಳಿಕಾರ್, ಗುಜರಾತ್ನ ಸೌರಾಷ್ಟ್ರ ಮೂಲದ ಜಾಫ್ರಾಬಾದಿ, ಹರಿಯಾಣದ ಮುರ್ರಾ ಸೇರಿದಂತೆ ವಿವಿಧ ರಾಜ್ಯಗಳ 25ಕ್ಕೂ ಹೆಚ್ಚು ಎಮ್ಮೆ ತಳಿಗಳಿವೆ’ ಎಂದರು.

ಎಮ್ಮೆಗಳ ಸಂತಾನೋತ್ಪತ್ತಿಗಾಗಿ ₹2.15 ಲಕ್ಷ ಕೊಟ್ಟು ಗುಜರಾತ್ನಿಂದ ಜಾಫ್ರಾಬಾದಿ ತಳಿಯ ಕೋಣವನ್ನು ತಂದಿದ್ದೇವೆ. ಇದು ಶಿಡ್ಲಘಟ್ಟ ತಾಲೂಕಿನ ಜನರನ್ನು ಆಕರ್ಷಿಸುತ್ತಿದೆ. ದುಡ್ಡಿನ ಆಸೆಗಾಗಿ ಅಥವಾ ಯಾವುದೇ ಕಾರಣಕ್ಕೂ ಇದನ್ನು ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ನಾಯ್ಡು.

ಜವಾರಿ ಎಮ್ಮೆ ದಿನಕ್ಕೆ ಐದಾರು ಲೀಟರ್ ಹಾಲು ಕೊಟ್ಟರೆ, ಮುರ್ರಾ, ಜಾಫ್ರಾಬಾದಿ, ಮೋಳಿ ತಳಿ 15ರಿಂದ 18 ಲೀಟರ್ ಹಿಂಡುತ್ತವೆ. ಆ ರಾಸುಗಳ ಬೆಲೆಯೂ ₹1.50 ಲಕ್ಷದಿಂದ ₹2.50 ಲಕ್ಷ ಆಗಿದೆ. ಈ ಹಿಂದೆ ಸೌರಾಷ್ಟ್ರದಿಂದ ತಂದಿದ್ದ ‘ಜಾಫ್ರಾಬಾದಿ’ ಎಮ್ಮೆಯೊಂದನ್ನು ನಟಿ ರಕ್ಷಿತಾ ಪ್ರೇಮ್ ಅವರು ಖರೀದಿ ಮಾಡಿದ್ದರು. ಅವರಿಗೆ ಸಾಕಾಣಿಕೆ ಮಾಡಲು ಸಾಧ್ಯವಾಗದ ಕಾರಣಕ್ಕೆ ನಮಗೆ ಮಾರಾಟ ಮಾಡಿದರು ಎಂದು ಅವರು ವಿವರಿಸಿದರು.

ನಾವು ಕಳೆದ 60 ವರ್ಷಗಳಿಂದ ಗೋಧಿಯಿಂದ ತಯಾರಿಸಿದ ಹೋಟ್ಸ್ ಅನ್ನು ಎಮ್ಮೆಗಳಿಗೆ ಆಹಾರವಾಗಿ ನೀಡುತ್ತಿದ್ದೇವೆ. ಇದರಿಂದ ಎಮ್ಮೆಗಳಿಗೆ ಯಾವುದೇ ತೊಂದರೆ ಆಗಿಲ್ಲ. ಇದು ಪ್ರತಿ ಕೆ.ಜಿಗೆ ₹10 ಬೆಲೆ ಇದೆ. ಹೊಟ್ಟು ಬೂಸಾ ಹಾಕಿದರೆ 10 ಲೀಟರ್ ಹಾಲು ಬರುತ್ತದೆ. ಆದರೆ, ಹೋಟ್ಸ್ ಹಾಕುವುದರಿಂದ 14 ಲೀಟರ್ ಹಾಲು ಕೊಡುತ್ತದೆ. ಹೋಟ್ಸ್ ಹೊರತಾಗಿ ಲಕ್ಷ್ಮಿಪೀಡ್, ರವೆ ಬೋಸಾ ಮಿಶ್ರಣವಾಗಿ ನೀಡುತ್ತೇವೆ. ಒಂದು ಎಮ್ಮೆಗೆ 2 ಕೆ.ಜಿ ಲಕ್ಷ್ಮಿಪೀಡ್ ಜತೆಗೆ ಎಂಟು ಕೆ.ಜಿ ಹೋಟ್ಸ್ ಹಾಕುತ್ತೇವೆ ಎಂದು ನಾಯ್ಡು ತಿಳಿಸಿದರು.

ನಮ್ಮಲ್ಲಿ ಪ್ರತಿ ತಿಂಗಳು ಹತ್ತು ಲಾರಿ ಲೋಡ್ ಗೊಬ್ಬರ ಸಂಗ್ರಹ ಆಗುತ್ತದೆ. ಇದನ್ನು 1.20 ಲಕ್ಷದಂತೆ ಮಾರಾಟ ಮಾಡುತ್ತೇವೆ. ಪ್ರತಿನಿತ್ಯ ಎರಡು ಬಾರಿ ಶೆಡ್ ಅನ್ನು ಸ್ವಚ್ಛಗೊಳಿಸುತ್ತೇವೆ. ಎಮ್ಮೆ, ಹಸುಗಳನ್ನೂ ಎರಡು ಬಾರಿ ತೊಳೆಯುತ್ತೇವೆ ಎಂದು ಅವರು ಹೇಳಿದರು.

ಎಮ್ಮೆಗಳನ್ನು ತರುವುದಕ್ಕಾಗಿ ಗುಜರಾತ್, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಕುರಿ ಮೇಕೆಗಳನ್ನು ಸಹ ತರುವುದು ನಮಗೆ ಅಭ್ಯಾಸವಾಗಿದೆ. ಅದರಂತೆಯೇ ಕಾಶ್ಮೀರಿ ಮೇಕೆಗಳನ್ನು ತಂದಿದ್ದೇವೆ. ಜತೆಗೆ ನಾಟಿ ಮೇಕೆಗಳು, ಮಂಡ್ಯದಿಂದ ತಂದಂತಹ ಬನ್ನೂರು ಕುರಿಗಳನ್ನು ಸಾಕುತ್ತಿದ್ದೇವೆ. ಹಾಗೆಯೇ ವಿವಿಧ ಜಾತಿಯ ಕೋಳಿಗಳು ಇವೆ ಎನ್ನುತ್ತಾರೆ ನಾಯ್ಡು.

ಇತರರಿಗೂ ಮಾಹಿತಿ...

ಹೊಸದಾಗಿ ಡೈರಿ ಫಾರಂ ಆರಂಭಿಸಲು ಬಯಸುವವರು ಒಮ್ಮೆ ನಮ್ಮ ಫಾರಂಗೆ ಭೇಟಿ ನೀಡಬಹುದು. ಎಮ್ಮೆ, ಹಸು, ಕುರಿ, ಮೇಕೆ, ಕೋಳಿ ಸಾಕಾಣಿಕೆ ಕುರಿತಂತೆ ಅಗತ್ಯ ಮಾಹಿತಿ ನೀಡುತ್ತೇವೆ ಎಂದು ನಾಯ್ಡು ತಿಳಿಸಿದರು.

‘ರಾಜಣ್ಣ’ನ ಅಪ್ಪಟ ಅಭಿಮಾನಿ...

ನಾನು ಡಾ.ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಎಂದು ಹೇಳುವುದಕ್ಕೆ ಹೆಮ್ಮೆಪಡುತ್ತೇನೆ. ರಾಜಕುಮಾರ್ ಅವರ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಿದ್ದನ್ನು ಬಿಟ್ಟರೆ ಬೇರೆ ಯಾವ ನಟರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿಲ್ಲ. ಇವತ್ತಿಗೂ ಕೂಡ ರಾಜಕುಮಾರ್ ಅವರ ಚಿತ್ರಗಳನ್ನು ನೋಡಿದರೆ ನನ್ನ ಮೈ ಪುಳಕಿತವಾಗುತ್ತದೆ ಎಂದು ನಾಯ್ಡು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.